ನವದೆಹಲಿ: ಯೋಗ ಗುರು ಬಾಬಾ ರಾಮ್ದೇವ್ ಅವರ ಜನಸಂಖ್ಯಾ ನಿಯಂತ್ರಣ ಹೇಳಿಕೆಗೆ ಮಂಗಳವಾರ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಬೆಂಬಲ ನೀಡಿದ್ದಾರೆ.ಇಂತಹ ಕಾನೂನುಗಳು ದೇಶದ ಅಭಿವೃದ್ಧಿಗೆ ಪೂರಕ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್,"ಬಾಬಾ ರಾಮ್ದೇವ್ ಜನಸಂಖ್ಯಾ ನಿಯಂತ್ರಣದ ಬಗ್ಗೆ ಹೇಳಿಕೆಯನ್ನು ಸಕಾರಾತ್ಮಕವಾಗಿ ನೋಡಬೇಕು ದೇಶದ ಅಭಿವೃದ್ಧಿಗೆ ಜನಸಂಖ್ಯಾ ನಿಯಂತ್ರಣ ಕಾನೂನುಗಳು ಅವಶ್ಯಕ, ನೀವು ಚೀನಾ ನೋಡಿರಿ, ಅಲ್ಲಿ ಅವರು ಈ ಹಿಂದೆ ಒಂದು ಮಗು ಪಾಲಿಸಿಯನ್ನು ಜಾರಿಗೆ ತಂದಿದ್ದಾರೆ. ಇದರಿಂದ ಅವರು ಎಷ್ಟು ಅಭಿವೃದ್ಧಿ ಹೊಂದಿದ್ದಾರೆಂದು ನೀವು ನೋಡಬಹುದು. ಭವಿಷ್ಯದಲ್ಲಿ ಆಹಾರದ ಬಿಕ್ಕಟ್ಟು ಎದುರಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಆದ್ದರಿಂದ ಭಾರತದಲ್ಲಿ ಈ ವಿಚಾರವಾಗಿ ಕಾನೂನುಗಳನ್ನು ಮಾಡಬೇಕು" ಎಂದು ಹೇಳಿದರು.
ಭಾನುವಾರದಂದು ಯೋಗಗುರು ರಾಮದೇವ್ "ಮೂರನೇ ಮಗುವಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಥವಾ ಸರ್ಕಾರದ ಸವಲತ್ತುಗಳನ್ನು ಪಡೆಯಲು ಅನುಮತಿ ನೀಡಬಾರದು " ಎಂದು ಹೇಳಿಕೆ ನೀಡಿದ್ದರು."ಮುಂದಿನ 50 ವರ್ಷಗಳಲ್ಲಿ ಭಾರತದ ಜನಸಂಖ್ಯೆಯು 150 ಕ್ಕಿಂತ ಹೆಚ್ಚು ಕೋಟಿಗಳಷ್ಟು ಇರಬಾರದು, ಇದಕ್ಕಿಂತ ಹೆಚ್ಚಿನ ಸಂಖ್ಯೆಯನ್ನು ಹೊಂದಲು ನಾವು ಸಿದ್ದರಿಲ್ಲ ಎಂದು ಹೇಳಿದ್ದರು. ಒಂದು ವೇಳೆ ಮೂರನೇ ಮಗವನ್ನು ಹೊಂದಿದ್ದೆ ಅದಲ್ಲಿ ಅಂತಹ ಮಗುವಿಗೆ ಯಾವುದೇ ಸರ್ಕಾರದ ಸೌಲಭ್ಯ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ನೀಡಕೂಡದು ಎಂದು ಹೇಳಿದರು.