ಯುಎಇಯಲ್ಲಿ ಕಲ್ಲಿನಿಂದ ನಿರ್ಮಿಸಲಾದ ಮೊದಲ ಹಿಂದೂ ದೇವಾಲಯ : ಪ್ರಧಾನಿಯಿಂದ ಉದ್ಘಾಟನೆ

UAE : ಯುಎಇಯಲ್ಲಿ ಕಲ್ಲಿನಿಂದ ನಿರ್ಮಿಸಲಾದ ಮೊದಲ ಹಿಂದೂ ದೇವಾಲಯವು ಫೆ.೧೪ರಂದು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ

Written by - Zee Kannada News Desk | Last Updated : Feb 12, 2024, 09:37 PM IST
  • ಯುಎಇಯಲ್ಲಿ ಕಲ್ಲಿನಿಂದ ನಿರ್ಮಿಸಲಾದ ಮೊದಲ ಹಿಂದೂ ದೇವಾಲಯವು ಫೆ.೧೪ರಂದು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.
  • ಅದರ ಉದ್ಘಾಟನೆ ಫೆ.೧೪ರಂದು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.
  • ದೇವಸ್ಥಾನ ಆವರಣದಲ್ಲಿ ಭಾರತ ಮೂಲದ ಮಕ್ಕಳು ಮೂರು ತಿಂಗಳಿಂದ ಪ್ರತಿ ವಾರಾಂತ್ಯ 'ಕಲ್ಲಿನ ಸೇವೆ' ಸಲ್ಲಿಸುತ್ತಿದ್ದಾರೆ.
ಯುಎಇಯಲ್ಲಿ ಕಲ್ಲಿನಿಂದ ನಿರ್ಮಿಸಲಾದ ಮೊದಲ ಹಿಂದೂ ದೇವಾಲಯ : ಪ್ರಧಾನಿಯಿಂದ ಉದ್ಘಾಟನೆ title=

Hindu temple Inauguration by narendra modi : ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಬೋಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿ ನಾರಾಯಣ ಸಂಸ್ಥಾ ಕಲ್ಲಿನಿಂದ ನಿರ್ಮಿಸಲಾದ ಮೊದಲ ಹಿಂದೂ ದೇವಾಲಯವನ್ನು ನಿರ್ಮಿಸಿದ್ದು, ಅದರ ಉದ್ಘಾಟನೆ  ಫೆ.೧೪ರಂದು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. 

ದೇವಸ್ಥಾನ ಆವರಣದಲ್ಲಿ ಭಾರತ ಮೂಲದ ಮಕ್ಕಳು ಮೂರು ತಿಂಗಳಿಂದ ಪ್ರತಿ ವಾರಾಂತ್ಯ 'ಕಲ್ಲಿನ ಸೇವೆ' ಸಲ್ಲಿಸುತ್ತಿದ್ದಾರೆ. ಉದ್ಘಾಟನಾ ಸಮಾರಂಭಕ್ಕೆ ಹಾಜರಾಗುವ ಅತಿಥಿಗಳಿಗೆ ಉಡುಗೊರೆ ನೀಡುವ ಸಲುವಾಗಿ ಕಲ್ಲುಗಳ ವರ್ಣಚಿತ್ರ ರಚಿಸುತ್ತಿದ್ದಾರೆ. ಇದಕ್ಕೆ 'ಟೈನಿ ಟ್ರೆಶರ್ಸ್' ಎಂದು ಹೆಸರಿಡಲಾಗಿದೆ. 

ಇದನ್ನು ಓದಿ : ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಬಲ ಪಡಿಸುವ ಗುರಿ : ಫೆ.14ರಂದು ಕತಾರ್ ಗೆ ಮೋದಿ ಭೇಟಿ

ಸುಮಾರು 80 ಸಾವಿರ ಜನರು ಪಾಲ್ಗೊಳ್ಳುವಂತೆ ಕಾರ್ಯಕ್ರಮ ರೂಪಿಸಲಾಗಿತ್ತು. ಆದರೆ ಈಗ ಆ ಸಂಖ್ಯೆಯನ್ನು 35 ಸಾವಿರಕ್ಕೆ ಇಳಿಸಲಾಗಿದೆ ಎಂದು ಅಲ್ಲಿಯ ಭಾರತೀಯ ಸಮುದಾಯ ಮುಖಂಡರೊಬ್ಬರು ತಿಳಿಸಿದ್ದಾರೆ.

ಇದನ್ನು ಓದಿ : Indian Navy Officers: ಸಂಭ್ರಮ ತಂದ ಕತಾರ್‌ನಲ್ಲಿ ಶಿಕ್ಷೆಗೊಳಗಾಗಿದ್ದ ನೌಕಾಪಡೆಯ ಅಧಿಕಾರಿಗಳ ಪುನರಾಗಮನ

ಕಲ್ಲಿನ ಒಂದು ಬದಿಯಲ್ಲಿ ಹಿತೋಪದೇಶ ಬರೆದಿದ್ದರೆ, ಮತ್ತೊಂದು ಬದಿಯಲ್ಲಿ ದೇವಸ್ಥಾನದ ಯಾವುದಾದರೂ ಒಂದು ಭಾಗವನ್ನು ನಿರ್ಮಿಸಲಾಗಿದೆ. ಅದರ ಜೊತೆಗೆ ದೇವಸ್ಥಾನ ನಿರ್ಮಾಣದ ಸ್ಥಳದಲ್ಲಿ ಸಿಕ್ಕಿರುವ ಚಿಕ್ಕ ಕಲ್ಲುಗಳು ಆಯ್ದು. ಅವನ್ನು ಸ್ವಚ್ಛಗೊಳಿಸಿ ಪೇಯಿಂಟ್ ಮಾಡಲಾಗಿದೆ. ಅದಕ್ಕೆ ವಾರ್ನಿಷ್ ಬಳಿಯಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News