General Elections 2024: 2024 ರ ಚುನಾವಣೆಗೂ ಮುನ್ನ ನಿತಿಶ್ ಕುಮಾರ್ ಗೆ ನೀಡಿದ ಬೆಂಬಲ ಹಿಂಪಡೆಯಲಿದ್ದಾರೆ ಮಾಂಝೀ!

Lok Sabha Elecition 2024: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆ ಜೀತನ್ ರಾಮ್ ಮಾಂಝೀ ನೀಡಿರುವ ಹೇಳಿಕೆ ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರಿಗೆ ಬಿಗ್ ಶಾಕ್ ಆಗಿದೆ ಎಂಬಂತೆ ವಿಶ್ಲೇಶಿಸಲಾಗುತ್ತಿದ್ದೆ. ಏಕೆಂದರೆ ನಿತಿಶ್ ಕುಮಾರ್ ಅವರು ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಒಗ್ಗೂಡುವಿಕೆಗೆ ಶ್ರಮಿಸುತ್ತಿದ್ದಾರೆ.   

Written by - Nitin Tabib | Last Updated : May 16, 2023, 01:49 PM IST
  • ನಾವು ನಿತೀಶ್ ಕುಮಾರ್ ಜೊತೆಗಿದ್ದೇವೆ, ನಾವು ಅವರೊಂದಿಗೆ ಇರಳಿದ್ದೇವೆ ಎಂದು ಪ್ರತಿಜ್ಞೆ ಮಾಡಿದ್ದೇವೆ, ಆದರೆ ನಿತೀಶ್ ಕುಮಾರ್ ನಮ್ಮೊಂದಿಗೆ ತಪ್ಪು ಮಾಡಿದ್ದಾರೆ ಎಂದು ಮಾಂಝಿ ಹೇಳಿದ್ದಾರೆ.
  • ನಳಂದಾದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಮಾಂಝಿ ಈ ಹೇಳಿಕೆ ನೀಡಿದ್ದಾರೆ. ಇದಕ್ಕೂ ಮುನ್ನ ತಮ್ಮ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಜಿತನ್ ರಾಮ್ ಮಾಂಝಿ,
  • ನಾವು ಪಕ್ಷ ಕಟ್ಟಿರುವುದು ಅಧಿಕಾರಕ್ಕಾಗಿ ಅಲ್ಲ, ಬಡವರು ಮತ್ತು ಕಾರ್ಮಿಕರಿಗಾಗಿ ಎಂದು ಹೇಳಿದ್ದರು.
General Elections 2024: 2024 ರ ಚುನಾವಣೆಗೂ ಮುನ್ನ ನಿತಿಶ್ ಕುಮಾರ್ ಗೆ ನೀಡಿದ ಬೆಂಬಲ ಹಿಂಪಡೆಯಲಿದ್ದಾರೆ ಮಾಂಝೀ!  title=
ನಿತಿಶ್ ಕುಮಾರ್ ಮತ್ತು ಜೀತನ್ ರಾಮ್ ಮಾಂಝೀ

Lok Sabha Election 2024: ಹಿಂದೂಸ್ತಾನಿ ಅವಾಮ್ ಮೋರ್ಚಾದ (HAM) ಪ್ರಮುಖ ಸಂರಕ್ಷಕರಾದ ಜಿತನ್ ರಾಮ್ ಮಾಂಝಿ ಅವರು 2024 ರ ಲೋಕಸಭೆ ಚುನಾವಣೆಗೆ ಮುನ್ನ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಂಕಷ್ಟ ಹೆಚ್ಚಿಸುವ ಹೇಳಿಕೆ ನೀಡಿದ್ದಾರೆ. ನಿತೀಶ್ ಕುಮಾರ್ ಜೊತೆಗಿನ ಮೈತ್ರಿ ಮುರಿಯುವುದಾಗಿ ಜಿತನ್ ರಾಮ್ ಮಾಂಝಿ ಹೇಳಿದ್ದಾರೆ. ಮಾಂಝಿ ಅವರ ಈ ಹೇಳಿಕೆಯು ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ನಿತೀಶ್‌ಗೆ ದೊಡ್ಡ ಹೊಡೆತ ಎಂದು ಪರಿಗಣಿಸಲಾಗುತ್ತಿದೆ, ಏಕೆಂದರೆ ನಿತೀಶ್ ಬಿಜೆಪಿ ವಿರುದ್ಧ ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದಾರೆ.

ಜಿತನ್ ರಾಮ್ ಮಾಂಝಿ ಹೇಳಿದ್ದೇನು?
ಈ ಕುರಿತು ಮಾತನಾಡಿರುವ ಜಿತನ್ ರಾಮ್ ಮಾಂಝಿ ಅವರು, ನಿತೀಶ್ ಕುಮಾರ್ ಅವರು ನನಗೆ ತುಂಬಾ ಗೌರವ ನೀಡಿದ್ದಾರೆ, ಅವರು ನನ್ನನ್ನು ಮುಖ್ಯಮಂತ್ರಿ ಮಾಡಿದ್ದಾರೆ, ಆದರೆ ಮುಂಬರುವ ದಿನಗಳಲ್ಲಿ ಅಂತಹ ಪರಿಸ್ಥಿತಿ (ತಮ್ಮ ಪಕ್ಷ ಮತ್ತು ಪಕ್ಷದ ಕಾರ್ಯಕರ್ತರನ್ನು ಅಗೌರವಿಸುವ ಪರಿಸ್ಥಿತಿ) ಎದುರಾದರೆ ನಾವು ಖಂಡಿತ ನಿರ್ಧಾರ ಕೈಗೊಳ್ಳುತ್ತೇವೆ. ಈಗಾಗಲೇ ನಾವು ಪಕ್ಷದ ಕಾರ್ಯಕರ್ತರ ಜೊತೆಗೆ ಚರ್ಚೆ ನಡೆಸಿದ್ದು, ಅಂತಹದ್ದೊಂದು ಪರಿಸ್ಥಿತಿ ಎದುರಾದರೆ ನಾವು ಮೈತ್ರಿಯನ್ನು ಸಹ ಮುರಿಯಬಹುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Karnataka Election Results 2023 ಗೆ ಕರಗಿದ ದೀದಿ ದಿಲ್, ಕಾಂಗ್ರೆಸ್ ಬಗ್ಗೆ ಹೇಳಿದ್ದೇನು?

ನಾವು ನಿತೀಶ್ ಕುಮಾರ್ ಜೊತೆಗಿದ್ದೇವೆ, ನಾವು ಅವರೊಂದಿಗೆ ಇರಳಿದ್ದೇವೆ ಎಂದು ಪ್ರತಿಜ್ಞೆ ಮಾಡಿದ್ದೇವೆ, ಆದರೆ ನಿತೀಶ್ ಕುಮಾರ್ ನಮ್ಮೊಂದಿಗೆ ತಪ್ಪು ಮಾಡಿದ್ದಾರೆ ಎಂದು ಮಾಂಝಿ ಹೇಳಿದ್ದಾರೆ. ನಳಂದಾದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಮಾಂಝಿ ಈ ಹೇಳಿಕೆ ನೀಡಿದ್ದಾರೆ. ಇದಕ್ಕೂ ಮುನ್ನ ತಮ್ಮ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಜಿತನ್ ರಾಮ್ ಮಾಂಝಿ, ನಾವು ಪಕ್ಷ ಕಟ್ಟಿರುವುದು ಅಧಿಕಾರಕ್ಕಾಗಿ ಅಲ್ಲ, ಬಡವರು ಮತ್ತು ಕಾರ್ಮಿಕರಿಗಾಗಿ ಎಂದು ಹೇಳಿದ್ದರು. ನಿಮ್ಮ ಭಾವನೆಗಳನ್ನು ಗೌರವಿಸುವಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ನಿತೀಶ್ ಜೊತೆಗಿನ ಸಂಬಂಧ ಸರಿಯಿಲ್ಲ ಎಂಬುದನ್ನೂ ಅವರ ಹೇಳಿಕೆ ಸೂಚಿಸುತ್ತದೆ.

ಇದನ್ನೂ ಓದಿ-Maharashtra Politics: ಶರದ್ ಪವಾರ್ ಮನೆಯಲ್ಲಿ ಎಂವಿಎ ಸಭೆ, 2024ರ ಸ್ಥಾನ ಹಂಚಿಕೆ ಕುರಿತು ಚರ್ಚೆ

'ನನಗೆ ಈ ಮೊದಲು ನೀಡಲಾದ ಖಾತೆಯನ್ನು ವಾಪಸ್ ನೀಡಬೇಕು'
ಜಿತನ್ ರಾಮ್ ಮಾಂಝಿ ಅವರು ಮೊದಲು ಎರಡು ಇಲಾಖೆಗಳನ್ನು ಹೊಂದಿದ್ದರು, ಆದರೆ ಈಗ ಅವರಿಂದ ಒಂದು ಇಲಾಖೆಯನ್ನು ಹಿಂಪಡೆಯಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ನಮ್ಮ ಇಲಾಖೆಯನ್ನು ನಮಗೆ ವಾಪಸ್ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.  ಬಿಹಾರದ ಮಾಜಿ ಸಿಎಂ ಕೂಡ ನಿತೀಶ್ ಕುಮಾರ್ ಜೊತೆಗಿದ್ದೇವೆ ಎಂದು ಪ್ರಮಾಣ ಮಾಡಿದ್ದೇವೆ, ಆದರೆ ರಾಜಕೀಯದಲ್ಲಿ ಆಣೆ ಇರಲ್ಲ ಎಂದು ಹೇಳಿದ್ದಾರೆ. ಮಹಾಮೈತ್ರಿಕೂಟದಲ್ಲಿ ಸಮನ್ವಯ ಸಮಿತಿ ಇರಬೇಕು ಎಂದು ಜಿತನ್ ರಾಮ್ ಮಾಂಝಿ ಹೇಳಿದ್ದಾರೆ. ಸಮಿತಿ ಇಲ್ಲದ ಕಾರಣ ನಿರ್ಧಾರಗಳು ತಪ್ಪುತ್ತಿವೆ ಎಂದೂ ಕೂಡ ಅವರು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News