ಮುಂಬೈ: ಪರೇಲ್ ಕ್ರಿಸ್ಟಲ್ ಟವರ್‌ನಲ್ಲಿ ಅಗ್ನಿ ಅವಘಡ

10 ರಿಂದ 12 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ.

Last Updated : Aug 22, 2018, 10:00 AM IST
ಮುಂಬೈ: ಪರೇಲ್ ಕ್ರಿಸ್ಟಲ್ ಟವರ್‌ನಲ್ಲಿ ಅಗ್ನಿ ಅವಘಡ title=

ಮುಂಬೈ: ದಕ್ಷಿಣ ಮುಂಬಯಿಯ ಪಾರೆಲ್ ಪ್ರದೇಶದಲ್ಲಿರುವ ಕ್ರಿಸ್ಟಲ್ ಟವರ್‌ನಲ್ಲಿ ಬುಧವಾರ ಬೆಳಿಗ್ಗೆ (ಆಗಸ್ಟ್ 22) ಅಗ್ನಿ ಅವಘಡ ಸಂಭವಿಸಿದೆ. ಟವರ್‌ನ 12 ನೇ ಮಹಡಿಯಲ್ಲಿ ಈ ಅವಘಡ ಉಂಟಾಗಿದೆ. ಕ್ರಿಸ್ಟಲ್ ಟವರ್ ಒಂದು ವಸತಿ ಕಟ್ಟಡ ಎಂದು ಹೇಳಲಾಗುತ್ತಿದ್ದು, ಅಗ್ನಿಶಾಮಕ ಎಚ್ಚರಿಕೆಯ ನಂತರ ಫೈರ್ ಬ್ರಿಗೇಡ್ ತಂಡದವರು ಸ್ಥಳಕ್ಕೆ ಆಗಮಿಸಿದರು. 10 ರಿಂದ 12 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ.

ಮಾಹಿತಿಯ ಪ್ರಕಾರ,  ಹಿಂದ್ಮಾತಾ ಸಿನೆಮಾ ಬಳಿ ಇರುವ ಕ್ರಿಸ್ಟಲ್ ಟವರ್‌ 15 ಅಂತಸ್ತಿನ ಕಟ್ಟಡವಾಗಿದೆ. ಈ ಕಟ್ಟಡದ 12 ನೇ ಅಂತಸ್ತಿನಲ್ಲಿ ವ್ಯಾಪಕವಾಗಿ ಬೆಂಕಿಯ ಕೆನ್ನಾಲಿಗೆ ಚಾಚಿದ್ದು, ಬಹಳ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವುದರ ಜೊತೆಗೆ ಅಪಾಯದಲ್ಲಿ ಸಿಲುಕಿರುವವರ ರಕ್ಷಣೆಯಲ್ಲಿ ತೊಡಗಿದೆ. ಜನರನ್ನು ಕ್ರೇನ್ ಗಳ ಮೂಲಕ ಕೆಳಗಿಳಿಸಲಾಗುತ್ತಿದೆ.

Trending News