ನವದೆಹಲಿ: ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ 20 ಲಕ್ಷ ಕೋಟಿ ರೂ.ಗಳ 'ಸ್ವಾವಲಂಭಿ ಭಾರತ' ಯೋಜನೆಯ ಆರ್ಥಿಕ ಪ್ಯಾಕೇಜ್ ನ ಐದನೇ ಮತ್ತು ಕೊನೆಯ ಕಂತಿನ ಮಾಹಿತಿಯನ್ನು ಭಾನುವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಂಚಿಕೊಂಡಿದ್ದಾರೆ. ಪ್ರತಿ ಹಂತದ ಮಾದರಿಯಲ್ಲಿ ಈ ಬಾರಿಯೂ ಕೂಡ ಕೇಂದ್ರ ಹಣಕಾಸು ಸಚಿವರು ಪರಿಹಾರ ಕ್ರಮಗಳನ್ನು ಘೋಷಿಸಿದ್ದಾರೆ. ಆದರೆ, ಈ ಬಾರಿ ಅವರು ಸಂಪೂರ್ಣ 20 ಲಕ್ಷ ರೂ.ಪ್ಯಾಕೇಜ್ ನ ಒಟ್ಟು ಐದು ಹಂತಗಳ ಬ್ರೇಕ್ ಅಪ್ ಕೂಡ ಸಾದರುಪಡಿಸಿದ್ದಾರೆ. ಇದರಲ್ಲಿ ಪ್ಯಾಕೇಜ್ ನ ಹೊಸ 5 ಹಂತಗಳ ಖರ್ಚಿನ ಜೊತೆಗೆ ಹಿಂದಿನ ಪ್ರಕಟಣೆಗಳಲ್ಲಿ ಮಾಡಲಾದ ಖರ್ಚಿನ ವಿವರವನ್ನೂ ಕೂಡ ನೀಡಿದ್ದಾರೆ.
ಘೋಷಣೆಗಳ ಒಟ್ಟು ಖರ್ಚು
ಮೊದಲನೆಯದಾಗಿ, ಹಣಕಾಸು ಸಚಿವರು ಹೊಸ ಆರ್ಥಿಕ ಪ್ಯಾಕೇಜ್ ಘೋಷಿಸುವ ಮೊದಲು ಘೋಷಿಸಿದ ಕ್ರಮಗಳ ವೆಚ್ಚದ ವಿವರಗಳನ್ನು ನೀಡಿದ್ದಾರೆ. ತೆರಿಗೆ ರಿಯಾಯತಿಯಿಂದಾಗಿ 2020 ರ ಮಾರ್ಚ್ 22 ರಿಂದ ಸರ್ಕಾರದ ಆದಾಯವು 7800 ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪಿಎಂ ಗರಿಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ 170000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮಾಡಿರುವ ಪ್ರಕಟಣೆಗಳಿಂದ 15000 ಕೋಟಿ. ರೂ ಖರ್ಚಾಗಿದ್ದು , ಇದು ಒಟ್ಟು 192800 ಕೋಟಿ ರೂಪಾಯಿಗಳ ಲೆಕ್ಕಪತ್ರವಾಗಿದೆ ಎಂದಿದ್ದಾರೆ.
ಹೊಸ ಪ್ಯಾಕೇಜಿನ 5 ಹಂತಗಳ ಪ್ರಕಟಣೆ ಮತ್ತು ವೆಚ್ಚಗಳು
ಮೊದಲ ಹಂತ: ಮೊದಲ ಹಂತದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಸೇರಿದಂತೆ ಸಣ್ಣ ಘಟಕಗಳಿಗೆ 3 ಲಕ್ಷ ಕೋಟಿ ರೂ.ಗಳ ಅಸುರಕ್ಷಿತ ಸಾಲ ನೀಡುವ ಸೌಲಭ್ಯ ನೀಡಲಾಗಿದೆ. ಈ ಸಾಲವನ್ನು ಮರುಪಾವತಿಸಲಾಗದ ಎಂಎಸ್‌ಎಂಇ ಘಟಕಗಳಿಗೂ ಕೂಡ ಒಟ್ಟು 20,000 ಕೋಟಿ ರೂ.ಗಳ ಸಾಲ ಸೌಲಭ್ಯ ಕಲ್ಪಿಸಲಾಗಿದೆ. MSME ಯ ವ್ಯಾಖ್ಯಾನ ಬದಲಾಗಿದೆ. ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ), ಹೌಸಿಂಗ್ ಫೈನಾನ್ಸ್ ಕಂಪನಿಗಳು (ಎಚ್‌ಎಫ್‌ಸಿ) ಮತ್ತು ಸೂಕ್ಷ್ಮ ಸಾಲ ನೀಡುವ ಸಂಸ್ಥೆಗಳಿಗೆ (ಎಂಎಫ್‌ಐ) ಟಿಡಿಎಸ್ ಮತ್ತು ಟಿಸಿಎಸ್ ದರದಲ್ಲಿ 20 ಮಾರ್ಚ್ 2021 ರವರೆಗೆ ವಿಶೇಷ ನಗದು ಯೋಜನೆ ಘೋಷಿಸಲಾಗಿದೆ. ಕಂಪೆನಿಗಳಿಗೆ ಶೇಕಡಾ 25 ರಷ್ಟು ಕಡಿತ, ಎಲ್ಲ ಕಂಪನಿಗಳ ಇಪಿಎಫ್ ನಲ್ಲಿ ನೌಕರರ ಮೂಲ ವೇತನದ ಶೇ.12 ಕ್ಕೆ ಸರಿಸಮಾನವಾದ ಕೊಗುಗೆಯ ಬದಲಾಗಿ ಶೇ.10 ಕ್ಕೆ ಇಳಿಕೆಯ ಘೋಷಣೆಗಳೂ ಕೂಡ ಶಾಮೀಲಾಗಿವೆ.
To sum up all the measures announced so far, here is the Stimulus provided by announcements in the 1st tranche (1/5)#AatmaNirbharApnaBharat pic.twitter.com/2fJVyZpZ5d
— PIB India #StayHome #StaySafe (@PIB_India) May 17, 2020
ಎರಡನೇ ಹಂತ: ಆರ್ಥಿಕ ಪ್ಯಾಕೇಜ್‌ನ ಎರಡನೇ ಹಂತದ ಅಡಿಯಲ್ಲಿ ವಲಸೆ ಕಾರ್ಮಿಕರು, ಸಣ್ಣ ರೈತರು, ಬೀದಿ ಬದಿ ವ್ಯಾಪಾರಿಗಳು, ಬುಡಕಟ್ಟು ಜನಾಂಗದವರು, ಮಧ್ಯಮ ವರ್ಗದ ಕುಟುಂಬಗಳಿಗೆ ಪರಿಹಾರ ಕ್ರಮಗಳನ್ನು ಹಣಕಾಸು ಸಚಿವರು ಘೋಷಿಸಿದ್ದಾರೆ. ಮುಂದಿನ ಎರಡು ತಿಂಗಳವರೆಗೆ ಸುಮಾರು 8 ಕೋಟಿ ವಲಸೆ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯಗಳು, ಮುದ್ರಾ ಶಿಶು ಸಾಲಗಳನ್ನು ಪಡೆದವರಿಗೆ 12 ತಿಂಗಳವರೆಗೆ 2% ಪರಿಹಾರ, ಪಿಎಂ ಆವಾಸ್ ಯೋಜನೆಯಡಿ 6-18 ಲಕ್ಷದವರೆಗೆ ಆದಾಯ ಹೊಂದಿರುವವರಿಗೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆ ಒಳಗೊಂಡಿದೆ. ಈ ಯೋಜನೆಯನ್ನು 31 ಮಾರ್ಚ್ 2021 ಕ್ಕೆ ವಿಸ್ತರಿಸಲಾಗಿದೆ.
ಮೂರನೆಯ ಹಂತ: ಆರ್ಥಿಕ ಪ್ಯಾಕೇಜಿನ ಮೂರನೇ ಕಂತಿನಡಿಯಲ್ಲಿ ಹಣಕಾಸು ಸಚಿವರು ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ 11 ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಈ ಪೈಕಿ 8 ಘೋಷಣೆಗಳು ಕೃಷಿ ಕ್ಷೇತ್ರದ ಮೂಲಸೌಕರ್ಯ ಬಲವರ್ಧನೆ, ಕಟ್ಟಡ ಸಾಮರ್ಥ್ಯ ಮತ್ತು ಉತ್ತಮ ಲಾಜಿಸ್ಟಿಕ್ಸ್ ಬಗ್ಗೆ ಕಾಳಜಿಯನ್ನು ಹೊಂದಿದ್ದರೆ, 3 ಘೋಷಣೆಗಳು ಆಡಳಿತ ಸುಧಾರಣೆಗಳಿಗೆ ಸಂಬಂಧಿಸಿವೆ. ಕೃಷಿ ಇನ್ಫ್ರಾ ಕ್ಷೇತ್ರದಲ್ಲಿ ಪ್ರಮುಖ ಕ್ರಮಗಳನ್ನು ಕೈಗೊಂಡಿರುವ ಹಣಕಾಸು ಸಚಿವರು ಫಾರ್ಮ್ ಗೇಟ್ ಗೆ 1 ಲಕ್ಷ ಕೋಟಿ ರೂ. ಸೇರಿದಂತೆ ಪಶುಸಂಗೋಪನೆ, ಮೀನುಗಾರಿಕೆ, ಜೇನುನೊಣ ಪಾಲನೆ, ಗಿಡಮೂಲಿಕೆ ಕೃಷಿಗೆ ವಿವಿಧ ಸಾಲಗಳನನ್ನು ಘೋಷಿಸಿದ್ದಾರೆ. ಈ ಎಲ್ಲ ಘೋಶನೆಗಳಲ್ಲಿ ಪ್ರಮುಖ ಘೋಷಣೆ ಎಂದರೆ ಕೃಷಿಯಲ್ಲಿನ ಆಡಳಿತ ಸುಧಾರಣೆ. ಇದಕ್ಕಾಗಿ ಅಗತ್ಯ ಸರಕುಗಳ ಕಾಯ್ದೆಗೆ ತಿದ್ದುಪಡಿ ತರಲು ಘೋಷಿಸಲಾಗಿದೆ.
Announcements in 4th and 5th tranche total Rs 48,100 crores (4/5)#AatmaNirbharApnaBharat pic.twitter.com/WJiz1aTTyj
— PIB India #StayHome #StaySafe (@PIB_India) May 17, 2020
ನಾಲ್ಕನೇ ಹಂತ: ಈ ಕಂತಿನಲ್ಲಿ ಕಲ್ಲಿದ್ದಲು, ರಕ್ಷಣಾ, ಖನಿಜ, ನಾಗರಿಕ ವಿಮಾನಯಾನ, ಬಾಹ್ಯಾಕಾಶ, ವಿದ್ಯುತ್ ಕ್ಷೇತ್ರಕ್ಕೆ ಪ್ರಮುಖ ಸುಧಾರಣೆಗಳನ್ನು ಘೋಷಿಸಲಾಗಿದೆ. ಸರ್ಕಾರದ ಏಕಸ್ವಾಮ್ಯವನ್ನು ರದ್ದುಗೊಳಿಸಿದ ಕಲ್ಲಿದ್ದಲು ವಲಯದಲ್ಲಿ, 50 ಹೊಸ ಬ್ಲಾಕ್ಗಳನ್ನು ತೆರೆಯುವ ಮಹತ್ವದ ಘೋಷಣೆ ಮಾಡಲಾಗಿದೆ. ಇದೇ ವೇಳೆ ರಕ್ಷಣಾ ಕ್ಷೇತ್ರದಲ್ಲಿ ಎಫ್‌ಡಿಐ ಮಿತಿಯನ್ನು ಸ್ವಯಂಚಾಲಿತವಾಗಿ ಪ್ರಸ್ತುತ ಶೇ.49 ರಿಂದ ಶೇ. 74 ಹೆಚ್ಚಿಸಲಾಗಿದೆ. ಜೊತೆಗೆ ಸಾಮಾಜಿಕ ಇನ್ಫ್ರಾ ವಲಯಕ್ಕೆ 8100 ಕೋಟಿ ರೂ.ಗಳ ಪ್ಯಾಕೇಜ್ ಘೋಷಣೆ, ನಾಗರಿಕ ವಿಮಾನಗಳಿಗೆ ಹೆಚ್ಚಿನ ವಾಯುಪ್ರದೇಶವನ್ನು ತೆರೆಯುವುದರೊಂದಿಗೆ 6 ವಿಮಾನ ನಿಲ್ದಾಣಗಳನ್ನು ಹರಾಜು ಮಾಡುವ ಘೋಷಣೆ, ವಿದ್ಯುತ್ ವಲಯದಲ್ಲಿ ಯೂನಿಯನ್ ವಲಯದಲ್ಲಿ ಡಿಸ್ಕಾಮ್‌ಗಳನ್ನು ಖಾಸಗೀಕರಣಗೊಳಿಸುವಿಕೆಯಂತಹ ಘೋಷಣೆಗಳನ್ನು ನಾಲ್ಕನೇ ಕಂತಿನಲ್ಲಿ ಮಾಡಲಾಗಿದೆ.
ಐದನೆಯ ಹಂತ:ಆರ್ಥಿಕ ಪ್ಯಾಕೇಜಿನ ಐದನೇ ಮತ್ತು ಅಂತಿಮ ಕಂತಿನಡಿಯಲ್ಲಿ, MGNREGA ಅಡಿಯಲ್ಲಿ 40000 ಕೋಟಿ ರೂಪಾಯಿಗಳ ಹೆಚ್ಚುವರಿ ಅನುದಾನ, ಆರೋಗ್ಯ ಇನ್ಫ್ರಾ ಮೇಲಿನ ಖರ್ಚು ಹೆಚ್ಚಳ, ತಂತ್ರಜ್ಞಾನ-ಚಾಲಿತ ಶಿಕ್ಷಣದ ಕ್ರಮಗಳ ಘೋಷಣೆಗ ಜೊತೆಗೆ. ಸಾರ್ವಜನಿಕ ವಲಯದ ಉದ್ಯಮಗಳಿಗೆ ಹೊಸ ನೀತಿ ಮತ್ತು ವ್ಯಾಪಾರ ಸರಳೀಕರಣಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿತ್ತ ಸಚಿವರು ಹೇಳಿದ್ದಾರೆ.ಇದಲ್ಲದೆ ವಿವಿಧ ರಾಜ್ಯಗಳಿಗೆ ಸಹಕಾರವನ್ನು ಹೆಚ್ಚಿಸುವ ದಿಕ್ಕಿನಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದೂ ಕೂಡ ಅವರು ಪ್ರಕಟಿಸಿದ್ದಾರೆ.
ಈ ಎಲ್ಲಾ ಹಂತಗಳು ಮತ್ತು ಹಿಂದಿನ ಪ್ರಕಟಣೆಗಳು ಸೇರಿದಂತೆ ಒಟ್ಟು 20 ಲಕ್ಷ ಕೋಟಿ ರೂಪಾಯಿಗಳ ಸಂಪೂರ್ಣ ವಿಘಟನೆ ಈ ಕೆಳಗಿನಂತಿದೆ.
Here is the summary of all the announcements so far, totalling over Rs 20 lakh crores (5/5)#AatmaNirbharApnaBharat pic.twitter.com/i2HVhYabj2
— PIB India #StayHome #StaySafe (@PIB_India) May 17, 2020