ನವದೆಹಲಿ: ಕೇಂದ್ರ ಸರ್ಕಾರ ಈಗ ಯುಜಿಸಿಯನ್ನು ರದ್ದುಗೊಳಿಸಿ ಅದರ ಬದಲಾಗಿ ಉನ್ನತ ಶಿಕ್ಷಣ ಆಯೋಗ ಸ್ಥಾಪಿಸುವ ಕ್ರಮಕ್ಕೆ ಮುಂದಾಗಿದೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಖಾತೆ ಸಚಿವ ಪ್ರಕಾಶ ಜಾವಡೆಕರ್ " ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಉನ್ನತ ಶಿಕ್ಷಣದಲ್ಲಿ ಸುಧಾರಣೆಯನ್ನು ತರುವ ನಿಟ್ಟಿನಲ್ಲಿ ಯುಜಿಸಿ ಕಾಯ್ದೆಯನ್ನು ತಿದ್ದುಪಡಿ ಮಾಡಿ ಉನ್ನತ ಶಿಕ್ಷಣ ಆಯೋಗವನ್ನು ಸ್ಥಾಪಿಸಲು ಸಿದ್ದವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
Under the leadership of PM @narendramodi has embarked on a process of reforms of the regulatory agencies for better administration of the HE sector. In a landmark decision, a draft Act for repeal of #UGC & setting up #HECI (Higher Education Commission of India) has been prepared.
— Prakash Javadekar (@PrakashJavdekar) June 27, 2018
ಸರ್ಕಾರದ ಪ್ರಸ್ತಾಪದಂತೆ ನೂತನ ಕಾಯ್ದೆಯು "ಉನ್ನತ ಶಿಕ್ಷಣ ಆಯೋಗದ ಕಾಯ್ದೆ 2018' ಎಂದು ಹೆಸರಿಸಲಾಗಿದೆ.ಒಂದು ವೇಳೆ ಇದು ಜಾರಿಗೆ ಬಂದದ್ದೆ ಆದಲ್ಲಿ ಯೋಜನಾ ಆಯೋಗವನ್ನು ನೀತಿ ಆಯೋಗವನ್ನಾಗಿ ಬದಲಾವಣೆ ಮಾಡಿದಂತೆ ಈ ಬದಲಾವಣೆಯೂ ಆಗಲಿದೆ ಎಂದು ತಿಳಿದುಬಂದಿದೆ.ಆದ್ದರಿಂದ ಈಗ ಸರ್ಕಾರ ಶಿಕ್ಷಣ ತಜ್ಞರ ಅಭಿಪ್ರಾಯವನ್ನು ಸರ್ಕಾರಕ್ಕೆ ಜುಲೈ 7 ರ ಒಳಗೆ ತಿಳಿಸಬೇಕು ಎಂದು ತಿಳಿಸಿದೆ.
ಸಧ್ಯ ಯುಜಿಸಿ ಎಲ್ಲ ವಿಶ್ವವಿಧ್ಯಾನಿಳಯಗಳಿಗೆ ಉನ್ನತ ಶಿಕ್ಷಣಕ್ಕಾಗಿ ಧನ ಸಹಾಯವನ್ನು ನೀಡುವ ಸಂಸ್ಥೆಯಾಗಿದೆ.