ಜೂನ್ ಮೊದಲ ದಿನವೇ ಸಾರ್ವಜನಿಕರಿಗೆ ಆಘಾತ: LPG ದರ ಹೆಚ್ಚಳ

LPG gas price today: ಲಾಕ್‌ಡೌನ್ 5.0 ರ ಆರಂಭದಲ್ಲಿ ಸಾರ್ವಜನಿಕರಿಗೆ ದೊಡ್ಡ ಹಿನ್ನಡೆ ಉಂಟಾಗಿದೆ. ಜೂನ್ ಮೊದಲ ದಿನವೇ ನಿಮ್ಮ ಜೇಬಿನ ಮೇಲೆ ಹೊರೆ ಹೆಚ್ಚಾಗಿದೆ.

Written by - Yashaswini V | Last Updated : Jun 1, 2020, 10:15 AM IST
ಜೂನ್ ಮೊದಲ ದಿನವೇ ಸಾರ್ವಜನಿಕರಿಗೆ ಆಘಾತ: LPG ದರ ಹೆಚ್ಚಳ title=

ನವದೆಹಲಿ : ಎಲ್‌ಪಿಜಿ ಅನಿಲ ಬೆಲೆ: ಲಾಕ್‌ಡೌನ್ 5.0 ರ ಆರಂಭದಲ್ಲಿ ಸಾರ್ವಜನಿಕರಿಗೆ ದೊಡ್ಡ ಹಿನ್ನಡೆ ಉಂಟಾಗಿದ್ದು ಜೂನ್ ಮೊದಲ ದಿನವೇ ನಿಮ್ಮ ಜೇಬಿನ ಮೇಲೆ ಹೊರೆ ಹೆಚ್ಚಾಗಿದೆ. ತೈಲ ಕಂಪನಿಗಳು ಗ್ಯಾಸ್-ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿವೆ. ತೈಲ ಮಾರುಕಟ್ಟೆ ಕಂಪನಿಗಳು (ಎಚ್‌ಪಿಸಿಎಲ್, ಬಿಪಿಸಿಎಲ್, ಐಒಸಿ) ಸಬ್ಸಿಡಿ ರಹಿತ ಎಲ್‌ಪಿಜಿ  ಸಿಲಿಂಡರ್  (LPG Cylinder) ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 12 ರೂ.ಗೆ ಹೆಚ್ಚಿಸಿವೆ. ಇದರ ನಂತರ ದೆಹಲಿ ನಿವಾಸಿಗಳು 14.2 ಕೆಜಿ ಸಿಲಿಂಡರ್ ಖರೀದಿಸಲು 593 ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಅದೇ ಸಮಯದಲ್ಲಿ 19 ಕೆಜಿ ಸಿಲಿಂಡರ್ ಬೆಲೆ 110 ರೂ.ನಿಂದ 1139.50 ರೂ.ಗೆ ಏರಿದೆ.

ಐಒಸಿ ಪ್ರಕಾರ ಈಗ ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ (LPG) ಸಿಲಿಂಡರ್ ಬೆಲೆ 593 ರೂ.ಗೆ ಏರಿದೆ, ಅದು ಮೇ ತಿಂಗಳಲ್ಲಿ 581.50 ರೂ. ಇತ್ತು. ಅದೇ ಸಮಯದಲ್ಲಿ ಇದು ಕೋಲ್ಕತ್ತಾದಲ್ಲಿ 616.00 ರೂ., ಮುಂಬೈನಲ್ಲಿ 590.50 ರೂ. ಮತ್ತು ಚೆನ್ನೈನಲ್ಲಿ 606.50 ರೂ. ಆಗಿದೆ.

19 ಕೆಜಿ ಸಿಲಿಂಡರ್‌ ಬೆಲೆ:
19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯೂ ಹೆಚ್ಚಾಗಿದೆ. ಇಂದಿನಿಂದ ಹೊಸ ದರಗಳು ಜಾರಿಗೆ ಬಂದಿವೆ. ನವದೆಹಲಿಯಲ್ಲಿ ಎಲ್ಪಿಜಿ ಸಿಲಿಂಡರ್ ಅನ್ನು 110 ರೂ.ಗಳಿಂದ 1139.50 ರೂ.ಗೆ ಹೆಚ್ಚಿಸಲಾಗಿದೆ. ಈ ಮೊದಲು ಜೂನ್‌ನಲ್ಲಿ ಈ ಸಿಲಿಂಡರ್‌ನ ಬೆಲೆ 1029.50 ರೂ. ಇದಲ್ಲದೆ ಇದರ ಬೆಲೆ ಕೋಲ್ಕತ್ತಾದಲ್ಲಿ 1193.50 ರೂ., ಮುಂಬೈನಲ್ಲಿ 1087.50 ರೂ. ಮತ್ತು ಚೆನ್ನೈನಲ್ಲಿ 1254.00 ರೂ. ಆಗಿದೆ.

ಮೇ ತಿಂಗಳಲ್ಲಿ ಸಿಲಿಂಡರ್ ಅಗ್ಗವಾಯಿತು:
ಗ್ಯಾಸ್ ಸಿಲಿಂಡರ್ ದರವನ್ನು ಮೇ ತಿಂಗಳಲ್ಲಿ ಕಡಿಮೆಗೊಳಿಸಲಾಯಿತು. ಮೇ ತಿಂಗಳಲ್ಲಿ ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆ 581 ರೂ. ಅದೇ ಸಮಯದಲ್ಲಿ ಇದು ಕೋಲ್ಕತ್ತಾದಲ್ಲಿ 584.50 ರೂ., ಮುಂಬೈನಲ್ಲಿ 579.00 ಮತ್ತು ಚೆನ್ನೈನಲ್ಲಿ 569.50 ರೂ. ಇತ್ತು.

ಇದಲ್ಲದೆ ಹೆಚ್ಚಿನ ಮಾಹಿತಿಗಾಗಿ ನೀವು ಅಧಿಕೃತ ವೆಬ್‌ಸೈಟ್ (https://www.iocl.com/Products/IndaneGas.aspx) ಅನ್ನು ಸಹ ಪರಿಶೀಲಿಸಬಹುದು. ಇಲ್ಲಿ ನೀವು ಎಲ್ಲಾ ನಗರಗಳ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು ಪಡೆಯುತ್ತೀರಿ.

Trending News