ರಾಹುಲ್ ಗಾಂಧಿ ವಿರುದ್ಧ ಮತ್ತೊಂದು ಮಾನಹಾನಿ ಪ್ರಕರಣ ದಾಖಲು 

ಆರ್‌ಎಸ್‌ಎಸ್ ಕಾರ್ಯಕರ್ತ ಕಮಲ್ ಭದೌರಿಯಾ ಈ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ಅದರ ವಿಚಾರಣೆಯು ಏಪ್ರಿಲ್ 12 ರಂದು ಪ್ರಾರಂಭವಾಗಲಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

Last Updated : Apr 1, 2023, 05:39 PM IST
  • ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷವನ್ನು ಪಾಂಡವರಿಗೆ ಹೋಲಿಸಿದರು.
  • ಪಾಂಡವರು ಎಂದಾದರೂ ಬಡವರ ವಿರುದ್ಧ ಕೆಲಸ ಮಾಡಿದ್ದಾರಾ?
  • ಅವರು ನೋಟು ಅಮಾನ್ಯೀಕರಣ, ತಪ್ಪು ಜಿಎಸ್‌ಟಿಯನ್ನು ಜಾರಿಗೊಳಿಸಿದ್ದಾರೆಯೇ?
ರಾಹುಲ್ ಗಾಂಧಿ ವಿರುದ್ಧ ಮತ್ತೊಂದು ಮಾನಹಾನಿ ಪ್ರಕರಣ ದಾಖಲು  title=
file photo

ನವದೆಹಲಿ: ಆರ್‌ಎಸ್‌ಎಸ್ 21ನೇ ಶತಮಾನದ ಕೌರವರ ಹೇಳಿಕೆಗೆ ಸಂಬಂಧಿಸಿದಂತೆ ಹರಿದ್ವಾರದ ನ್ಯಾಯಾಲಯದಲ್ಲಿ ಆರೆಸ್ಸೆಸ್ ಕಾರ್ಯಕರ್ತರೊಬ್ಬರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಇದನ್ನೂ ಓದಿ- ಚಹಾದೊಂದಿಗೆ ಈ ಆಹಾರಗಳ ಸೇವನೆ ತುಂಬಾ ಅಪಾಯಕಾರಿ

ಆರ್‌ಎಸ್‌ಎಸ್ ಕಾರ್ಯಕರ್ತ ಕಮಲ್ ಭದೌರಿಯಾ ಈ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ಅದರ ವಿಚಾರಣೆಯು ಏಪ್ರಿಲ್ 12 ರಂದು ಪ್ರಾರಂಭವಾಗಲಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಭಾರತ್ ಜೋಡೋ ಯಾತ್ರೆಯು ಹರಿಯಾಣದಲ್ಲಿದ್ದಾಗ, ರಾಹುಲ್ ಗಾಂಧಿ,"ಕೌರವರು ಯಾರು? 21ನೇ ಶತಮಾನದ ಕೌರವರ ಬಗ್ಗೆ ನಾನು ನಿಮಗೆ ಹೇಳುತ್ತೇನೆ.ಅವರು ಖಾಕಿ ಅರ್ಧ ಪ್ಯಾಂಟ್ ಧರಿಸುತ್ತಾರೆ,ಕೈಯಲ್ಲಿ ಲಾಠಿ ಹಿಡಿದು ಶಾಖಾಗಳನ್ನು ಹಿಡಿದಿರುತ್ತಾರೆ.ಭಾರತದ 2 -3 ಕೋಟ್ಯಾಧಿಪತಿಗಳು ಕೌರವರ ಜೊತೆ ನಿಂತಿದ್ದಾರೆ." ಎಂದು ಹೇಳಿದರು.

ಇದನ್ನೂ ಓದಿ- Health Tips: ಈ ಬೇಸಿಗೆಯಲ್ಲಿ ಮಾವಿನ ಹಣ್ಣು ಸೇವಿಸಿ ಆರೋಗ್ಯವಂತರಾಗಿರಿ

ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷವನ್ನು ಪಾಂಡವರಿಗೆ ಹೋಲಿಸಿದರು.ಪಾಂಡವರು ಎಂದಾದರೂ ಬಡವರ ವಿರುದ್ಧ ಕೆಲಸ ಮಾಡಿದ್ದಾರಾ? ಅವರು ನೋಟು ಅಮಾನ್ಯೀಕರಣ, ತಪ್ಪು ಜಿಎಸ್‌ಟಿಯನ್ನು ಜಾರಿಗೊಳಿಸಿದ್ದಾರೆಯೇ?) ಅವರು ಎಂದಾದರೂ ಹಾಗೆ ಮಾಡುತ್ತಿದ್ದರೇ? ಏಕೆಂದರೆ  ನೋಟು ಅಮಾನ್ಯೀಕರಣ, ಜಿಎಸ್‌ಟಿ, ಕೃಷಿ ಕಾನೂನುಗಳು ಈ ಭೂಮಿಯನ್ನು ತಪಸ್ವಿಗಳಿಂದ ಕದಿಯಲು ಒಂದು ತಪ್ಪು ಮಾರ್ಗ ಎಂದು ಅವರು ತಿಳಿದಿದ್ದರು, ”ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ಇತ್ತೀಚಿಗೆ ಮೋದಿ ಉಪನಾಪದ ಕುರಿತಾಗಿ ಮಾಡಿದ ಟೀಕೆಗಾಗಿ ಅವರು ಕೋರ್ಟ್ ತೀರ್ಪಿನ ನಂತರ ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಂಡಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News