ದೇಶೀಯ ವಿಮಾನ ಹಾರಾಟ ಆರಂಭ, ಏರ್‌ಪೋರ್ಟ್‌ಗೆ ಹೋಗುವ ಮೊದಲು ಇವುಗಳನ್ನು ನೆನಪಿನಲ್ಲಿಡಿ

ಇಂದಿನಿಂದ ಮೂರನೇ ಒಂದು ಭಾಗದಷ್ಟು ದೇಶೀಯ ವಿಮಾನಗಳನ್ನು ಅನುಮೋದಿಸಲಾಗಿದೆ.

Last Updated : May 25, 2020, 08:48 AM IST
ದೇಶೀಯ ವಿಮಾನ ಹಾರಾಟ ಆರಂಭ, ಏರ್‌ಪೋರ್ಟ್‌ಗೆ ಹೋಗುವ ಮೊದಲು ಇವುಗಳನ್ನು ನೆನಪಿನಲ್ಲಿಡಿ  title=

ನವದೆಹಲಿ: ಸುಮಾರು ಎರಡು ತಿಂಗಳ ಲಾಕ್‌ಡೌನ್ (Lockdown) ನಂತರ ಇಂದು ಮತ್ತೆ ವಿಮಾನ ಹಾರಾಟ ಪ್ರಾರಂಭವಾಗಿದೆ. ಮೇ 25ರಿಂದ ದೇಶದಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ದೇಶೀಯ ವಿಮಾನಯಾನಗಳನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರ ಭಾಗವಾಗಿ ಇಂದು ಬೆಳಿಗ್ಗೆ 5 ಗಂಟೆಗೆ ದೆಹಲಿಯಿಂದ ಪುಣೆಗೆ ವಿಮಾನ ಹೊರಟಿತು.  ಆದರೆ ಈ ಬಾರಿ ವಿಮಾನ ನಿಲ್ದಾಣ ಮತ್ತು ವಿಮಾನಗಳಲ್ಲಿ ಸಂಪೂರ್ಣವಾಗಿ ವಿಭಿನ್ನ ನಿಯಮಗಳನ್ನು ಅನುಸರಿಸಲಾಗುತ್ತಿದೆ. ಹಾಗಾಗಿ ವಿಮಾನ ನಿಲ್ದಾಣದಲ್ಲಿ ಯಾವುದೇ ರೀತಿಯ ತೊಂದರೆ ಎದುರಾಗದಂತೆ ನಿಗಾ ವಹಿಸಲು ಈ ಪ್ರಮುಖ ಮಾಹಿತಿಯನ್ನು ನಿಮಗಾಗಿ ನೀಡಲಾಗುತ್ತಿದೆ.

ಇವು ವಿಮಾನದಲ್ಲಿ ಪ್ರಯಾಣಿಸುವವರಿಗೆ ನೀಡಲಾದ ಹೊಸ ಮಾರ್ಗಸೂಚಿಗಳಾಗಿವೆ:-

- ವಿಮಾನ ನಿಲ್ದಾಣದಲ್ಲಿರುವ ಎಲ್ಲಾ ಪ್ರಯಾಣಿಕರು ಫೇಸ್ ಮಾಸ್ಕ್ ಹಾಕಿಕೊಳ್ಳಬೇಕು.
- ವಿಮಾನ ನಿಲ್ದಾಣದ ಮೊದಲ ಗೇಟ್‌ನ ಮುಂದೆ ಇ-ಬೋರ್ಡಿಂಗ್ ಪಾಸ್ ಯಂತ್ರವನ್ನು ಇಡಲಾಗುತ್ತದೆ. ಬೋರ್ಡಿಂಗ್ ಪಾಸ್ ಅನ್ನು ಇಲ್ಲಿಂದ ತೆಗೆದುಕೊಳ್ಳಬೇಕು.
- ಪ್ರವೇಶ ಭದ್ರತೆಗಾಗಿ ನಿಮ್ಮ ಆರೋಗ್ಯ ಸೇತು ಅಪ್ಲಿಕೇಶನ್ ಮತ್ತು ಬೋರ್ಡಿಂಗ್ ಪಾಸ್ ಅನ್ನು ತೋರಿಸಬೇಕಾಗಿದೆ.
- ವಿಮಾನ ನಿಲ್ದಾಣದ ಪ್ರವೇಶ ಹಂತದಲ್ಲಿ ಉಷ್ಣ ತಪಾಸಣೆ (ಥರ್ಮಲ್ ಸ್ಕ್ಯಾನಿಂಗ್) ಮಾಡಲಾಗುತ್ತದೆ. ಆಗ ಮಾತ್ರ ನೀವು ಪ್ರಯಾಣ ಮಾಡಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲಾಗುತ್ತದೆ.
- ನೀವು ವಿಮಾನ ನಿಲ್ದಾಣದಲ್ಲಿ ಕೂಡ ಆರೋಗ್ಯ ಸೇತು ಆ್ಯಪ್ ಬಳಸಬಹುದು.
- ವಿಮಾನ ನಿಲ್ದಾಣದಲ್ಲಿ ಆಹಾರ ಮತ್ತು ಪಾನೀಯವಿದೆ, ನೀವು ಪ್ರವಾಸಕ್ಕೆ ಆಹಾರವನ್ನು ಪ್ಯಾಕ್ ಮಾಡಬಹುದು.
- ವಿಮಾನ ಪ್ರವೇಶಿಸುವ ಮೊದಲು ವಿಮಾನಯಾನ ಸಂಸ್ಥೆಗಳು ನಿಮ್ಮ ಥರ್ಮಲ್ ಸ್ಕ್ಯಾನಿಂಗ್ ಮಾಡಬಹುದು.
- ಹಾರಾಟದ ವೇಳೆ ನಿಮಗೆ ಆಹಾರವನ್ನು ನೀಡಲಾಗುವುದಿಲ್ಲ.
- ವಿಮಾನ ನಿಲ್ದಾಣದೊಳಗೆ ಸಾಮಾಜಿಕ ದೂರವನ್ನು ಅನುಸರಿಸಬೇಕು.

ದೆಹಲಿ ವಿಮಾನ ನಿಲ್ದಾಣದಿಂದ ಸುಮಾರು 380 ವಿಮಾನಗಳು ಕಾರ್ಯನಿರ್ವಹಿಸಲಿವೆ ಎಂಬುದು ಗಮನಾರ್ಹ. ವಿಮಾನ ನಿಲ್ದಾಣದಿಂದ ಸುಮಾರು 190 ವಿಮಾನಗಳು ಹೊರಡಲಿದ್ದು ಸುಮಾರು 190 ವಿಮಾನಗಳು ಇಲ್ಲಿಗೆ ಬಂದು ಇಳಿಯಲಿವೆ.
 

Trending News