ನವದೆಹಲಿ: ಜುಲೈ ತಿಂಗಳಲ್ಲಿ ನಿಮ್ಮ ಜೇಬಿನ ಹೊರೆ ಹೆಚ್ಚಾಗುವ ಹಲವು ಬದಲಾವಣೆಗಳು ಸಂಭವಿಸುತ್ತಿವೆ. ಆದರೆ ಈ ಬದಲಾವಣೆಗಳ ಮಧ್ಯೆ ಅಡಿಗೆ ವೆಚ್ಚವೇ ದೊಡ್ಡ ಹೊರೆಯಾದಂತೆ ಕಾಣುತ್ತಿದೆ. ತಿಂಗಳ ಮೊದಲ ದಿನ, ಸಾಮಾನ್ಯ ಜನರ ಜೇಬಿನ ಮೇಲೆ ಹೊರೆ ಹೆಚ್ಚಾಗಿದೆ. ದೇಶದ ತೈಲ ಮಾರುಕಟ್ಟೆ ಕಂಪನಿಗಳು (ಎಚ್‌ಪಿಸಿಎಲ್, ಬಿಪಿಸಿಎಲ್, ಐಒಸಿ) ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ (Gas Cylinder) ದರವನ್ನು ಹೆಚ್ಚಿಸಿವೆ. ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 1 ರೂ. ಹೆಚ್ಚಿಸಲಾಗಿದೆ. ಇದರೊಂದಿಗೆ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ದರ 594 ರೂ. ಗಳಿಗೆ ಏರಿದೆ.
ಇಂದಿನಿಂದ ಬದಲಾಗಲಿವೆ ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರುವ ಹಲವು ವಿಷಯ
ಕಳೆದ 22 ದಿನಗಳಿಂದ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮಾತ್ರ ಹೆಚ್ಚಿಸುತ್ತಿದ್ದವು. ಆದರೆ ಹಣದುಬ್ಬರದ ಎಫೆಕ್ಟ್ ಅಡಿಗೆಮನೆಯನ್ನು ತಲುಪುವುದು ಇದೇ ಮೊದಲು. ನಮ್ಮ ಪಾಲುದಾರ ವೆಬ್ಸೈಟ್ ಝೀಬಿಜ್ ಡಾಟ್ ಕಾಮ್ ಪ್ರಕಾರ, ದೇಶೀಯ ಎಲ್‌ಪಿಜಿ (LPG) ಸಿಲಿಂಡರ್‌ಗಳ ಬೆಲೆಯನ್ನು ಸಹ ಇಂದಿನಿಂದ ಹೆಚ್ಚಿಸಲಾಗಿದೆ. ಎಲ್‌ಪಿಜಿ ಸಿಲಿಂಡರ್ ಕೋಲ್ಕತ್ತಾದಲ್ಲಿ 4 ರೂಪಾಯಿ, ಮುಂಬೈನಲ್ಲಿ 3.50 ರೂಪಾಯಿ ಮತ್ತು ಚೆನ್ನೈನಲ್ಲಿ 4 ರೂಪಾಯಿ ದುಬಾರಿಯಾಗಿದೆ. ಆದರೆ, 19 ಕೆಜಿ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಲಾಗಿದೆ.
ಜೂನ್‌ನಲ್ಲೂ ಏರಿಕೆ ಕಂಡಿದ್ದ ಎಲ್‌ಪಿಜಿ ಸಿಲಿಂಡರ್ ಬೆಲೆ:
ಜೂನ್‌ನಲ್ಲಿ ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 11.50 ರೂ.ಗೆ ಹೆಚ್ಚಿಸಲಾಗಿದೆ. ಅದೇ ಸಮಯದಲ್ಲಿ ಇದು ಮೇ ತಿಂಗಳಲ್ಲಿ 162.50 ರೂ.ವರೆಗೆ ಅಗ್ಗವಾಗಿತ್ತು.
ಗ್ಯಾಸ್ ಸಂಪರ್ಕವನ್ನು ಆಧಾರ್‌ಗೆ ಲಿಂಕ್ ಮಾಡಲು ಇಲ್ಲಿದೆ ಸುಲಭ ಮಾರ್ಗ
ಹೊಸ ದರಗಳು ?
ಐಒಸಿ ವೆಬ್‌ಸೈಟ್‌ನಲ್ಲಿ ನೀಡಿರುವ ಬೆಲೆಯ ಪ್ರಕಾರ ದೆಹಲಿಯಲ್ಲಿ ಸಿಲಿಂಡರ್ ಬೆಲೆ 1 ರೂಪಾಯಿ ಹೆಚ್ಚಾಗಿದೆ. ಈಗ ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆ 593 ರೂ.ನಿಂದ 594 ರೂ.ಗೆ ಏರಿದೆ.
ಕೋಲ್ಕತ್ತಾ 14.2 ಕೆಜಿ ಸಿಲಿಂಡರ್ ದರ 616 ರೂ.ಗಳಿಂದ 620.50 ರೂ.ಗೆ ಏರಿದೆ. ಮುಂಬೈ 590 ರೂ.ನಿಂದ 594 ರೂ.ಗೆ ಮತ್ತು ಚೆನ್ನೈನಲ್ಲಿ 606.50 ರೂ.ಗಳಿಂದ 610.50 ರೂ.ಗೆ ಏರಿದೆ. 19 ಕೆಜಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ದೆಹಲಿಯ 1139.50 ರೂ.ನಿಂದ 1135 ರೂ.ಗೆ ಇಳಿದಿದೆ. ಅದೇ ಸಮಯದಲ್ಲಿ ಮುಂಬೈನಲ್ಲಿ 19 ಕೆಜಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 1197.50 ರೂ.ನಿಂದ 1193 ರೂ.ಗೆ ಇಳಿದಿದೆ.