ರಾಜಸ್ಥಾನ: ರಾಜ್ಯಸಭೆಯ ಉಪಚುನಾವಣೆಗೆ ಡಾ. ಮನಮೋಹನ್ ಸಿಂಗ್ ಕಣಕ್ಕೆ, ಇಂದು ನಾಮಪತ್ರ ಸಲ್ಲಿಕೆ

ಪ್ರಸ್ತುತ ವಿಧಾನಸಭೆಯಲ್ಲಿ ಕಾಂಗ್ರೆಸ್ ತನ್ನ 100 ಶಾಸಕರಲ್ಲದೆ 12 ಸ್ವತಂತ್ರರು, 6 ಬಿಎಸ್​ಪಿ, 2 ಬಿಟಿಪಿ, 1 ಆರ್ಎಲ್ಡಿ ಮತ್ತು 1 ಸಿಪಿಎಂ ಶಾಸಕರ ಬೆಂಬಲವನ್ನು ಹೊಂದಿದೆ.  

Last Updated : Aug 13, 2019, 10:33 AM IST
ರಾಜಸ್ಥಾನ: ರಾಜ್ಯಸಭೆಯ ಉಪಚುನಾವಣೆಗೆ ಡಾ. ಮನಮೋಹನ್ ಸಿಂಗ್ ಕಣಕ್ಕೆ, ಇಂದು ನಾಮಪತ್ರ ಸಲ್ಲಿಕೆ title=

ಜೈಪುರ: ರಾಜ್ಯಸ್ಥಾನ ವಿಧಾನಸಭೆಯಿಂದ ರಾಜ್ಯಸಭೆಯ ಒಂದು ಸ್ಥಾನಕ್ಕೆ ಇದೇ ಆಗಸ್ಟ್ 26ರಂದು ನಡೆಯಲಿರುವ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಇಂದು ನಾಮಪತ್ರ ಸಲ್ಲಿಸಲಿದ್ದಾರೆ.

ಇಂದು ಬೆಳಿಗ್ಗೆ 10:30ಕ್ಕೆ ಜೈಪುರ ತಲುಪಲಿರುವ ಡಾ. ಮನಮೋಹನ್ ಸಿಂಗ್ ಅವರನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಇತರ ಕಾಂಗ್ರೆಸ್ ಮುಖಂಡರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ ಕೂಡ ಅವರಿಗೆ ಸಾಥ್ ನೀಡಲಿದ್ದಾರೆ. ಬೆಳಿಗ್ಗೆ 11:00 ಗಂಟೆಗೆ ಡಾ.ಮನಮೋಹನ್ ಸಿಂಗ್ ಅವರ ನಾಮಪತ್ರ ಸಲ್ಲಿಸಲಿದ್ದಾರೆ. 

ರಾಜಸ್ಥಾನದಲ್ಲಿ 10 ರಾಜ್ಯಸಭಾ ಸ್ಥಾನಗಳಿವೆ. ಬಿಜೆಪಿ ರಾಜ್ಯ ಅಧ್ಯಕ್ಷ ಮದನ್ ಲಾಲ್ ಸೈನಿ ಅವರ ನಿಧನದ ನಂತರ ರಾಜ್ಯಸಭೆಯ ಒಂದು ಸ್ಥಾನ ಖಾಲಿಯಾಗಿದೆ. ಆ ಸ್ಥಾನಕ್ಕೆ ಈಗ ಉಪಚುನಾವಣೆ ನಡೆಯಲಿದೆ.

ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವಿಗೆ 100 ಶಾಸಕರ ಬೆಂಬಲ ಬೇಕು. ಪ್ರಸ್ತುತ ವಿಧಾನಸಭೆಯಲ್ಲಿ ಕಾಂಗ್ರೆಸ್ ತನ್ನ 100 ಶಾಸಕರಲ್ಲದೆ 12 ಸ್ವತಂತ್ರರು, 6 ಬಿಎಸ್​ಪಿ, 2 ಬಿಟಿಪಿ, 1 ಆರ್ಎಲ್ಡಿ ಮತ್ತು 1 ಸಿಪಿಎಂ ಶಾಸಕರ ಬೆಂಬಲವನ್ನು ಹೊಂದಿದೆ.

ರಾಜಸ್ಥಾನ ರಾಜ್ಯಸಭಾ ಉಪಚುನಾವಣೆಯಲ್ಲಿ ಮನಮೋಹನ್ ಸಿಂಗ್ ಅವರನ್ನು ಬೆಂಬಲಿಸುವುದಾಗಿ ಬಹುಜನ ಸಮಾಜ ಪಕ್ಷ ಘೋಷಿಸಿದೆ. ರಾಜಸ್ಥಾನ ಬಿಎಸ್​ಪಿ ವಿಧಾನಸಭಾ ಮುಖಂಡ ಲಖನ್ ಸಿಂಗ್ ಸೋಮವಾರ ಈ ಮಾಹಿತಿ ನೀಡಿದ್ದಾರೆ. ರಾಜ್ಯದ ಒಂದು ರಾಜ್ಯಸಭಾ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷವು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುತ್ತದೆ ಎಂದು ಸಿಂಗ್ ಹೇಳಿದರು.

ರಾಜಸ್ಥಾನದಲ್ಲಿ ಕಾಂಗ್ರೆಸ್ನ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಬಿಎಸ್​ಪಿ ಬೆಂಬಲಿಸಿದೆ. ಇದಕ್ಕೂ ಮುನ್ನ ಮನಮೋಹನ್ ಸಿಂಗ್ ಅವರು ಅಸ್ಸಾಂ ಅನ್ನು ರಾಜ್ಯಸಭೆಯಲ್ಲಿ 28 ವರ್ಷಗಳಿಂದ ಪ್ರತಿನಿಧಿಸಿದ್ದಾರೆ.

Trending News