ಪ್ರಧಾನಿ ಮೋದಿಯವರ ಸಲಹೆಗಾರರಾಗಿ ತರುಣ್‌ ಕಪೂರ್‌ ನೇಮಕ

ಭಾರತ ಸರ್ಕಾರದ ಕಾರ್ಯದರ್ಶಿ ಹಂತದ ಸ್ಥಾನಮಾನಗಳನ್ನು ಕಪೂರ್‌ ಅವರಿಗೆ ನೀಡಲಾಗುತ್ತದೆ. ಇನ್ನು ತರುಣ್‌ ಕಪೂರ್‌ ಅವರ ಜೊತೆ ಐಎಎಸ್‌ ಅಧಿಕಾರಿಗಳಾದ ಹರಿರಂಜನ್ ರಾವ್ ಮತ್ತು ಅತಿಶ್ ಚಂದ್ರ ಅವರನ್ನು ಸಹ ಹೆಚ್ಚುವರಿ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ.   

Written by - Bhavishya Shetty | Last Updated : May 2, 2022, 06:12 PM IST
  • ಪ್ರಧಾನಿ ಮೋದಿ ಸಲಹೆಗಾರರಾಗಿ ತರುಣ್‌ ಕಪೂರ್‌ ನೇಮಕ
  • ಹಿಮಾಚಲ ಪ್ರದೇಶದ 1987ರ ಬ್ಯಾಚ್‌ನ ಐಎಎಸ್ ಅಧಿಕಾರಿ
  • ಪೆಟ್ರೋಲಿಯಂ ಇಲಾಖೆಯ ಮಾಜಿ ಕಾರ್ಯದರ್ಶಿಯಾಗಿದ್ದ ಕಪೂರ್‌
ಪ್ರಧಾನಿ ಮೋದಿಯವರ ಸಲಹೆಗಾರರಾಗಿ ತರುಣ್‌ ಕಪೂರ್‌ ನೇಮಕ  title=
Tarun Kapoor

ನವದೆಹಲಿ: ಪೆಟ್ರೋಲಿಯಂ ಇಲಾಖೆಯ ಮಾಜಿ ಕಾರ್ಯದರ್ಶಿ, ನಿವೃತ್ತ ಐಎಎಸ್‌ ಅಧಿಕಾರಿ ತರುಣ್ ಕಪೂರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಗಾರರನ್ನಾಗಿ ನೇಮಿಸಿ, ಕೇಂದ್ರದ ಕ್ಯಾಬಿನೆಟ್ ನೇಮಕಾತಿ ಸಮಿತಿಯು ಅಧಿಕೃತ ಆದೇಶ ಹೊರಡಿಸಿದೆ. ಹಿಮಾಚಲ ಪ್ರದೇಶದ 1987ರ ಬ್ಯಾಚ್‌ನ ಐಎಎಸ್ ಅಧಿಕಾರಿ ತರುಣ್‌ ಕಪೂರ್‌ ಅವರನ್ನು ಎರಡು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ. 

ಇದನ್ನು ಓದಿ: Knowledge News: ರೂಪಾಯಿ ನೋಟಿನ ಈ ವೈಶಿಷ್ಟ್ಯದ ನಿಮಗೆ ಗೊತ್ತಾ? ಇಲ್ಲಿದೆ ಟಾಪ್‌ ಸೀಕ್ರೆಟ್‌...

ಭಾರತ ಸರ್ಕಾರದ ಕಾರ್ಯದರ್ಶಿ ಹಂತದ ಸ್ಥಾನಮಾನಗಳನ್ನು ಕಪೂರ್‌ ಅವರಿಗೆ ನೀಡಲಾಗುತ್ತದೆ. ಇನ್ನು ತರುಣ್‌ ಕಪೂರ್‌ ಅವರ ಜೊತೆ ಐಎಎಸ್‌ ಅಧಿಕಾರಿಗಳಾದ ಹರಿರಂಜನ್ ರಾವ್ ಮತ್ತು ಅತಿಶ್ ಚಂದ್ರ ಅವರನ್ನು ಸಹ ಹೆಚ್ಚುವರಿ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ. 

ತರುಣ್‌ ಕಪೂರ್‌ ಹಿನ್ನೆಲೆ: 
ಹಿಮಾಚಲ ಪ್ರದೇಶ ಕೇಡರ್‌ನ 1987 ಬ್ಯಾಚ್‌ನ ಭಾರತೀಯ ಆಡಳಿತ ಸೇವೆ ಅಧಿಕಾರಿ ತರುಣ್‌ ಕಪೂರ್ ಕಳೆದ ವರ್ಷ ನವೆಂಬರ್ ಅಂತ್ಯದಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು. ಆ ನಂತರ ಡಿಸೆಂಬರ್‌ನಲ್ಲಿ ತೈಲ ಸಚಿವಾಲಯವು ಸ್ಥಾಪಿಸಿದ ಸಮಿತಿಯ ಇಂಧನ ಪರಿವರ್ತನಾ ಸಲಹಾ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡರು. ತೈಲ ಮತ್ತು ಅನಿಲ ವಲಯಕ್ಕೆ ಶಕ್ತಿ ಪರಿವರ್ತನೆಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ತಯಾರಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ. 

ಇನ್ನು ಅತೀಶ್‌ ಚಂದ್ರ ಅವರು ಬಿಹಾರ ಕೇಡರ್‌ನ 1994 ಬ್ಯಾಚ್ ಐಎಎಸ್ ಅಧಿಕಾರಿ. ಈ ಮೊದಲು ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಅಧ್ಯಕ್ಷ ಮತ್ತು ನಿರ್ದೇಶಕರಾಗಿದ್ದರು. ಹರಿರಂಜನ್ ರಾವ್ ಅವರು ಸಹ ಮಧ್ಯಪ್ರದೇಶ ಕೇಡರ್‌ನ 1994 ಬ್ಯಾಚ್ ಐಎಎಸ್ ಅಧಿಕಾರಿ. ಅವರು ಸಾರ್ವತ್ರಿಕ ಸೇವೆಗಳ ಹೊಣೆಗಾರಿಕೆಯಲ್ಲಿ ನಿರ್ವಾಹಕರಾಗಿದ್ದರು. ಜೊತೆಗೆ ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ಎಸ್ ರಾಧಾ ಚೌಹಾಣ್ ಅವರನ್ನು ಡಿಒಪಿಟಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಕ್ಯಾಬಿನೆಟ್ ಸೆಕ್ರೆಟರಿಯೇಟ್‌ನಲ್ಲಿ ಕಾರ್ಯದರ್ಶಿ ಆಗಿದ್ದ ಕೇರಳ ಕೇಡರ್ 1990ರ ಬ್ಯಾಚ್ ಐಎಎಸ್ ಅಧಿಕಾರಿ ಅಲ್‌ಕೇಶ್ ಕುಮಾರ್ ಶರ್ಮಾ ಅವರನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿಯಾಗಿ ನಿಯೋಜಿಸಲಾಗಿದೆ. 

ಪ್ರಸ್ತುತ ಬಿಹಾರದ ನಿತೀಶ್ ಕುಮಾರ್ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ 1990 ರ ಬ್ಯಾಚ್ ಅಧಿಕಾರಿ ಸಂಜಯ್ ಕುಮಾರ್ ಅವರನ್ನು ಯುವ ವ್ಯವಹಾರಗಳ ಇಲಾಖೆ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಇದೇ ಬ್ಯಾಚ್‌ನ ಎಸ್‌ಕೆಜಿ ರಹಾಟೆ ಅವರನ್ನು ನ್ಯಾಯ ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ರಹಾಟೆ ಅವರು ಈ ಹಿಂದೆ ವಿದ್ಯುತ್ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. 

​ಇದನ್ನು ಓದಿ: Viral Video: ಬಿಸಿಲ ಬೇಗೆಗೆ ಬಳಲಿದ ಜನರಿಗಾಗಿ ಬಾಲಕ ಮಾಡಿದ ಕೆಲಸ ನೋಡಿದ್ರೆ ಶಾಕ್‌ ಆಗ್ತೀರಾ...

ಸಹಕಾರ ಸಚಿವಾಲಯದ ಕಾರ್ಯದರ್ಶಿಯಾಗಿದ್ದ ಕೇರಳ ಕೇಡರ್ 1989ರ ಬ್ಯಾಚ್‌ನ ಐಎಎಸ್ ಅಧಿಕಾರಿ ದೇವೇಂದ್ರ ಕುಮಾರ್ ಸಿಂಗ್ ಅವರನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News