JIO SERVICE UPDATE: ತನ್ನ ಗ್ರಾಹಕರಿಗೆ ಬಂಬಾಟ್ ಸುದ್ದಿ ಪ್ರಕಟಿಸಿದ ರಿಲಯನ್ಸ್ ಜಿಯೋ

ಕಳೆದ ಡಿಸೆಂಬರ್ 2019ರಲ್ಲಿ ಭಾರತಿ ಏರ್ಟೆಲ್ ಕೂಡ ತನ್ನ ಈ ಸೇವೆಗೆ ಚಾಲನೆ ನೀಡಿತ್ತು.

Last Updated : Jan 13, 2020, 08:42 PM IST
JIO SERVICE UPDATE: ತನ್ನ ಗ್ರಾಹಕರಿಗೆ ಬಂಬಾಟ್ ಸುದ್ದಿ ಪ್ರಕಟಿಸಿದ ರಿಲಯನ್ಸ್ ಜಿಯೋ title=

ನವದೆಹಲಿ: ರಿಲಯನ್ಸ್ ಜಿಯೋ ವಾಯ್ಸ್ ಓವರ್ ವೈ-ಫೈ ಕರೆ ಸೇವೆಯನ್ನು  ಪ್ರಾರಂಭಿಸಿದೆ ಅಂದರೆ ವೈ-ಫೈ ಕರೆ ಸೇವೆ. ಪ್ರಸ್ತುತ ದೆಹಲಿ-ಎನ್‌ಸಿಆರ್ ಸೇರಿದಂತೆ ಅನೇಕ ಟೆಲಿಕಾಂ ವಲಯಗಳಲ್ಲಿ ಈ ಸೇವೆ ಆರಂಭಿಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಭಾರ್ತಿ ಏರ್ಟೆಲ್ ಈಗಾಗಲೇ ಈ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ಕಲ್ಪಿಸಿದ್ದು, ಇದನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಈ ಸೇವೆಯನ್ನು ಬಿಡುಗಡೆ ಮಾಡಿದೆ.

ಪ್ರಸ್ತುತ ಸ್ಯಾಮ್ಸಂಗ ಮತ್ತು ಆಪಲ್ ಸ್ಮಾರ್ಟ್ ಫೋನ್ ಗಳಲ್ಲಿ ಮಾತ್ರ ಈ ಸೇವೆ
ಪ್ರಸ್ತುತ ಸ್ಯಾಮ್‌ಸಂಗ್ ಮತ್ತು ಆಪಲ್ ಸ್ಮಾರ್ಟ್‌ಫೋನ್ ಬಳಕೆದಾರರು ಮಾತ್ರ ಜಿಯೋ ಆರಂಭಿಸಿರುವ ವೈಫೈ ಕರೆ ಸೇವೆಯ ಲಾಭ ಪಡೆಯಬಹುದಾಗಿದ್ದು, ಇತರೆ ಸ್ಮಾರ್ಟ್ಫೋನ್ ಬಳಕೆದಾರರಿಗೆ, ಶೀಘ್ರದಲ್ಲೇ ಈ ಸೇವೆಯನ್ನುಪ್ರಾರಂಭಿಸಲಾಗುವುದು ಎಂದು ಸಂಸ್ಥೆ ಹೇಳಿಕೊಂಡಿದೆ. ವರದಿಯ ಪ್ರಕಾರ, ಜಿಯೋ ಬಳಕೆದಾರರು ಯಾವುದೇ ವೈ-ಫೈ ನೆಟ್‌ವರ್ಕ್ ಬಳಸಿ ವೈ-ಫೈ ಕರೆ ಮಾಡಬಹುದಾಗಿದೆ.

ಏರ್ಟೆಲ್ ನೀಡಲಿದೆ ಭಾರಿ ಪೈಪೋಟಿ
ಕಳೆದ ಡಿಸೆಂಬರ್ 2019ರಲ್ಲಿ ಭಾರ್ತಿ ಏರ್ಟೆಲ್ ತನ್ನ ವಾಯ್ಸ್ ಓವರ್ ವೈಫೈ ಅಂದರೆ ವೈಫೈ ಕರೆ ಸೇವೆಯನ್ನು ಪ್ರಾರಂಭಿಸಿದೆ. ಪ್ರಾರಂಭಿಕ ಹಂತದಲ್ಲಿ ದೆಹಲಿ ಮತ್ತು NCR ಪ್ರದೇಶದಲ್ಲಿ ಏರ್ಟೆಲ್ ಈ ಸೇವೆಯನ್ನು ಆರಂಭಿಸಿತ್ತು. ಆದರೆ, ಇದೀಗ ಈ ಸೇವೆ ಮುಂಬೈ, ಕೊಲ್ಕತ್ತಾ, ಆಂಧ್ರಪ್ರದೇಶ, ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಿಗೂ ಕೂಡ ಏರ್ಟೆಲ್ ಈ ಸೇವೆಯನ್ನು ವಿಸ್ತರಿಸಿದೆ. ಏರ್ಟೆಲ್ ನಲ್ಲಿಯೂ ಕೂಡ ಬಳಕೆದಾರರು ಯಾವುದೇ ಕಂಪನಿಯ ವೈಫೈ ನೆಟ್ವರ್ಕ್ ಬಳಸಿ ಅಥವಾ ಏರ್ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್‌ ಸಾರ್ವಜನಿಕ ವೈಫೈ ಹಾಟ್ ಸ್ಪಾಟ್ ಸೇವೆ ಬಳಸಿ ಈ ವೈಫೈ ಕರಯನ್ನು ಮಾಡಬಹುದಾಗಿದೆ.

Trending News