ನವದೆಹಲಿ: ಭಾನುವಾರ ಮಧ್ಯಾಹ್ನ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಗೋದಾವರಿ ನದಿಯಲ್ಲಿ ಪ್ರವಾಸಿ ದೋಣಿ ಪಲ್ಟಿಯಾದ ನಂತರ ಐವರು ಸಾವನ್ನಪ್ಪಿದ್ದಾರೆ ಮತ್ತು 30 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ.
ರಾಜ್ಯ ಪ್ರವಾಸೋದ್ಯಮ ಮಂಡಳಿಯು ನಿರ್ವಹಿಸುತ್ತಿದ್ದ ದೋಣಿಯಲ್ಲಿ 63 ಜನರಿದ್ದರು ಎನ್ನಲಾಗಿದೆ, ಅವರಲ್ಲಿ 23 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇವಿಪಟ್ನಂ ಮಂಡಲದ ಕಾಚುಲೂರು ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ದೇವಿಪಟ್ನಂ ಬಳಿಯ ಗಂಡಿ ಪೋಚಮ್ಮ ದೇವಸ್ಥಾನದ ಹತ್ತಿರವಿರುವ ಪ್ರಮುಖ ಪ್ರವಾಸಿ ತಾಣವಾದ ಸುಂದರವಾದ ಪಾಪಿಕೊಂಡಲು ಪರ್ವತ ಶ್ರೇಣಿಯಿಂದ ದೋಣಿ ಪ್ರಾರಂಭವಾಗಿತ್ತು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
Andhra Pradesh: Four dead in the incident where a tourist boat carrying 61 people capsized in Godavari river in Devipatnam, East Godavari district today. Chief Minister Jagan Mohan Reddy has announced Rs 10 lakhs ex-gratia each to the families of the deceased. pic.twitter.com/HEbeUi4f9Z
— ANI (@ANI) September 15, 2019
ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಒಎನ್‌ಜಿಸಿ) ಹೆಲಿಕಾಪ್ಟರ್‌ಗಳು ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗೆ ಕರೆಸಿಕೊಳ್ಳಲಾಗಿದೆ. ಈಗಾಗಲೇ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಅವರು ರಕ್ಷಣಾ ಕಾರ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಈ ಘಟನೆ ನಡೆದಾಗ ಭಾನುವಾರ ಮಧ್ಯಾಹ್ನ 5 ಲಕ್ಷ ಕ್ಯೂಸೆಕ್‌ಗಳಷ್ಟು ಪ್ರವಾಹದ ನೀರು ಗೋದಾವರಿಯಲ್ಲಿ ಹರಿಯುತ್ತಿತ್ತು ಎನ್ನಲಾಗಿದೆ.
ಈ ಘಟನೆ ಈಗ ಮಧ್ಯಪ್ರದೇಶದಲ್ಲಿ ಗಣೇಶ್ ಚತುರ್ತಿ ನಿಮಿತ್ತ ವಿಗ್ರಹ ಮುಳುಗಿಸಲು ಹೋದಾಗ ಕೊಚ್ಚಿಹೋದ ಘಟನೆ ನಂತರ ನಡೆದಿದೆ.