ನವದೆಹಲಿ: ನಿಮಗೆ IUC ಟಾಪ್ ಆಪ್ ವೌಚರ್ ಗಳ ಕುರಿತು ತಿಳಿದಿದೆಯೇ? ಇವುಗಳ ಲಾಭದ ಕುರಿತು ನಿಮಗೆ ತಿಳಿದಿದೆಯೇ? IUC ಟಾಪ್ ಅಪ್ ವೌಚರ್ ಗಳನ್ನು ಬಳಸಿ ನೀವೂ ಕೂಡ ಲಾಭ ಪಡೆಯಬಹುದಾಗಿದೆ. ಒಂದು ವೇಳೆ ನಿಮಗೆ IUC ಟಾಪ್ ಅಪ್ ವೌಚರ್ ಗಳ ಕುರಿತು ಮಾಹಿತಿ ಇರದೇ ಇದ್ದರೆ ಈ ಲೇಖನವನ್ನು ಸಂಪೂರ್ಣ ಓದಿ.
ಏನಿದು IUC ಟಾಪ್ ಅಪ್ ವೌಚರ್
IUC ಅಂದರೆ ಇಂಟರ್ ಕನೆಕ್ಟ್ ಯುಸೆಜ್ ಚಾರ್ಜ್ ಸಹಾಯದಿಂದ ನೀವು ನಿಮ್ಮ ಮೊಬೈಲ್ ನೆಟ್ವರ್ಕ್ ಮೂಲಕ ಯಾವುದೇ ಬೇರೆ ನೆಟ್ವರ್ಕ್ ಗಳಿಗೆ ಮೇಲೆ ಮಾತನಾಡಬಹುದು. ಕಳೆದ ವರ್ಷವಷ್ಟೇ ರಿಲಯನ್ಸ್ ಜಿಯೋ ಕೂಡ ತನ್ನ ಎಲ್ಲ ಟಾಪ್ ಅಪ್ ಪ್ಲಾನ್ ಗಳನ್ನು IUCಗೆ ಪರಿವರ್ತಿಸಿದೆ. ರಿಲಯನ್ಸ್ ಜಿಯೋದ ಈ ಆಫರ್ ಅಡಿ ಜಿಯೋ to ಜಿಯೋ ಉಚಿತ ಕರೆಗಳನ್ನು ಮಾಡಬಹುದಾಗಿದೆ. ಇನ್ನೊಂದೆಡೆ ಜಿಯೋನಿಂದ ಇತರೆ ನೆಟ್ವರ್ಕ್ ಗಳ ಜೊತೆಗೆ IUC ಸಹಾಯದಿಂದ ಮಾತುಕತೆ ನಡೆಸಬಹುದಾಗಿದೆ.
ಯಾವುದೇ ಓರ್ವ ವ್ಯಕ್ತಿ ತನ್ನ ಜಿಯೋ ನಂಬರ್ ಮೂಲಕ ಇತರೆ ನೆಟ್ವರ್ಕ್ ನಂಬರ್ ಗೆ ಕರೆ ಮಾಡಿದರೆ ಪ್ರತಿ ನಿಮಿಷಕ್ಕೆ 6 ಪೈಸೆ ನೀಡಬೇಕು. ಉದಾಹರಣೆಗೆ ನೀವು ನಿಮ್ಮ ಜಿಯೋ ನಂಬರ್ ನಿಂದ ವೊಡಾಫೋನ್ ನಂಬರ್ ಗೆ ಕರೆ ಮಾಡಿದರೆ ನಿಮ್ಮ ಖಾತೆಯಿಂದ 6 ಪೈಸೆ ಕಡಿತವಾಗಲಿದೆ. ಸೆಪ್ಟೆಂಬರ್ 2017ರವರೆಗೆ IUCಯ ಪ್ರತಿ ನಿಮಿಷಕ್ಕೆ 14 ಪೈಸೆ ನಿಗದಿಯಾಗಿತ್ತು. ಆದರೆ, ಬಳಿಕ TRAI ಇದನ್ನು ಪ್ರತಿ ನಿಮಿಷಕ್ಕೆ 6 ಪೈಸೆ ನಿಗದಿಪಡಿಸಿದೆ.
IUC ಯಿಂದ ನಿಮಗೆ ಲಾಭವೇನು?
IUC ಟಾಪ್ ಅಪ್ ವೌಚರ್ ಗಳವಿಶೇಷತೆ ಏನೆಂದರೆ ಇವೆಲ್ಲವೂ ಕೂಡ ಅನ್ ಲಿಮಿಟೆಡ್ ವ್ಯಾಲಿಡಿಟಿಗಳೊಂದಿಗೆ ಬರುತ್ತವೆ. ಜೊತೆಗೆ ಇವುಗಳ ಜೊತೆ ಸಿಗುವ ಎಲ್ಲ ಬೆನಿಫಿಟ್ ಗಳಿಗೂ ಕೂಡ ಯಾವುದೇ ಲಿಮಿಟ್ ಇಲ್ಲ. ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಒಟ್ಟು 6 IUC ಟಾಪ್ ಅಪ್ ವೌಚರ್ ಗಳ ಆಫರ್ ನೀಡುತ್ತದೆ. ಈ ಎಲ್ಲ ವೌಚರ್ ಗಳ ಬೆಲೆಯನ್ನು ರೂ.10ರಿಂದ ರೂ.1000 ವರೆಗೆ ನಿಗದಿಪಡಿಸಲಾಗಿದೆ.
10 ರೂ.ಗಳ IUC ಟಾಪ್ ಆಪ್ ನಲ್ಲಿ 1GB 4G ಡೇಟಾ ಹಾಗೂ 7.47 ರೂ. ಟಾಕ್ ಟೈಮ್ ಜೊತೆಗೆ 124 IUC ಮಿನಿಟ್ ಗಳನ್ನು ನೀಡಲಾಗುತ್ತದೆ. ಆದರೆ, ಜಿಯೋನ ಕೆಲ ಪ್ರಿಪೇಡ್ ಪ್ಲಾನ್ಸ್ ಗಳಲ್ಲಿ IUC ಮಿನಿಟ್ ಗಳನ್ನು ನೀಡಲಾಗುವುದಿಲ್ಲ. ಹೀಗಾಗಿ ಜಿಯೋನಿಂದ ಇತರೆ ನೆಟ್ವರ್ಕ್ ಗಳಿಗೆ ಕರೆ ಮಾಡಲು ರೂ.10ಗಳ IUC ಟಾಪ್ ಅಪ್ ವೌಚರ್ ಒಂದು ಉತ್ತಮ ಆಯ್ಕೆಯಾಗಿದೆ.
ಇದೆ ರೀತಿ ಜಿಯೋನ ರೂ.20, ರೂ.50, ರೂ.100 , ರೂ.500 ಹಾಗೂ ರೂ.1000 IUC ಟಾಪ್ ಅಪ್ ವೌಚರ್ ಗಳ ಮೇಲೂ ಕೂಡ ಈ ಸೌಕರ್ಯ ಲಭ್ಯವಿರಲಿದೆ.