ಕಳೆದ 5 ವರ್ಷಗಳಲ್ಲಿ ಭಾರತ ವಿಶ್ವದ ಅಗ್ರ ರಾಷ್ಟ್ರಗಳ ಸಾಲಿನಲ್ಲಿ ನಿಂತಿದೆ : ವಿದೇಶಾಂಗ ಸಚಿವ

ಜಾಗತಿಕ ಮರುಸಮತೋಲನವು ನಡೆಯುತ್ತಿದೆ ಮತ್ತು ಅದರ ಅತ್ಯಂತ ಸ್ಪಷ್ಟ ಉದಾಹರಣೆಯೆಂದರೆ ಚೀನಾ ಮತ್ತು ಭಾರತ ಎಂದು ವಿದೇಶಾಂಗ ಸಚಿವರು ಹೇಳಿದರು.  

Last Updated : Jun 6, 2019, 03:16 PM IST
ಕಳೆದ 5 ವರ್ಷಗಳಲ್ಲಿ ಭಾರತ ವಿಶ್ವದ ಅಗ್ರ ರಾಷ್ಟ್ರಗಳ ಸಾಲಿನಲ್ಲಿ ನಿಂತಿದೆ : ವಿದೇಶಾಂಗ ಸಚಿವ title=
Pic Courtesy: ANI

ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಭಾರತದ ವಿದೇಶಾಂಗ ನೀತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ವಿಶ್ವದ ಅಗ್ರ ರಾಷ್ಟ್ರಗಳ ಸಾಲಿನಲ್ಲಿಂದು ಭಾರತ ನಿಂತಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭಾರತದಲ್ಲಿ ಬದಲಾವಣೆಯ ಭರವಸೆ ಇಟ್ಟುಕೊಂಡಿದೆ. ಹೀಗಾಗಿಯೇ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದರು.

ದೆಹಲಿಯಲ್ಲಿಂದು ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್, "ಕಳೆದ 5 ವರ್ಷಗಳಲ್ಲಿ ಭಾರತದ ವಿದೇಶಾಂಗ ನೀತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇಡೀ ವಿಶ್ವವೇ ಭಾರತವನ್ನು ವಿಭಿನ್ನವಾಗಿ ಗಮನಿಸುವಂತಾಗಿದೆ. ಬದಲಾಗಿರುವ ನಮ್ಮ ನೀತಿಯಿಂದ ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಜಾಗತಿಕ ಮರುಸಮತೋಲನವು ನಡೆಯುತ್ತಿದೆ ಮತ್ತು ಅದರ ಅತ್ಯಂತ ಸ್ಪಷ್ಟ ಉದಾಹರಣೆಯೆಂದರೆ ಚೀನಾ ಮತ್ತು ಭಾರತ ಎಂದು ವಿದೇಶಾಂಗ ಸಚಿವರು ಹೇಳಿದರು. "ಕಳೆದ ಐದು ವರ್ಷಗಳಲ್ಲಿ ಭಾರತದ ವಿಶ್ವದೆದುರು ದೃಢವಾಗಿ ನಿಂತಿದೆ. ಇಡೀ ಜಗತ್ತು ಭಾರತವನ್ನು ಗೌರವಿಸಲು ಆರಂಭಿಸಿದೆ ಎಂಬುದನ್ನು ಹೆಚ್ಚಿನ ಜನರು ಒಪ್ಪಿಕೊಂಡಿದ್ದಾರೆ" ಎಂದು ಜೈಶಂಕರ್ ಹೇಳಿದರು.

ನಾವು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಬಯಸಿದರೆ, ಅದರ ಹೊರಗಿನ ಬಾಹ್ಯ ದೃಷ್ಟಿಕೋನವನ್ನು ಭಾರತೀಯ ವಿದೇಶಾಂಗ ನೀತಿಯ ಮೇಲೆ ಕೇಂದ್ರೀಕರಿಸಲು ದೊಡ್ಡ ಜವಾಬ್ದಾರಿ ಇದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕಾರ್ಯತಂತ್ರದ ಪ್ರಾಮುಖ್ಯತೆ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಗಮನಹರಿಸಬೇಕಾದ ದೊಡ್ಡ ಜವಾಬ್ದಾರಿಯನ್ನು ಹೊಂದಿದೆ ಎಂದು ಅವರು ಹೇಳಿದರು.
 

Trending News