ಫಾನಿ ಚಂಡಮಾರುತ ಭೀತಿಯಲ್ಲಿ ಒಡಿಶಾ; ಸುಮಾರು 8 ಲಕ್ಷ ಜನರ ಸ್ಥಳಾಂತರ

ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಫಾನಿ ಚಂಡಮಾರುತವು ಪ್ರಕೃತ ಬಂಗಾಲ ಕೊಲ್ಲಿಯ ಪಶ್ಚಿಮ ಮಧ್ಯದಲ್ಲಿ, ಒಡಿಶಾದ ಪುರಿಯಿಂದ ಸುಮಾರು 450 ನೈಋತ್ಯದಲ್ಲಿದ್ದು, ಶುಕ್ರವಾರ ಮಧ್ಯಾಹ್ನದ ವೇಳೆಗೆ ಅಪ್ಪಳಿಸುವ ಸಾಧ್ಯತೆಯಿದೆ. 

Last Updated : May 2, 2019, 01:30 PM IST
ಫಾನಿ ಚಂಡಮಾರುತ ಭೀತಿಯಲ್ಲಿ ಒಡಿಶಾ; ಸುಮಾರು 8 ಲಕ್ಷ ಜನರ ಸ್ಥಳಾಂತರ title=
Pic Courtesy: IANS

ಭುವನೇಶ್ವರ : ಒಡಿಶಾ ಕರಾವಳಿಗೆ ಶುಕ್ರವಾರ ಫಾನಿ ಚಂಡಮಾರುತ ಅಪ್ಪಳಿಸುವ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಗ್ಗು ಪ್ರದೇಶಗಲಲ್ಲಿ ನೆಲೆಸಿರುವ ಸುಮಾರು 8 ಲಕ್ಷ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಫಾನಿ ಚಂಡಮಾರುತವು ಪ್ರಕೃತ ಬಂಗಾಲ ಕೊಲ್ಲಿಯ ಪಶ್ಚಿಮ ಮಧ್ಯದಲ್ಲಿ, ಒಡಿಶಾದ ಪುರಿಯಿಂದ ಸುಮಾರು 450 ನೈಋತ್ಯದಲ್ಲಿದ್ದು, ಶುಕ್ರವಾರ ಮಧ್ಯಾಹ್ನದ ವೇಳೆಗೆ ಅಪ್ಪಳಿಸುವ ಸಾಧ್ಯತೆಯಿದೆ. ಆಂಧ್ರ ಪ್ರದೇಶದ ವಿಶಾಖಪಟ್ಟಣದಿಂದ ಸುಮಾರು 225 ಕಿ.ಮೀ. ಆಗ್ನೇಯದಲ್ಲಿ ಮತ್ತು ಪಶ್ಚಿಮ ಬಂಗಾಲದ ದಿಘಾ ದಿಂದ ಸುಮಾರು 650 ಕಿ.ಮೀ. ನೈಋತ್ಯದಲ್ಲಿ ಇದೆ ಎಂದು ತಿಳಿದುಬಂದಿದೆ. ಈ ಬೆನ್ನಲ್ಲೇ ಒಡಿಶಾ ಕರಾವಳಿ ಭಾಗದಲ್ಲಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

JWTC ಚಂಡಮಾರುತ ಮಾಹಿತಿ ಕೇಂದ್ರದ ಪ್ರಕಾರ 1999ರಲ್ಲಿ ಅಪ್ಪಳಿಸಿದ್ದ ಭಯಂಕರ ಸೂಪರ್ ಸೈಕ್ಲೋನ್ ಗಿಂತಲೂ ಫಾನಿ ಚಂಡಮಾರುತ ಬಹಳ ತೀವ್ರ ಸ್ವರುಪದ್ದಾಗಿದ್ದು, ಜಗನ್ನಾಥ್ ಪುರಿಯಲ್ಲಿ ಗರ್ಜಿಸುವ ಸಾಧ್ಯತೆಯಿದೆ. ಅಲ್ಲದೆ,  ಚಂಡಮಾರುತದ ಅಂದಾಜು ವೇಗವು ಗಂಟೆಗೆ 175ರಿಂದ 180 ಕಿ.ಮೀ. ಇದ್ದು ತೀವ್ರ ಮಟ್ಟದಲ್ಲಿ ಇದು 200 ಕಿ.ಮೀ. ವೇಗವನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ. 

ಈ ಹಿನ್ನೆಲೆಯಲ್ಲಿ ಒಡಿಶಾ ಕರಾವಳಿ ಭಾಗಗಳಲ್ಲಿ ವಾಯುಸೇನೆ, ಭೂಸೇನೆ, ಮತ್ತು ನೌಕಾ ಪಡೆಗಳಿಗೆ ಯಾವುದೇ ಸಂದರ್ಭದಲ್ಲಿ ಚಂಡಮಾರುತ ಎದುರಿಸಲು ಸಿದ್ಧರಾಗಿರುವಂತೆ ಸೂಚನೆ ನೀಡಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್), ಒಡಿಶಾ ವಿಪತ್ತು ನಿರ್ವಹಣಾ ಪಡೆ (Odiaraf) ಮತ್ತು ಅಗ್ನಿಶಾಮಕ ಸೇವೆಗಳನ್ನು ಸುಕಹ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Trending News