Good News: ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದ ಗಿಫ್ಟ್! ಈ ನೌಕರರಿಗೆ ಸಿಗಲಿದೆ 30 ದಿನಗಳ Diwali Bonus

Diwali Bonus - ಕೇಂದ್ರ ಅರೆಸೇನಾ ಪಡೆಗಳು ಮತ್ತು ಸಶಸ್ತ್ರ ಪಡೆಗಳ ಅರ್ಹ ಉದ್ಯೋಗಿಗಳಿಗೆ ದೀಪಾವಳಿ ಬೋನಸ್‌ನ ಪ್ರಯೋಜನವನ್ನು ನೀಡಲಾಗುವುದು ಎಂದು ಹಣಕಾಸು ಸಚಿವಾಲಯ (Finance Ministry) ಹೇಳಿದೆ. ಬೋನಸ್ (Diwali Bonus) ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ತಿಳಿಯೋಣ ಬನ್ನಿ,

Written by - Nitin Tabib | Last Updated : Oct 19, 2021, 07:35 PM IST
  • ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದ ಗಿಫ್ಟ್!
  • ಈ ನೌಕರರಿಗೆ ಸಿಗಲಿದೆ 30 ದಿನಗಳ Diwali Bonus
  • ಈ ಬೋನಸ್ ಹೇಗೆ ಲೆಕ್ಕ ಹಾಕಲಾಗುತ್ತದೆ ತಿಳಿಯಲು ಸುದ್ದಿ ಓದಿ
Good News: ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದ ಗಿಫ್ಟ್! ಈ ನೌಕರರಿಗೆ ಸಿಗಲಿದೆ 30 ದಿನಗಳ Diwali Bonus title=
Non-Productivity Linked Bonus (File Photo)

ನವದೆಹಲಿ:  Diwali Bonus - ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು (Modi Government) ಕೆಲವು ಕೇಂದ್ರ ಉದ್ಯೋಗಿಗಳಿಗೆ ದೀಪಾವಳಿಯಲ್ಲಿ (Diwali 2021) ಬೋನಸ್   (Diwali Bonus) ಉಡುಗೊರೆಯಾಗಿ ನೀಡಲಿದೆ. ಅರೆಸೇನಾ ಪಡೆಗಳಿಗೆ 30 ದಿನಗಳ ದೀಪಾವಳಿ ಬೋನಸ್ ನೀಡಲಾಗುವುದು ಎಂದು ಹಣಕಾಸು ಸಚಿವಾಲಯ (Ministry of Finance) ಹೇಳಿದೆ. ಕೇಂದ್ರ ಸರ್ಕಾರಿ ನೌಕರರಿಗೆ (Central Government Employees) 30 ದಿನಗಳ ವೇತನಕ್ಕೆ ಸಮನಾದ ನಾನ್ ಪ್ರೊಡಕ್ಟಿವಿಟಿ ಲಿಂಕ್ಡ್ ಬೋನಸ್ (Non-Productivity Linked Bonus) ನೀಡಲು ಅನುಮೋದಿಸಲಾಗಿದೆ. ಕೇಂದ್ರ ಸರ್ಕಾರದ ಗ್ರೂಪ್-ಸಿ ಮತ್ತು ಗ್ರೂಪ್-ಬಿ ಯ ಎಲ್ಲ ಗೆಜೆಟೆಡ್ ಅಲ್ಲದ ಉದ್ಯೋಗಿಗಳಿಗೆ ಇದರ ಲಾಭ ಸಿಗಲಿದೆ. ಅವರು ಯಾವುದೇ ಪ್ರೊಡಕ್ಟಿವಿಟಿ  ಲಿಂಕ್ಡ್ ಬೋನಸ್ ಸ್ಕೀಮ್ ವ್ಯಾಪ್ತಿಗೆ ಬರುವುದಿಲ್ಲ. 

ಬೋನಸ್ ಪಡೆಯಲು ಈ ಷರತ್ತುಗಳನ್ನು ಪೂರೈಸಬೇಕು
ಹಣಕಾಸು ಸಚಿವಾಲಯದ ಪ್ರಕಾರ, ಕೇಂದ್ರ ಅರೆಸೇನಾ ಪಡೆಗಳು ಮತ್ತು ಸಶಸ್ತ್ರ ಪಡೆಗಳ ಅರ್ಹ ಉದ್ಯೋಗಿಗಳಿಗೆ ಅಡ್ಹೋಕ್ ಬೋನಸ್ ಲಾಭವನ್ನು ನೀಡಲಾಗುವುದು ಎನ್ನಲಾಗಿದೆ. ಇದರ ಹೊರತಾಗಿ ಕೇಂದ್ರಾಡಳಿತ ಪ್ರದೇಶಗಳ ಉದ್ಯೋಗಿಗಳು ಕೂಡ ಇದರ ಲಾಭವನ್ನು ಪಡೆಯಲಿದ್ದಾರೆ. ಅವರು ಕೇಂದ್ರ ಸರ್ಕಾರದ Emoluments ಮಾದರಿಯನ್ನು ಅನುಸರಿಸುತ್ತಾರೆ ಮತ್ತು ಕೇಂದ್ರ ಸರ್ಕಾರದ ಯಾವುದೇ ಇತರ ಬೋನಸ್‌ಗೆ ಒಳಪಡುವುದಿಲ್ಲ. ಅಡ್ಹೋಕ್ ಬೋನಸ್‌ನ ಪ್ರಯೋಜನವು 31 ನೇ ಮಾರ್ಚ್ 2021 ರ ವೇಳೆಗೆ ಸೇವೆಯಲ್ಲಿರುವ ಮತ್ತು 2020-21 ವರ್ಷದಲ್ಲಿ ಕನಿಷ್ಠ ಆರು ತಿಂಗಳ ಕಾಲ ನಿರಂತರ ಸೇವೆ ಸಲ್ಲಿಸಿರುವ ಉದ್ಯೋಗಿಗಳಿಗೆ ಮಾತ್ರ ಲಭ್ಯವಿರುತ್ತದೆ. ಇದರಲ್ಲಿ, 6 ತಿಂಗಳಿಂದ ಒಂದು ವರ್ಷದವರೆಗೆ ಕೆಲಸ ಮಾಡುವ ಉದ್ಯೋಗಿಗಳಿಗೆ ಅದೇ ಅನುಪಾತದಲ್ಲಿ ಬೋನಸ್ ನೀಡಲಾಗುತ್ತದೆ.

ಈ ರೀತಿ ದೀಪಾವಳಿ ಬೋನಸ್ ಲೆಕ್ಕ ಹಾಕಲಾಗುತ್ತದೆ
>> ಒಂದು ವರ್ಷದಲ್ಲಿ ಬರುವ ಸರಾಸರಿ ದಿನಗಳ ಸಂಖ್ಯೆಯನ್ನು ಒಂದು ತಿಂಗಳಿನ ಸರಾಸರಿ ಸಂಖ್ಯೆ 30.4  ರಿಂದ ಭಾಗಿಸಬೇಕು.  ಉದಾಹರಣೆಗೆ ರೂ 7000 ಮೇಲೆ 7000 × 30/30.4 = ರೂ 6907.89 ಆಗಿರುತ್ತದೆ.

ಇದನ್ನೂ ಓದಿ-Online Shopping ನಲ್ಲಿ ಮೋಸ ಹೋದ್ರಾ? 10 ದಿನಗಳಲ್ಲಿ ವಾಪಸ್ ಬರಲಿದೆ ನಿಮ್ಮ ಹಣ, ಇಲ್ಲಿ ದೂರು ನೀಡಿ

ವಾರದ ಏಳುದಿನಗಳ ಅಡಿ ಕಚೇರಿಯಲ್ಲಿ 3 ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ಮತ್ತು ಪ್ರತಿವರ್ಷ ಕನಿಷ್ಠ 240 ದಿನ ಕೇಳದ ಮಾಡಿರುವ ಕ್ಯಾಶುವಲ್ ಲೇಬರ್ ಗಳಿಗೆ ಈ ಲಾಭ ಸಿಗಲಿದೆ. ಅವರ ಅಡ್ಹಾಕ್ ಬೋನಸ್ 1200×30/30.4 = 1184.21 ಆಗಲಿದೆ.

ಇದನ್ನೂ ಓದಿ-Big News:ಬಂದೆ ಬಿಟ್ತು ನಿಮ್ಮ PF ಖಾತೆಗೆ ಬಡ್ಡಿ ಹಣ, ಈ ರೀತಿ ಪರಿಶೀಲಿಸಿ ಹಾಗೂ e-statement ಡೌನ್ಲೋಡ್ ಮಾಡಿ

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರಿ ನೌಕರರಿಗೆ ಹಲವು ಘೋಷಣೆಗಳನ್ನು ಮಾಡಲಾಗಿದೆ 
ಹಬ್ಬದ ಋತುವಿನಲ್ಲಿ  ಕೇಂದ್ರ ಸರ್ಕಾರಿ ನೌಕರರ DA ಮತ್ತು DR ಮತ್ತೆ ಶೇ.3ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಇದರೊಂದಿಗೆ, ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಡಿಎ ಮತ್ತು ಡಿಆರ್ ಮೂಲ ಸಂಬಳದ 28 ಶೇಕಡದಿಂದ 31 ಪ್ರತಿಶತಕ್ಕೆ ಹೆಚ್ಚಾಗಲಿದೆ. ಡಿಎ ಮತ್ತು ಡಿಆರ್ ಹೆಚ್ಚಳದ ಹೊರತಾಗಿ, ಕೇಂದ್ರ ಸರ್ಕಾರಿ ಉದ್ಯೋಗಿಗಳು ಕೆಲವು ಇತರ ಪ್ರಯೋಜನಗಳನ್ನು ಸಹ ಪಡೆಯಲಿದ್ದಾರೆ. ಅವುಗಳ ಕುರಿತು ಇತ್ತೀಚೆಗಷ್ಟೇ  ಘೋಷಣೆ ಮಾಡಲಾಗಿದೆ. ಕೇಂದ್ರ ನೌಕರರ ಕುಟುಂಬ ಪಿಂಚಣಿಯ ಮಿತಿಯನ್ನು ರೂ 45000 ರಿಂದ ರೂ 1.25 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಮೃತ ನೌಕರರ ಕುಟುಂಬಗಳಿಗೆ ಸಹಾಯ ಮಾಡಲು ಮತ್ತು ಅವರಿಗೆ ಸಾಕಷ್ಟು ಆರ್ಥಿಕ ನೆರವು ನೀಡಲು ಕೇಂದ್ರವು ಈ ಕ್ರಮ ಕೈಗೊಂಡಿದೆ.

ಇದನ್ನೂ ಓದಿ-ನಿಮ್ಮ ಬಳಿಯೂ ಒಂದು ರೂಪಾಯಿಯ ಇಂಥಹ ನಾಣ್ಯ ಇದ್ದರೆ ಸಿಗಲಿದೆ 10 ಕೋಟಿ ರೂಪಾಯಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News