EPFO ಖಾತೆದಾರರಿಗೆ ಗುಡ್ ನ್ಯೂಸ್, ಈಗ ಆಧಾರ್‌ನೊಂದಿಗೆ ಪೂರ್ಣಗೊಳಿಸಿ ನಿಮ್ಮೆಲ್ಲಾ ಕೆಲಸ

ವಿಶೇಷವೆಂದರೆ ಇದಕ್ಕಾಗಿ ನೀವು ಇಪಿಎಫ್‌ಒ ಕಚೇರಿಗೆ ಹೋಗಬೇಕಾಗಿಲ್ಲ. ನೀವು ಅದನ್ನು ಮನೆಯಿಂದ ಆನ್‌ಲೈನ್‌ನಲ್ಲಿ ನವೀಕರಿಸಬಹುದು. ಕಾರ್ಮಿಕ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದೆ.  

Last Updated : Apr 6, 2020, 02:34 PM IST
EPFO ಖಾತೆದಾರರಿಗೆ ಗುಡ್ ನ್ಯೂಸ್, ಈಗ ಆಧಾರ್‌ನೊಂದಿಗೆ ಪೂರ್ಣಗೊಳಿಸಿ ನಿಮ್ಮೆಲ್ಲಾ ಕೆಲಸ title=

ನವದೆಹಲಿ: ಲಾಕ್‌ಡೌನ್‌ನಲ್ಲಿ EPFO ತನ್ನ ಕೋಟ್ಯಾಂತರ ಖಾತೆದಾರರಿಗೆ ಹೊಸ ಸೌಲಭ್ಯವನ್ನು ನೀಡಿದೆ. ಈಗ ನೀವು ಹುಟ್ಟಿದ ದಿನಾಂಕವನ್ನು ನವೀಕರಿಸಲು ಆಧಾರ್ ಕಾರ್ಡ್ ಅನ್ನು ಮಾನ್ಯ ಪುರಾವೆಯಾಗಿ ಬಳಸಲು ಸಾಧ್ಯವಾಗುತ್ತದೆ. ಈ ಮೊದಲು ನಿಮ್ಮ ಕೆಲಸದ ಪ್ರಮಾಣಪತ್ರವು ಈ ಕೆಲಸಕ್ಕೆ ಅಗತ್ಯವಾಗಿತ್ತು, ಆದರೆ ಈಗ ನೀವು ಆಧಾರ್ (Aadhaar) ಕಾರ್ಡ್‌ನೊಂದಿಗೆ ಕೆಲಸವನ್ನು ಚಲಾಯಿಸಲು ಸಾಧ್ಯವಾಗುತ್ತದೆ. ವಿಶೇಷವೆಂದರೆ ಇದಕ್ಕಾಗಿ ನೀವು ಇಪಿಎಫ್‌ಒ ಕಚೇರಿಗೆ ಹೋಗಬೇಕಾಗಿಲ್ಲ. ನೀವು ಅದನ್ನು ಮನೆಯಿಂದ ಆನ್‌ಲೈನ್‌ನಲ್ಲಿ ನವೀಕರಿಸಬಹುದು. ಕಾರ್ಮಿಕ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದೆ.

* ಆಧಾರ್ ಅನ್ನು ಮಾನ್ಯವೆಂದು ಪರಿಗಣಿಸಲಾಗುತ್ತದೆ :
ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಖಾತೆದಾರರ ಹುಟ್ಟಿದ ದಿನಾಂಕವನ್ನು ನವೀಕರಿಸಲು ಮಾನ್ಯ ದಾಖಲೆಯ ರೂಪದಲ್ಲಿ ಆಧಾರ್ ಕಾರ್ಡ್ ಸ್ವೀಕರಿಸುವುದಾಗಿ ತಿಳಿಸಿದೆ. ನೀವು ಅದನ್ನು ಆನ್‌ಲೈನ್‌ನಲ್ಲಿ ನವೀಕರಿಸಬಹುದು.

* ಕಾರ್ಮಿಕ ಸಚಿವಾಲಯದ ಹೇಳಿಕೆ :
ಕರೋನಾ ವೈರಸ್ ಸಾಂಕ್ರಾಮಿಕ ಹರಡುವಿಕೆಯನ್ನು ತಡೆಗಟ್ಟಲು ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಆನ್‌ಲೈನ್ ಸೇವೆಗಳನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಾರ್ಮಿಕ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇಪಿಎಫ್‌ಒ ತನ್ನ ಪ್ರಾದೇಶಿಕ ಕಚೇರಿಗಳಿಗೆ ಪರಿಷ್ಕೃತ ಅಧಿಸೂಚನೆಯನ್ನು ನೀಡಿದ್ದು, ಇದರಿಂದಾಗಿ ಪಿಎಫ್ ಸದಸ್ಯರು ಆಧಾರ್ ಕಾರ್ಡ್ ಅನ್ನು ಜನನ ಪ್ರಮಾಣಪತ್ರವಾಗಿ ಬಳಸಬಹುದು. ಹೀಗಾಗಿ ಯುನಿವರ್ಸಲ್ ಅಕೌಂಟ್ ಸಂಖ್ಯೆ (UAN) ಗಾಗಿ ಕೆವೈಸಿ ಅನುಸರಣೆ ಹೆಚ್ಚಾಗುತ್ತದೆ ಎಂದು ಖಚಿತಪಡಿಸಿಕೊಳ್ಳಬಹುದು.

* ಆನ್‌ಲೈನ್‌ನಲ್ಲಿ ಅರ್ಜಿ:
ಸರ್ಕಾರದ ಈ ಹೇಳಿಕೆಯ ಪ್ರಕಾರ, ಆಧಾರ್‌ನಲ್ಲಿ ಬರೆದ ಜನ್ಮ ದಿನಾಂಕವು ಈಗ ಜನನ ದಿನಾಂಕ ನವೀಕರಣಕ್ಕೆ ಮಾನ್ಯವಾಗಲಿದೆ. ಆದರೆ ಎರಡು ದಿನಾಂಕಗಳ ನಡುವಿನ ವ್ಯತ್ಯಾಸವು ಮೂರು ವರ್ಷಗಳಿಗಿಂತ ಕಡಿಮೆಯಿರಬೇಕು ಎಂಬ ಷರತ್ತು ಇದೆ. ಇದಕ್ಕಾಗಿ ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಇಪಿಎಫ್‌ಪಿಒ ಮೂಲಕ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UADAI) ಯೊಂದಿಗೆ ತಕ್ಷಣವೇ ಆನ್‌ಲೈನ್‌ನಲ್ಲಿ ಹುಟ್ಟಿದ ದಿನಾಂಕವನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ ಖಾತೆದಾರರ ಕೆಲಸ ಕೂಡ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.

* ಸುಲಭವಾಗಿ ಹಣ ಹಿಂಪಡೆಯಲು ಸಾಧ್ಯ:
ಆನ್‌ಲೈನ್ ವಿನಂತಿಯನ್ನು ತ್ವರಿತಗೊಳಿಸುವುದಾಗಿ ಇಪಿಎಫ್‌ಒ ತನ್ನ ಪ್ರಾದೇಶಿಕ ಕಚೇರಿಗಳಿಗೆ ತಿಳಿಸಿದೆ. ಕರೋನಾ ವೈರಸ್ ಸಾಂಕ್ರಾಮಿಕ ಮತ್ತು 'ಲಾಕ್‌ಡೌನ್' ಕಾರಣದಿಂದಾಗಿ ಹಣಕಾಸಿನ ಬಿಕ್ಕಟ್ಟಿನಲ್ಲಿ ಸಿಲುಕಿರುವ ಖಾತೆದಾರರಿಗೆ ತಮ್ಮ ಖಾತೆಯಿಂದ ಹಣವನ್ನು ಹಿಂಪಡೆಯಲು ಆನ್‌ಲೈನ್ ಅಪ್ಲಿಕೇಶನ್‌ ಸಹಕಾರಿಯಾಗಲಿದೆ.

* ಲಾಕ್‌ಡೌನ್‌ನಲ್ಲಿಯೂ ಹಣ ಹಿಂಪಡೆಯಬಹುದು:
ಇಪಿಎಫ್‌ಒ ತನ್ನ ಖಾತೆದಾರರಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಖಾತೆಯಿಂದ ಹಣವನ್ನು ಹಿಂಪಡೆಯಲು ಅನುಮತಿ ನೀಡಲಾಯಿತು. ಆದಾಗ್ಯೂ ಕೆವೈಸಿ ನಿಯಮಗಳನ್ನು ಅನುಸರಿಸಿದ ಖಾತೆದಾರರಿಗೆ ಮಾತ್ರ ಈ ಸೌಲಭ್ಯ ಲಭ್ಯವಿದೆ.
 

Trending News