ಕೊರೊನಾ ಹುಟ್ಟು ಹಾಕಿದೆ ಈ ಸಮಸ್ಯೆ
ಕೊರೊನಾ ಮಹಾಮಾರಿ ಎಲ್ಲಾ ಕ್ಷೇತ್ರಗಳ ಮೇಲೂ ತನ್ನ ಪ್ರಭಾವ ಬೀರಿದೆ. ಫ್ಯಾಕ್ಟರಿ ಹಾಗೂ ಇಂಡಸ್ಟ್ರಿಗಳು ಸ್ಥಗಿತಗೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ಉದ್ಯೋಗಿಗಳ ಮೇಲೆ ಇದರ ಪ್ರಭಾವ ಉಂಟಾಗುವುದು ಸಾಮಾನ್ಯ. ಇಂದು ಉದ್ಯೋಗಿಗಳು ಒಟ್ಟು ಮೂರು ರೀತಿಯ ಸ್ಥಿತಿಗಳನ್ನು ಎದುರಿಸುತ್ತಿದ್ದಾರೆ. ಕೆಲವರು ವೇತನ ಪಡೆಯದೇ ರಜೆಯ ಮೇಲಿದ್ದರೆ, ಕೆಲವರು ವೇತನ ಕಡಿತ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇನ್ನೂ ಹಲವರು ತಮ್ಮ ನೌಕರಿಯನ್ನು ಕಳೆದುಕೊಂಡಿದ್ದಾರೆ. ವೇತನ ಕಡಿತ ಅಥವಾ ನೌಕರಿ ಕಳೆದುಕೊಳ್ಳುವಿಕೆ ಎಂದರೆ ಜೀವನಶೈಲಿ ಹಾಗೂ ವೆಚ್ಚಗಳ ಮೇಲೆ ನೇರ ಪರಿಣಾಮ ಎಂದರ್ಥ. ಆದರೆ, ನೀವು ನಿಮ್ಮ ತಿಳುವಳಿಕೆಯನ್ನು ಬಳಸಿ ಇಂತಹ ಕಠಿಣ ಪರಿಸ್ಥಿತಿಯಿಂದ ಹೊರಬರಬಹುದಾಗಿದೆ. ಅಂತಹುದೇ ಕೆಲ ಟಿಪ್ಸ್ ಗಳನ್ನು ಇಲ್ಲಿ ನೀಡಲಾಗಿದೆ.
ವೆಚ್ಚದ ಮೇಲೆ ನಿಯಂತ್ರಣ ಹೇರಿ
ಲಾಕ್ ಡೌನ್ ಅವಧಿ ಒಂದು ಸಂಗತಿಯ ಕುರಿತು ತುಂಬಾ ಸ್ಪಷ್ಟನೆಯನ್ನು ನೀಡಿದೆ. ಅದೇನೆಂದರೆ, ಮೂಲಭೂತ ಖರ್ಚು ಹೆಚ್ಚಾಗಿರುವುದಿಲ್ಲ. ಹೊರಗಡೆ ಹೋಗಿ ಊಟಮಾಡುವುದು, ತಿರುಗಾಟ ಹಾಗೂ ದುಬಾರಿ ವಸ್ತುಗಳ ಖರೀದಿಯ ಕಾರಣ ಆರ್ಥಿಕ ಒತ್ತಡ ಹೆಚ್ಚಾಗುತ್ತದೆ. ಇವೆಲ್ಲವೂಗಳೂ ಅನಾವಶ್ಯಕ ಖರ್ಚುಗಳಾಗಿದ್ದು, ಇವುಗಳ ಮೇಲೆ ನಾವು ನಿಯಂತ್ರಣವನ್ನು ಹೇರಬಹುದು. ಇದು ನಾವು ಮಾಡುವ ವೆಚ್ಚದ ಸಮೀಕ್ಷೆ ನಡೆಸುವ ಸಮಯ. ನಮ್ಮ ಮೂಲಭೂತ ವೆಚ್ಚದಲ್ಲಿ ಕಡಿತಗೊಳಿಸುವ ಒಂದು ಸುಲಭದ ಮಾರ್ಗ ಎಂದರೆ ಕಡಿಮೆ ಬಾಡಿಗೆ ಇರುವ ಮನೆಗೆ ಸ್ಥಳಾಂತರಗೊಳ್ಳುವುದು. ಒಂದು ವೇಳೆ ನೀವು ಶೀಘ್ರವೇ ನೌಕರಿ ಸೇರಿದ್ದಾರೆ ಈ ವಿಷಯ ತುಂಬಾ ಮಹತ್ವದ್ದಾಗಿದೆ. ನಾವು ನಮ್ಮ ವೇತನದ ಹೆಚ್ಚಿನ ಭಾಗ ಮನೆ ಬಾಡಿಗೆ, ವಿದ್ಯುತ್-ನೀರು ಇತ್ಯಾದಿಗಳಿಗೆ ಖರ್ಚು ಮಾಡುತ್ತೇವೆ.
ಹೊಸ ಲೋನ್ ಪಡೆಯಬೇಡಿ
ಎಲ್ಲ ಕಡೆಗಳಿಂದ ಕೈ ಕಟ್ಟಿ ಹಾಕಲಾದ ಸಂದರ್ಭಗಳಲ್ಲಿ ಸಾಲ ಪಡೆಯುವುದು ಒಂದು ಆಕರ್ಷಕ ವಿಕಲ್ಪವಾಗಿ ಕಂಡುಬರುತ್ತದೆ. ಆದರೆ, ಈ ರೀತಿ ಮಾಡಬೇಡಿ. ಏಕೆಂದರೆ ಕಾಲಾಂತರದಲ್ಲಿ ಅದು ನಿಮಗೆ ಸಮಸ್ಯೆ ಉಂಟುಮಾಡಲಿದೆ ಎಂಬುದು ನೆನಪಿನಲ್ಲಿಡಿ. ಆದರೆ, ಒಂದು ವೇಳೆ ನೀವು ಈ ಮೊದಲೇ ಯಾವುದಾದರೊಂದ ಸಾಲ ಪಡೆದಿದ್ದರೆ, ಅದರ ಮಾಸಿಕ ಕಂತು ಪಾವತಿಸಲು ಮರೆಯದಿರಿ. ಸದ್ಯ ನೀಡಲಾಗಿರುವ ವಿನಾಯ್ತಿ ನಿಮಗೆ ಕೇವಲ ಅಲ್ಪಕಾಲಿಕ ನೆಮ್ಮದಿಯಾಗಿದ್ದು, ಮುಂದೆ ನಿಮಗೆ EMIಗಳ ಜೊತೆಗೆ ಬಡ್ಡಿ ಕೂಡ ಹೊರೆಯಾಗಲಿದೆ ಎಂಬುದು ಮರೆಯದಿರಿ. ಹಣಕಾಸಿನ ತೊಂದರೆಯಿಂದ ಪಾರಾಗುವ ಒಂದು ಉತ್ತಮ ವಿಕಲ್ಪ ಎಂದರೆ ನಿಮ್ಮ ಭವಿಷ್ಯ ನಿಧಿ ಖಾತೆಯಲ್ಲಿರುವ ಹಣದ ಬಳಕೆ. ಸದ್ಯ ಸರ್ಕಾರ ನಿಮಗೆ ನಿಮ್ಮ ಭವಿಷ್ಯನಿಧಿ ಖಾತೆಯಿಂದ ಶೇ.75 ರಷ್ಟು ಅಥವಾ ಮೂರು ತಿಂಗಳ ಬೇಸಿಕ್ ಸಂಬಳ ಪ್ಲಸ್ ತುಟ್ಟಿಭತ್ಯೆ ಹಿಂಪಡೆಯಲು ಅವಕಾಶ ಕಲ್ಪಿಸಿದೆ.
ಆದಾಯದ ಇತರ ಮೂಲಗಳನ್ನು ಸಹ ಹುಡುಕಾಡಿ
ವೇತನ ಕಡಿತ ಅಥವಾ ನೌಕರಿ ಕಳೆದುಕೊಳ್ಳುವುದರಿಂದ ಖರ್ಚು ನಿಭಾಯಿಸುವುದು ತುಂಬಾ ಕಷ್ಟಕರ ಎನಿಸಿದರೆ ನಿಮ್ಮ ಕೌಶಲ್ಯ ದಿಂದ ಹೆಚ್ಚುವರಿ ಆದಾಯ ಗಳಿಸಲು ಪ್ರಯತ್ನಿಸಿ.
ಲಿಕ್ವಿಡಿಟಿಯ ಬಂದೋಬಸ್ತ್ ಮಾಡಿ
ಈ ಅವಧಿಯಲ್ಲಿ ನಿಮಗೆ ತಿಂಗಳ ಹೂಡಿಕೆ ನಿಭಾಯಿಸುವುದು ಕಷ್ಟಕರವಾಗಬಹುದು. ಹೀಗಾಗಿ ಅಲ್ಪಾವಧಿಯ ಗುರಿ ಹೊಂದಿದ ಅನಾವಶ್ಯಕ ಖರ್ಚು ಎನಿಸುವ ಹೂಡಿಕೆಯಿಂದ ದೂರವಿರಿ. ಒಂದು ವೇಳೆ ನಿಮಗೆ ನಿಮ್ಮ ಖರ್ಚು ವೇತನದಲ್ಲಿ ಕಡಿತದ ಬಳಿಕವೂ ಕೂಡ ಉಳಿತಾಯವಾಗುತ್ತದೆ ಎಂದರೆ ಎಮರ್ಜೆನ್ಸಿ ಫಂಡ್ ಸೃಷ್ಟಿಸಿ. ಒಂದು ವೇಳೆ ಈಗಾಗಲೇ ಅದನ್ನು ಸೃಷ್ಟಿಸಿದ್ದರೆ ಅದನ್ನು ಬೆಳೆಸಿ.