'ಸ್ವಚ್ಚ ಭಾರತ'ಕ್ಕೆ ಭೂಪಾಲ್ ಮೇಯರ್ ಮಾಡಿದ ಉಪಾಯವೇನು ಗೊತ್ತಾ? ಹಾಗಿದ್ರೆ ಈ ವಿಡಿಯೋ ನೋಡಿ

    

Last Updated : Feb 22, 2018, 07:57 PM IST
'ಸ್ವಚ್ಚ ಭಾರತ'ಕ್ಕೆ ಭೂಪಾಲ್ ಮೇಯರ್ ಮಾಡಿದ ಉಪಾಯವೇನು ಗೊತ್ತಾ? ಹಾಗಿದ್ರೆ ಈ ವಿಡಿಯೋ ನೋಡಿ title=

ಭೂಪಾಲ್: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಸ್ವಚ್ಚ ಭಾರತ ಅಭಿಯಾನವನ್ನು ಯಶಸ್ವಿಗೊಳಿಸಲು ಸರ್ಕಾರ ಸಾಕಷ್ಟು ರೀತಿಯ ಪ್ರಚಾರದ ಕಾರ್ಯ ಕ್ರಮಮಗಳನ್ನು ಹಮ್ಮಿಕೊಂಡಿದೆ. ಆದರೆ ಭೂಪಾಲಿನಲ್ಲಿ ಆಶ್ಚರ್ಯಕರ ಘಟನೆಯೊಂದರರಲ್ಲಿ  ಅಲ್ಲಿನ ಮೇಯರ್ ಅಲೋಕ್ ಶರ್ಮಾ ಕೈಗೊಂಡಿರುವ ಕಾರ್ಯವನ್ನು ನೀವು ನೋಡಿದರೆ ಖಂಡಿತಾ ಹುಬ್ಬೆರಿಸಲಿದ್ದೀರಿ!   

ಹಾಗಾದ್ರೆ ಏನಪ್ಪಾ ಅಂತೀರಾ! ಆ ಮೇಯರ್ ಮಾಡಿದ ಮಹಾನ್ ಕಾರ್ಯ, ಭೂಪಾಲನ್ನು ಸ್ವಚ್ಛ ನಗರಿಯನ್ನಾಗಿ ರೂಪಿಸಲು ಅಲೋಕ್ ಶರ್ಮಾ ಸ್ವಚ್ಚತೆ ಎನ್ನುವುದು ಮೊದಲು ವ್ಯಕ್ತಿಯಿಂದಲೇ ಪ್ರಾರಂಭವಾಗಬೇಕು, ಆದ್ದರಿಂದ ಪ್ರತಿಯೊಬ್ಬರೂ ಸಹಿತ ಪ್ರತಿದಿನ ಶೇವ್ ಮಾಡಿಕೊಳ್ಳಬೇಕು, ಇದು ಕೂಡಾ ಸ್ವಚ್ಛತೆ ಅಭಿಯಾನದ ಭಾಗವೆಂದು ಹೇಳಿದ್ದಾರೆ.ಇನ್ನು ಮುಂದುವರೆದು ನಮ್ಮ ಮುಖವನ್ನು ಹೇಗೆ ಸ್ವಚ್ಚವಾಗಿ ಇಟ್ಟುಕೊಳ್ಳುತ್ತೇವೆ ಅದೇ ರೀತಿಯಾಗಿ ನಗರವನ್ನು ಕೂಡಾ ಸ್ವಚ,ಸುಂದರವಾಗಿ ಇಟ್ಟುಕೊಳ್ಳಬೇಕೆಂದು ತಿಳಿಸಿದ್ದಾರೆ. 

Trending News