ಗಡಚಿರೋಲಿ: Naxali Encounter In Gadchiroli - ಮಹಾರಾಷ್ಟ್ರದ (Maharashtra) ಗಡಚಿರೋಲಿಯಲ್ಲಿ C-60 ಕಮಾಂಡೋ ಪೊಲೀಸರು ಹಾಗೂ ನಕ್ಸಲರ ನಡುವೆ ಭಾರಿ ಗುಂಡಿನ ಕಾಳಗ ಸಂಭವಿಸಿದ್ದೆ. C-60 ಕಮಾಂಡೋಗಳು (C-60 Commando Police Operation) ನಡೆಸಿರುವ ಈ ಕಾರ್ಯಾಚರಣೆಯಲ್ಲಿ 13 ನಕ್ಸಲರು ಹತ್ಯೆಗೀಡಾಗಿದ್ದಾರೆ. ನಕ್ಸಲರ ಜೊತೆಗಿನ ಈ ಘರ್ಷಣೆ ಗಡಚಿರೋಲಿಯ ಪಟಾಪಲ್ಲಿ ತಾಲೂಕಿನ ಪೈದಿ-ಕೊಟಮಿ ಅರಣ್ಯ ಪ್ರದೇಶ (Paidi Kotami Forest Area)ದಲ್ಲಿ ಸಂಭವಿಸಿದೆ.
ಗಡಚಿರೋಲಿ (Gadchiroli)ಯಲ್ಲಿ ನಕ್ಸಲರ ಎನ್ಕೌಂಟರ್
C-60 ಕಮಾಂಡೋ ಪೊಲೀಸರು ಹಾಗೂ ನಕ್ಸಲರ ನಡುವಿನ ಈ ಎನ್ಕೌಂಟರ್ (Patapalli Encounter) ಶುಕ್ರವಾರ ಇದ್ದಕ್ಕಿದ್ದಂತೆ ಅರಣ್ಯ ಪ್ರದೇಶದಲ್ಲಿ ಆರಂಭಗೊಂಡಿದೆ. ಈ ಕಾರ್ಯಾಚರಣೆಯನ್ನು ನಡೆಸಲು ಕಮಾಂಡೋ ಪೊಲೀಸರು ನಡೆದುಕೊಂಡೇ ಅರಣ್ಯಕ್ಕೆ ನುಗ್ಗಿದ್ದಾರೆ. ಇದರಿಂದ ನಕ್ಸಲರಿಗೆ ಕಾಡಿನೊಳಗೆ ಪೊಲೀಸರು ಬಂದ ಸುಳಿವೇ ದೊರೆತಿಲ್ಲ ಎನ್ನಲಾಗಿದೆ.
ಘರ್ಷಣೆಯಲ್ಲಿ 13 ನಕ್ಸಲರ ಹತ್ಯೆ
ಘಟನೆಯ ಕುರಿತು ಮಾಹಿತಿ ನೀಡಿರುವ ಗಡಚಿರೋಲಿ DIG ಸಂದೀಪ್ ಪಾಟೀಲ್, ಈ ಪೊಲೀಸ್ ಆಪರೇಶನ್ ನಲ್ಲಿ ಕನಿಷ್ಠ ಅಂದರೆ 13 ನಕ್ಸಲರನ್ನು ಮಟ್ಟಹಾಕಲಾಗಿದ್ದು, ಈ ಘರ್ಷಣೆ ಗಡಚಿರೋಲಿಯ ಪಟಾಪಲ್ಲಿ ಅರಣ್ಯ ಪ್ರದೇಶದಲ್ಲಿ ನಡೆದಿದೆ ಎಂದಿದ್ದಾರೆ.
ಇದನ್ನೂ ಓದಿ-ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಸಲು ಇಂದೇ ಕೊನೆಯ ಅವಕಾಶ
#UPDATE | At least 13 Naxals were neutralized in a police operation in the forest area of Etapalli, Gadchiroli, says Sandip Patil, DIG Gadchiroli#Maharashtra
— ANI (@ANI) May 21, 2021
ಇದನ್ನೂ ಓದಿ- ಭಾರತೀಯ ವಾಯುಸೇನೆಯ ಯುದ್ಧ ವಿಮಾನ Mig-21 ಅಪಘಾತ, ಪೈಲೆಟ್ ದುರ್ಮರಣ
ಶೋಧ ಕಾರ್ಯಾಚರಣೆ ಮುಂದುವರೆದಿದೆ
ಕಮಾಂಡೋ ಪೊಲೀಸರು ನಡೆಸಿರುವ ಈ ಕಾರ್ಯಾಚರಣೆಯ ಬಳಿಕ 13 ನಕ್ಸಲರ ಶವಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಸಂದೀಪ್ ಪಾಟೀಲ್ ನಕ್ಷಲರ ವಿರುದ್ಧ ನಡೆಸಲಾಗಿರುವ ಒಂದು ಯಶಸ್ವಿ ಕಾರ್ಯಾಚರಣೆ ಇದಾಗಿದೆ ಎಂದು ಬಣ್ಣಿಸಿದ್ದಾರೆ. ಪ್ರಸ್ತುತ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಏಕೆಂದರೆ ನಕ್ಸಲರ ಜೊತೆಗೆ ನಡೆದ ಈ ಗುಂಡಿನ ಕಾಳಗದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಕ್ಷಲರು ಹತ್ಯೆಗೀಡಾಗಿರುವ ಸಾಧ್ಯತೆ ಇದೆ ಎಂದು ಸಂದೀಪ್ ಪಾಟಿಲ್ ಹೇಳಿದ್ದಾರೆ.
ಇದನ್ನೂ ಓದಿ- ಮನೆಯ ಕಿಟಕಿ ಬಾಗಿಲು ತೆರೆದಿಡಿ, ಸ್ವಚ್ಛ ಗಾಳಿ ಬರುತ್ತಿದ್ದರೆ ಕರೋನಾ ಅಪಾಯ ಇಲ್ಲ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.