ಭಾರತದ ರಸ್ತೆಗಳಲ್ಲಿ ದಿನನಿತ್ಯ 56 ಪಾದಚಾರಿಗಳ ಮರಣ: ಮಾಹಿತಿ

ಸರ್ಕಾರಿ ಅಂಕಿಅಂಶಗಳ ಪ್ರಕಾರ, ರಸ್ತೆ ಅಪಘಾತದಲ್ಲಿ ಸಾಯುತ್ತಿರುವ ಪಾದಚಾರಿಗಳ ಸಂಖ್ಯೆ 2014 ರಿಂದ 2017 ಕ್ಕೆ 66% ಹೆಚ್ಚಾಗಿದೆ.

Last Updated : Oct 1, 2018, 02:37 PM IST
ಭಾರತದ ರಸ್ತೆಗಳಲ್ಲಿ ದಿನನಿತ್ಯ 56 ಪಾದಚಾರಿಗಳ ಮರಣ: ಮಾಹಿತಿ title=
File Image

ನವದೆಹಲಿ: ಭಾರತದ ರಸ್ತೆಗಳಲ್ಲಿ ದಿನನಿತ್ಯ 56 ಪಾದಚಾರಿಗಳು ಮರಣ ಹೊಂದುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಬಹಿರಂಗಗೊಂಡಿದೆ. ಪಾದಚಾರಿಗಳಿಗೆ ಭಾರತದ ರಸ್ತೆಗಳು ಸಾವಿನ ಮಾರ್ಗವೆಂದು ಸಾಬೀತಾಗಿದೆ. ನೀವು ಸರ್ಕಾರಿ ಅಂಕಿಅಂಶಗಳನ್ನು ನೋಡಿದರೆ, 2017 ರಲ್ಲಿ ದೇಶಾದ್ಯಂತ ಪ್ರತಿ ದಿನ 56 ಮಂದಿ ಪಾದಚಾರಿಗಳು ಸಾವನ್ನಪ್ಪಿದ್ದಾರೆ. ಅಂಕಿಅಂಶಗಳ ಪ್ರಕಾರ, ರಸ್ತೆ ಅಪಘಾತದಲ್ಲಿ ಸಾಯುತ್ತಿರುವ ಪಾದಚಾರಿಗಳ ಸಂಖ್ಯೆ 2014 ರಿಂದ 2017 ಕ್ಕೆ 66% ಹೆಚ್ಚಾಗಿದೆ. 2014 ರಲ್ಲಿ ರಸ್ತೆ ಅಪಘಾತದಲ್ಲಿ 12,330 ಪಾದಚಾರಿಗಳು ಮೃತಪಟ್ಟಿದ್ದರು. 2017 ರಲ್ಲಿ, ಇದರ ಸಂಖ್ಯೆ 20,457 ಕ್ಕೆ ಏರಿಕೆಯಾಗಿದೆ.

ದೇಶದ ಬೀದಿಗಳಲ್ಲಿ ಪಾದಚಾರಿಗಳ ದೈನಂದಿನ ಜೀವನವು ಅತಿ ಹೆಚ್ಚಿನ ಅಪಾಯಕಾರಿಯಾಗಿದೆ. ರಸ್ತೆಯ ಅಪಘಾತ ಇದ್ದಾಗಲೆಲ್ಲಾ ಹೆಚ್ಚಿನ ಪಾದಚಾರಿಗಳು ಸಿಕ್ಕಿಹಾಕಿಕೊಳ್ಳುತ್ತಾರೆ. ಈ ಪಟ್ಟಿಯಲ್ಲಿ ಬೈಸಿಕಲ್ಗಳು ಮತ್ತು ದ್ವಿಚಕ್ರ ವಾಹನಗಳನ್ನು ನಡೆಸುವವರು ಸಹ ಇರುತ್ತಾರೆ. ನೀವು 2017 ರ ಅಧಿಕೃತ ಅಂಕಿಅಂಶಗಳನ್ನು ನೋಡಿದರೆ ಪರಿಸ್ಥಿತಿಯು ಆಘಾತಕಾರಿಯಾಗಿದೆ. ಕಳೆದ ವರ್ಷ 133 ದ್ವಿಚಕ್ರ ವಾಹನಗಳು ಮತ್ತು 10 ಸೈಕ್ಲಿಸ್ಟ್ಗಳು ದೇಶದ ಈ ಘೋರ ರಸ್ತೆಗಳಲ್ಲಿ ಮೃತಪಟ್ಟಿದ್ದಾರೆ.

ದೇಶದ ಬೀದಿಗಳಲ್ಲಿ ಸಾವನ್ನಪ್ಪುವ ಪಾದಚಾರಿಗಳ ಸಂಖ್ಯೆಯಲ್ಲಿ ತಮಿಳುನಾಡು ಅಗ್ರಸ್ಥಾನದಲ್ಲಿದೆ. 2017 ರಲ್ಲಿ ರಸ್ತೆ ಅಪಘಾತದಲ್ಲಿ 3,507 ಕ್ಕೂ ಹೆಚ್ಚು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಮಹಾರಾಷ್ಟ್ರ ಎರಡನೆಯ ಸ್ಥಾನದಲ್ಲಿದೆ. ಇಲ್ಲಿ 1,831 ಜನರು ಮೃತಪಟ್ಟಿದ್ದರು. ಮೂರನೆಯ ಸ್ಥಾನದಲ್ಲಿರುವ ಆಂಧ್ರ ಪ್ರದೇಶವು 1,379 ಜನರನ್ನು ಈ ರೀತಿಯ ಅಪಘಾತದಲ್ಲಿ ಕಳೆದುಕೊಂಡಿದೆ. 

ಅಲ್ಲದೆ 2017 ರಲ್ಲಿ, ತಮಿಳುನಾಡಿನಲ್ಲಿ 6,329 ದ್ವಿಚಕ್ರ ವಾಹನ ಸವಾರರು ಮರಣಹೊಂದಿದರು.  ಉತ್ತರ ಪ್ರದೇಶದಲ್ಲಿ 5,699 ದ್ವಿಚಕ್ರ ವಾಹನ ಸವಾರರು ಸಾವನ್ನಪ್ಪಿದ್ದು, ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದೆ. ಅಂತೆಯೇ ಮಹಾರಾಷ್ಟ್ರದಲ್ಲಿ 4,659 ದ್ವಿಚಕ್ರ ವಾಹನ ಸವಾರರು ಅಪಘಾತದಲ್ಲಿ ಮರಣ ಹೊಂದಿದ್ದು ಅದು ಮೂರನೇ ಸ್ಥಾನದಲ್ಲಿದೆ.
 

Trending News