ಉತ್ತರಪ್ರದೇಶದಲ್ಲಿ ಪ್ರವಾಹ: 16 ಮಂದಿ ಸಾವು, ರಕ್ಷಣಾ ಕಾರ್ಯಾಕ್ಕೆ ಧಾವಿಸಿದ ವಾಯುಪಡೆ

ರಕ್ಷಣಾ ಕಾರ್ಯಾಚರಣೆಗೆ ವಾಯುಪಡೆ ಧಾವಿಸಿದ್ದು ಉಳಿದಂತೆ ಲಲಿತ್ಪುರ್ ಮತ್ತು ಝಾನ್ಸಿ ಜಿಲ್ಲೆಗಳಲ್ಲಿ ಹೆಲಿಕಾಪ್ಟರ್ ಮೂಲಕ 14 ಮಂದಿಯನ್ನು ರಕ್ಷಣೆ ಮಾಡಲಾಗಿದೆ.   

Last Updated : Sep 3, 2018, 09:31 AM IST
ಉತ್ತರಪ್ರದೇಶದಲ್ಲಿ ಪ್ರವಾಹ: 16 ಮಂದಿ ಸಾವು, ರಕ್ಷಣಾ ಕಾರ್ಯಾಕ್ಕೆ ಧಾವಿಸಿದ ವಾಯುಪಡೆ title=

ಲಖನೌ: ಉತ್ತರ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಕಳೆದ 48 ಗಂಟೆಗಳಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದ ಶಹಜಾನ್ ಪುರ್ ಜಿಲ್ಲೆಯಲ್ಲಿ ಹೆಚ್ಚು ಹಾನಿಯಾಗಿದ್ದು, ಆರು ಮಂದಿ ಮೃತಪಟ್ಟಿದ್ದಾರೆ.

ಶನಿವಾರ ಹಾಗೂ ಭಾನುವಾರ ಪ್ರವಾಹದಿಂದಾಗಿ 16 ಮಂದಿ ಮೃತಪಟ್ಟಿದ್ದು 12 ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ವಾಯುಪಡೆ ಧಾವಿಸಿದ್ದು ಉಳಿದಂತೆ ಲಲಿತ್ಪುರ್ ಮತ್ತು ಝಾನ್ಸಿ ಜಿಲ್ಲೆಗಳಲ್ಲಿ ಹೆಲಿಕಾಪ್ಟರ್ ಮೂಲಕ 14 ಮಂದಿಯನ್ನು ರಕ್ಷಣೆ ಮಾಡಲಾಗಿದೆ. 

ಇದುವರೆಗಿನ ವರದಿಗಳ ಪ್ರಕಾರ್, ಸಿತಾಪುರ್ ಜಿಲ್ಲೆಯಲ್ಲಿ ಮೂವರು ಮತ್ತು ಅಮೇಥಿ, ಔರಿಯಾ ಜಿಲ್ಲೆಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಭಾರೀ ಮಳೆಯಿಂದಾಗಿ 461 ಮನೆಗಳು ಹಾನಿಗೊಳಗಾಗಿವೆ. ಇನ್ನು ರಾಜ್ಯದಲ್ಲಿ ಎರಡು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. 
 

Trending News