'ಮಗಳೇ ನಾನು ನಿನ್ನ ಮಾತನ್ನು ಕೇಳುವೆ.. ಕೆಳಗಿಳಿ' ಸಾರ್ವಜನಿಕ ಸಭೆಯಲ್ಲಿ ಏಕಾಏಕೀ ಟವರ್ ಹತ್ತಿದ ಯುವತಿ.. ವಿಡಿಯೋ ನೋಡಿ!

Five State Assembly Elections 2023: ತೆಲಂಗಾಣದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಶನಿವಾರ ಪ್ರಧಾನಿ ಮೋದಿ ಸಾರ್ವಜನಿಕ ಸಭೆಗಾಗಿ ಸಿಕಂದರಾಬಾದ್ ಗೆ ಆಗಮಿಸಿದ್ದಾರೆ, ಈ ಸಂದರ್ಭದಲ್ಲಿ ಭಾಷಣದ ವೇಳೆ ಪ್ರಧಾನಿ ಮೋದಿ ಅವರು ಒಂದು ವಿಚಿತ್ರ ಪರಿಸ್ಥಿತಿ ಎದುರಿಸಬೇಕಾದ ಸ್ಥಿತಿ ಬಂದಿದೆ.  ಪ್ರಧಾನಮಂತ್ರಿಯವರ ಸಾರ್ವಜನಿಕ ಸಭೆಯ ಸಂದರ್ಭದಲ್ಲಿ, ಹುಡುಗಿಯೊಬ್ಬಳು ಬೆಳಕು-ಧ್ವನಿಗಾಗಿ ತಾತ್ಕಾಲಿಕವಾಗಿ ನಿರ್ಮಿಸಲಾದ ಟವರ್ ಅನ್ನು ಹತ್ತಿದ್ದಾಳೆ. (Political News In Kannada)  

Written by - Nitin Tabib | Last Updated : Nov 11, 2023, 08:26 PM IST
  • ಭಾಷಣದ ವೇಳೆ ಹಲವು ಬಾರಿ ಪ್ರಧಾನಿ ಯುವತಿಗೆ 'ಮಗಳೇ, ನಾನು ನಿನ್ನ ಮಾತು ಕೇಳುತ್ತೇನೆ, ಕೆಳಗಿಳಿ...
  • ಇದು ಸರಿಯಾದ ವಿಧಾನ ಅಲ್ಲ. ಅಲ್ಲಿ ಶಾರ್ಟ್ ಸರ್ಕೀಟ್ ಆಗುವ ಸಾಧ್ಯತೆ ಇದೆ ಕೆಳಗಿಳಿ ಎಂದು' ಮನವಿ ಮಾಡಿದ್ದಾರೆ.
  • ಅಷ್ಟೇ ಅಲ್ಲ ನಾನು ಕೇವಲ ನಿಮಗೋಸ್ಕರ ಆಗಮಿಸಿದ್ದೇನೆ. ಹೀಗೆ ಮಾಡುವುದರಿಂದ ಏನೂ ಲಾಭವಾಗುವುದಿಲ್ಲ. ಅಲ್ಲಿ ತಂತಿ ಸರಿಯಾಗಿಲ್ಲ..
  • ನೀನು ಕೃಷ್ಣಾಜಿ ಅವರ ಮಾತನ್ನು ಕೇಳಿ ಪ್ಲೀಸ್ ದಯವಿಟ್ಟು ಕೆಳಗಿಳಿದು ಬಾ...' ಎಂದು ಹೇಳಿದ್ದಾರೆ.
'ಮಗಳೇ ನಾನು ನಿನ್ನ ಮಾತನ್ನು ಕೇಳುವೆ.. ಕೆಳಗಿಳಿ' ಸಾರ್ವಜನಿಕ ಸಭೆಯಲ್ಲಿ ಏಕಾಏಕೀ ಟವರ್ ಹತ್ತಿದ ಯುವತಿ.. ವಿಡಿಯೋ ನೋಡಿ! title=

Five State Assembly Elections 2023: ತೆಲಂಗಾಣದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಶನಿವಾರ ಸಿಕಂದರಾಬಾದ್ ತಲುಪಿದ ಪ್ರಧಾನಿ ನರೇಂದ್ರ ಮೋದಿ ವಿಚಿತ್ರ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಪ್ರಧಾನಮಂತ್ರಿಯವರ ಸಾರ್ವಜನಿಕ ಸಭೆಯ ಸಂದರ್ಭದಲ್ಲಿ, ಹುಡುಗಿಯೊಬ್ಬಳು ಬೆಳಕು-ಧ್ವನಿಗಾಗಿ ತಾತ್ಕಾಲಿಕವಾಗಿ ನಿರ್ಮಿಸಲಾದ ಟವರ್ ವೊಂದರ ಮೇಲೆ ಏರಿದ್ದಾಳೆ.  ಆಕೆ ಈ ರೀತಿ ಮಾಡುವುದನ್ನು ನೋಡಿದ ಪ್ರಧಾನಿ ಮೋದಿ, ವೇದಿಕೆಯಿಂದ ಆಕೆಯನ್ನು ಕೆಳಗಿಳಿಯುವಂತೆ, 'ಮಗಳೇ, ನಾನು ನಿನ್ನ ಮಾತು ಕೇಳುತ್ತೇನೆ, ಕೆಳಗಿಳಿ...' ಎಂದು ಮೈಕ್ ಮೂಲಕವೇ ವಿನಂತಿಸಿದ್ದಾರೆ. (Political News In Kannada)

ಭಾಷಣದ ವೇಳೆ ಹಲವು ಬಾರಿ  ಪ್ರಧಾನಿ ಯುವತಿಗೆ 'ಮಗಳೇ, ನಾನು ನಿನ್ನ ಮಾತು ಕೇಳುತ್ತೇನೆ, ಕೆಳಗಿಳಿ... ಇದು ಸರಿಯಾದ ವಿಧಾನ ಅಲ್ಲ. ಅಲ್ಲಿ ಶಾರ್ಟ್ ಸರ್ಕೀಟ್ ಆಗುವ ಸಾಧ್ಯತೆ ಇದೆ ಕೆಳಗಿಳಿ ಎಂದು' ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ ನಾನು ಕೇವಲ ನಿಮಗೋಸ್ಕರ ಆಗಮಿಸಿದ್ದೇನೆ. ಹೀಗೆ ಮಾಡುವುದರಿಂದ ಏನೂ ಲಾಭವಾಗುವುದಿಲ್ಲ. ಅಲ್ಲಿ ತಂತಿ ಸರಿಯಾಗಿಲ್ಲ.. ನೀನು ಕೃಷ್ಣಾಜಿ ಅವರ ಮಾತನ್ನು ಕೇಳಿ ಪ್ಲೀಸ್ ದಯವಿಟ್ಟು ಕೆಳಗಿಳಿದು ಬಾ...' ಎಂದು ಹೇಳಿದ್ದಾರೆ. ಪ್ರಧಾನಿ ಮನವಿಗೆ ಕೊನೆಗೆ ಯುವತಿ ಟವರ್ ನಿಂದ ಕೆಳಗಿಳಿದಿದ್ದಾಳೆ. ಆದರೆ ಆ ಯುವತಿ ಹೀಗೆ ಮಾಡಿದ್ದಾದ್ದರು ಯಾಕೆ ಎಂಬುದು ಇನ್ನೂ ಸ್ಪಷ್ಟವಾಗಬೇಕಿದೆ.  ಆದರೆ ,ಯುವತಿ ಪ್ರಧಾನಿ ಜೊತೆಗೆ ಮಾತನಾಡಲು ಬಯಸಿದ್ದಳು ಎನ್ನಲಾಗಿದೆ. ಇದಕ್ಕೂ ಮುನ್ನ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಡವರ ಕಲ್ಯಾಣವೇ ನಮ್ಮ ಸರ್ಕಾರದ ಆದ್ಯತೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
 
ತೆಲಂಗಾಣ ಜನತೆಗೆ ನಿರಾಸೆ ಮೂಡಿಸಿದೆ
ತಮ್ಮ ಭಾಷಣದಲ್ಲಿ ಟಿಆರ್‌ಎಸ್ ಸರ್ಕಾರವನ್ನು ಗುರಿಯಾಗಿಟ್ಟುಕೊಂಡ ಪ್ರಧಾನಿ, 10 ವರ್ಷಗಳ ಹಿಂದೆ ಇಲ್ಲಿ ರಚನೆಯಾದ ಸರ್ಕಾರಕ್ಕೆ ತೆಲಂಗಾಣದ ಹೆಮ್ಮೆ ಮತ್ತು ಗೌರವವನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ತೆಲಂಗಾಣದ ಜನರ ಸಾಮರ್ಥ್ಯವನ್ನು ಜಗತ್ತು ಮೆಚ್ಚುತ್ತದೆ. ಆದರೆ, ತೆಲಂಗಾಣ ಸರ್ಕಾರ ಜನರಿಗೆ ನಿರಾಸೆ ಮೂಡಿಸಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-ಮಹಿಳೆಯರಿಗೊಂದು ಗುಡ್ ನ್ಯೂಸ್, ವಾಸಕ್ಕೆ ಶಾಶ್ವತ ಮನೆಯ ಜೊತೆಗೆ ಸರ್ಕಾರದಿಂದ ಧನಸಹಾಯ ಸಿಗಲಿದೆ!

ದಲಿತರ ಆಕಾಂಕ್ಷೆಗಳನ್ನು ಕೆಸಿಆರ್ ನುಚ್ಚುನೂರು ಮಾಡಿದ್ದಾರೆ
ಜನರನ್ನುದ್ದೇಶಿಸಿ ಮಾತನಾಡಿದ ಅವರು, ಚಳವಳಿಯ ಸಂದರ್ಭದಲ್ಲಿ ತೆಲಂಗಾಣಕ್ಕೆ ದಲಿತರೊಬ್ಬರನ್ನು ಮೊದಲ ಸಿಎಂ ಮಾಡುವುದಾಗಿ ಭರವಸೆ ನೀಡಲಾಗಿತ್ತು, ಆದರೆ, ರಾಜ್ಯ ರಚನೆಯಾದ ನಂತರ ಕೆಸಿಆರ್ ಸಿಎಂ ಆದರು ಮತ್ತು ತನ್ಮೂಲಕ ಅವರು ದಲಿತರ ಆಶಯಗಳನ್ನು ನುಚ್ಚುನೂರು ಮಾಡಿದರು" ಎಂದು ಪ್ರಧಾನಿ ಹೇಳಿದ್ದಾರೆ.

ಇದನ್ನೂ ಓದಿ-ರೈತರಿಗೂ ಒಂದು ಗುಡ್ ನ್ಯೂಸ್ ಎಲ್ಪಿಜಿ ಸಿಲಿಂಡರ್ ನಿಂದ ಹಿಡಿದು ಗೋದಿಯವರೆಗೆ ಎಲ್ಲವೂ ಸಿಗಲಿದೆ!

ಕಾಂಗ್ರೆಸ್ ಅನ್ನು ಕೂಡ ಗುರಿಯಾಗಿಸಿದ್ದಾರೆ
ಟಿಆರ್ಎಸ್ ಹೇಗೆದಲಿತ ವಿರೋಧಿಯಾಗಿದೆಯೋ, ಕಾಂಗ್ರೆಸ್ ಕೂಡ ಅದರಂತೆಯೇ ಇದೆ ಎಂದು ಪ್ರಧಾನಿ ಹೇಳಿದ್ದಾರೆ. ಹೊಸ ಸಂವಿಧಾನಕ್ಕೆ ಆಗ್ರಹಿಸಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಟಿಆರ್ಎಸ್ ಅವಮಾನ ಮಾಡಿದೆ. ಕಾಂಗ್ರೆಸ್‌ಗೂ ಅದೇ ಇತಿಹಾಸವಿದೆ. ಬಾಬಾ ಸಾಹೇಬರನ್ನು ಎರಡು ಬಾರಿ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಬಿಡಲಿಲ್ಲ ಎಂದು ಹೇಳಿದ್ದಾರೆ.
 

ಇಲ್ಲಿದೆ ವಿಡಿಯೋ-

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News