ನವದೆಹಲಿ : ಶ್ರೀಲಂಕಾ ದೇಶವು ಪ್ರಸ್ತುತ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದೀಗ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಹಾಗೂ ಶ್ರೇಷ್ಠ ಆಟಗಾರ ಸನತ್ ಜಯಸೂರ್ಯ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿಹೊಗಳಿದ್ದಾರೆ. ಜಯಸೂರ್ಯ ಒಂದು ಕಾಲದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು.
ಪಿಎಂ ಮೋದಿಯನ್ನು ಹೊಗಳಿದ ಜಯಸೂರ್ಯ
ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ(Sanath Jayasuriya), ಶ್ರೀಲಂಕಾಕ್ಕೆ ಸಹಾಯ ಮಾಡಿದ್ದಕ್ಕೆ ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದಾರೆ. ನೀವು ನಮ್ಮ ಅದ್ಭುತ ನೆರೆಹೊರೆಯವರಾಗಿದ್ದೀರಿ. ನಮ್ಮ ದೇಶದ ಅಣ್ಣಂದಿರಂತೆ ಸಹಾಯ ಮಾಡುತ್ತಿದ್ದೀರಾ. ನಮ್ಮ ಬದುಕು ತುಂಬಾ ಕಷ್ಟಕರವಾಗಿದೆ. ಶೀಘ್ರದಲ್ಲೇ ಚಿತ್ರಣ ಬದಲಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಭಾರತ ಮತ್ತು ಇತರ ದೇಶಗಳ ಸಹಾಯದಿಂದ ನಾವು ಈ ಪರಿಸ್ಥಿತಿಯಿಂದ ಹೊರಬರಲು ಪ್ರಯತ್ನಿಸುತ್ತಿದ್ದೇವೆ ಎಡನು ಹೇಳಿದ್ದಾರೆ.
यह दुर्भाग्यपूर्ण है कि लोग इस स्थिति से गुज़र रहे हैं। वे इस तरह जीवित नहीं रह सकते और विरोध करना शुरू कर दिया है। गैस की किल्लत है और घंटों बिजली की आपूर्ति नहीं है: श्रीलंका के मौजूदा हालात पर श्रीलंका के पूर्व क्रिकेटर सनथ जयसूर्या pic.twitter.com/AHeQTKTfKn
— ANI_HindiNews (@AHindinews) April 7, 2022
ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾ
ಶ್ರೀಲಂಕಾದಲ್ಲಿನ ಪರಿಸ್ಥಿತಿ ದುರದೃಷ್ಟಕರ ಎಂದು ಬಣ್ಣಿಸಿದ ಸನತ್ ಜಯಸೂರ್ಯ, ಜನ ಈ ರೀತಿ ಬದುಕಲು ಸಾಧ್ಯವಿಲ್ಲ ಅದಕ್ಕೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಗ್ಯಾಸ್(Gas) ಮತ್ತು ಇಂಧನದ ಕೊರತೆ, 10-12 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಬಂದ್. ಇದು ನಮ್ಮ ದೇಶಕ್ಕೆ ಕಷ್ಟದ ಸಮಯ ಎದುರಾಗಿದೆ. ನಾನು ಜನರನ್ನು ಹಿಂಸಾತ್ಮಕವಾಗಿ ಅಲ್ಲ ಶಾಂತಿಯುತವಾಗಿ ಪ್ರತಿಭಟಿಸುವಂತೆ ಕೇಳಲು ಬಯಸುತ್ತೇನೆ ಎಂದು ಹೇಳಿದರು.
लोगों ने अब श्रीलंकाई सरकार के ख़िलाफ विरोध करना शुरू कर दिया है। वे सरकार को दिखा रहे हैं कि वे पीड़ित हैं। यदि संबंधित लोग इसे ठीक से संबोधित नहीं करते हैं, तो यह एक आपदा में बदल जाएगा। फिलहाल इसकी ज़िम्मेदारी वर्तमान सरकार की होगी: श्रीलंका के पूर्व क्रिकेटर सनथ जयसूर्या pic.twitter.com/rURhPcT682
— ANI_HindiNews (@AHindinews) April 7, 2022
ಭಾರತ ಸರ್ಕಾರ ನೆರವು
ವಿದ್ಯುತ್ ಕಡಿತವನ್ನು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ವಿದ್ಯುತ್ ಬಿಕ್ಕಟ್ಟನ್ನು ನಿವಾರಿಸಲು ಸಹಾಯ ಮಾಡಲು ಭಾರತ ಸರ್ಕಾರ(Government of India)ವು ಶ್ರೀಲಂಕಾಕ್ಕೆ ಇದುವರೆಗೆ 270,000 ಮೆಟ್ರಿಕ್ ಟನ್‌ಗಳಷ್ಟು ಇಂಧನವನ್ನು ಪೂರೈಸಿದೆ. ಡಾಲರ್ ಎದುರು ಶ್ರೀಲಂಕಾದ ರೂಪಾಯಿ ತೀವ್ರವಾಗಿ ಕುಸಿಯುತ್ತಿದ್ದು, ವಿದೇಶಿ ಸಾಲವೂ ಹೆಚ್ಚುತ್ತಿದೆ. ಶ್ರೀಲಂಕಾ ಸರ್ಕಾರದ ಆದಾಯದಲ್ಲಿ ತೀವ್ರ ಕುಸಿತ ಕಂಡುಬಂದಿದೆ, ಇದರಿಂದಾಗಿ ಅದು ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದೆ. ಶ್ರೀಲಂಕಾ ಸರ್ಕಾರದ ವಿರುದ್ಧ ಜನ ಪ್ರತಿಭಟನೆ ಆರಂಭಿಸಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಜಯಸೂರ್ಯ ಹೇಳಿದ್ದಾರೆ. ಜನರೊಂದಿಗೆ ಸರಿಯಾಗಿ ಮಾತನಾಡದಿದ್ದರೆ ಅನಾಹುತವಾಗುತ್ತದೆ. ಸದ್ಯಕ್ಕೆ ಅದರ ಜವಾಬ್ದಾರಿ ಈಗಿನ ಸರ್ಕಾರದ ಮೇಲಿದೆ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.