ಅಮೇರಿಕಾದಿಂದ ಗೋವಾ ಸಿಎಂ ಮನೋಹರ್ ಪರಿಕರ್ ವಿಡಿಯೋ ಸಂದೇಶ

'ಕಳೆದ ಎರಡು ತಿಂಗಳಿನಿಂದ ನಾನು ನಿಮ್ಮ ನಡುವೆ ಇಲ್ಲ, ನಾನು ಚಿಕಿತ್ಸೆಯಲ್ಲಿದ್ದೇನೆ. ಮುಂದಿನ ಕೆಲವು ವಾರಗಳಲ್ಲಿ ನಾನು ಗೋವಾಗೆ ಮರಳುತ್ತೇನೆ.'- ಮನೋಹರ್ ಪರಿಕರ್  

Last Updated : May 14, 2018, 08:44 AM IST
ಅಮೇರಿಕಾದಿಂದ ಗೋವಾ ಸಿಎಂ ಮನೋಹರ್ ಪರಿಕರ್ ವಿಡಿಯೋ ಸಂದೇಶ title=

ನವದೆಹಲಿ: ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೋವಾ ಮುಖ್ಯಮಂತ್ರಿ ಮತ್ತು ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕರ್ ಅವರು ಟ್ವಿಟ್ಟರ್ನಲ್ಲಿ ವೀಡಿಯೊ ಸಂದೇಶವನ್ನು ನೀಡಿದ್ದಾರೆ. ಆ ಸಂದೇಶದಲ್ಲಿ ಅವರು ತಮ್ಮ ಆರೋಗ್ಯ ಸುಧಾರಿಸುತ್ತಿದೆ ಮತ್ತು ಶೀಘ್ರದಲ್ಲೇ ನಾನು ಭಾರತಕ್ಕೆ ಹಿಂದಿರುಗಲಿದ್ದೇನೆ ಎಂದು ಹೇಳಿದರು. 

ವೀಡಿಯೊ ಸಂದೇಶದಲ್ಲಿ, ಪರಿಕರ್ 'ಕಳೆದ ಎರಡು ತಿಂಗಳಿನಿಂದ ನಾನು ನಿಮ್ಮ ನಡುವೆ ಇಲ್ಲ, ನಾನು ಚಿಕಿತ್ಸೆಯಲ್ಲಿದ್ದೇನೆ. ಮುಂದಿನ ಕೆಲವು ವಾರಗಳಲ್ಲಿ ನಾನು ಗೋವಾಗೆ ಮರಳುತ್ತೇನೆ' ಎಂದು ಹೇಳಿದ್ದಾರೆ. ಅಲ್ಲದೆ ಈ ವಿಡಿಯೋ ಸಂದೇಶದ ಮೂಲಕ, ಪರಿಕರ್ ಅವರು 2019 ರಲ್ಲಿ ಲೋಕಸಭಾ ಚುನಾವಣೆಗೆ ಸಿದ್ಧರಾಗಿ ಪಕ್ಷದ ಕಾರ್ಯಕರ್ತರನ್ನು ಸೇರುವ ಬಗ್ಗೆ ಮಾತನಾಡಿದ್ದಾರೆ.

ಆರೋಗ್ಯ ಉತ್ತಮವಾಗಿಲ್ಲದ ಕಾರಣ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸೇರಲಾಗುವುದಿಲ್ಲ ಎಂದು ತಿಳಿಸಿರುವ ಪರಿಕರ್, 2019ರ ಲೋಕಸಭೆ ಚುನಾವಣೆಗೆ ತಯಾರಾಗಿ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಇದರೊಂದಿಗೆ, ಈ ದೇಶಕ್ಕೆ ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಅಗತ್ಯವಿದೆ. ಅದನ್ನು ಸಾಕಾರಗೊಳಿಸಲು ನಾವು ಒಗ್ಗೂಡಬೇಕು ಎಂದು ಅವರು ಸಂದೇಶ ನೀಡಿದ್ದಾರೆ.

ಮಾರ್ಚ್ 5 ರಂದು ಆರೋಗ್ಯ ಸಮಸ್ಯೆಯಿಂದಾಗಿ ಅವರು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ಮಾರ್ಚ್ 7ರಂದು ಚಿಕಿತ್ಸೆಗಾಗಿ ಯುಎಸ್ ಗೆ ತೆರಳಿದರು. 

ಪ್ಯಾಂಕ್ರಿಯಾಟಿಕ್ ಅಸ್ವಸ್ಥತೆಯ ನಂತರ ಫೆಬ್ರವರಿ 15 ರಂದು ಮುಖ್ಯಮಂತ್ರಿ ಮನೋಹರ್ ಪರಿಕರ್ ಅವರು ಮುಂಬೈಯಲ್ಲಿರುವ ಲಿಲಾವತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಫೆಬ್ರವರಿ 22 ರಂದು ಅವರು ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಅದೇ ದಿನ ಅವರು ಗೋವಾ ಅಸೆಂಬ್ಲಿಯ ಬಜೆಟ್ ಮಂಡಿಸಿದರು. ಚಿಕಿತ್ಸೆಗಾಗಿ ಗೋವಾವನ್ನು ಬಿಟ್ಟು ಹೋಗುವುದಕ್ಕೆ ಮುಂಚಿತವಾಗಿ, ಅವರು ರಾಜ್ಯದ ಕೆಲಸವನ್ನು ನಿರ್ವಹಿಸಲು ಕ್ಯಾಬಿನೆಟ್ ಅಡ್ವೈಸರಿ ಕಮಿಟಿಯನ್ನು ರಚಿಸಿದರು.

ಪರಿಕರ್ ಅನುಪಸ್ಥಿತಿಯಲ್ಲಿ, ಮೂರು ಸದಸ್ಯರ ತಂಡ ರಾಜ್ಯದ ಚಾರ್ಜ್ ತೆಗೆದುಕೊಳ್ಳುತ್ತಿದೆ. ಗೋವಾದ ಕಲಾ ಮತ್ತು ಸಂಸ್ಕೃತಿ ಸಚಿವ ಗೋವಿಂದ್ ಗಾವ್ಡೆ ಅವರು ಮೂರು ಸದಸ್ಯರ ಪಕ್ಷವು 5 ಕೋಟಿ ರೂಪಾಯಿಗಳ ಕೆಲಸವನ್ನು ಅನುಮೋದಿಸುವ ಅಧಿಕಾರವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಆದರೆ ಪ್ರತಿ ಸಚಿವರಿಗೆ ರೂ. 50 ಲಕ್ಷದ ಕೆಲಸದ ಒಪ್ಪಂದವನ್ನು ಅನುಮತಿಸುವ ಹಕ್ಕಿದೆ.

ಮಾರ್ಚ್ 6 ರಂದು ತಾವು ವಿದೇಶದಲ್ಲಿ ಚಿಕಿತ್ಸೆಗಾಗಿ ತೆರಳಬೇಕಾಗಿದೆ ಎಂದು ಪರಿಕರ್ ಗವರ್ನರ್ ಮೃದುಲಾ ಸಿನ್ಹರಿಗೆ ಪತ್ರ ಬರೆದರು. ಪತ್ರದಲ್ಲಿ, ಗೋವಾ ಮತ್ತು ಮುಂಬೈ ವೈದ್ಯರು ವಿಶೇಷ ಚಿಕಿತ್ಸೆಗಾಗಿ ತಾವು ವಿದೇಶಕ್ಕೆ ಹೋಗಬೇಕೆಂದು ಸಲಹೆ ನೀಡಿದ್ದಾರೆ. ಈ ಸಮಯದಲ್ಲಿ, ಗೋವಾದಲ್ಲಿ ತಾವು ಇಲ್ಲದ ಸಮಯದಲ್ಲಿ, ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ರಾಜ್ಯದಲ್ಲಿ ಮಂತ್ರಿಗಳ ಕೌನ್ಸಿಲ್ನ ಸಭೆಯನ್ನು ನಡೆಸುವುದಾಗಿ ತಿಳಿಸಿದ್ದರು.

Trending News