ಇನ್ನು ಮುಂದೆ ನಿಮ್ಮ ವೋಟಿಂಗ್ ಕಾರ್ಡ್ ನ್ನು ಆಧಾರ್ ಗೆ ಲಿಂಕ್ ಮಾಡಲೇಬೇಕು..! ಯಾಕಂತೀರಾ? ಓದಿ

    

Last Updated : Mar 11, 2018, 03:14 PM IST
ಇನ್ನು ಮುಂದೆ ನಿಮ್ಮ ವೋಟಿಂಗ್ ಕಾರ್ಡ್ ನ್ನು ಆಧಾರ್ ಗೆ ಲಿಂಕ್ ಮಾಡಲೇಬೇಕು..! ಯಾಕಂತೀರಾ? ಓದಿ   title=

ನವದೆಹಲಿ: ಮತದಾರರ ಗುರುತಿನ ಚೀಟಿಯನ್ನು ಆಧಾರ್ ಗೆ ಸಂಪರ್ಕಗೊಳಿಸುವುದನ್ನು ಕಡ್ಡಾಯಗೊಳಿಸಲು ಸುಪ್ರೀಂಕೋರ್ಟ ನಲ್ಲಿ ಚುನಾವಣಾ ಆಯೋಗಯು ಪರಿಷ್ಕೃತ ಅರ್ಜಿಯನ್ನು ಸಲ್ಲಿಸಿದೆ.

ಈ ಹಿಂದೆ ಮತದಾನದ ದುರ್ಬಳಿಕೆಯನ್ನು ತಡೆಗಟ್ಟಲು ಚುನಾವಣಾ ಸಮಿತಿಯು ಈ ನಡೆಯನ್ನು ಬೆಂಬಲಿಸಿತ್ತು. ಆಧಾರ ಕಾರ್ಡ್ ನ್ನು ಮತದಾರರ ಗುರುತಿನ ಚೀಟಿಗೆ ಸಂಪರ್ಕಗೊಳಿಸುವುದರಿಂದ ಪ್ರತಿಯೊಬ್ಬ ವ್ಯಕ್ತಿಯು ಒಂದೇ ಮತ ಹಾಕಲು ಈ ಯೋಜನೆ ಸಹಾಯವಾಗುತ್ತದೆ ಎನ್ನುವುದು ಚುನಾವಣಾ ಆಯೋಗದ ವಾದವಾಗಿದೆ.
 
ಇದಕ್ಕೂ ಮೊದಲು ಚುನಾವಣಾ ಆಯೋಗವು ವೋಟಿಂಗ್ ಕಾರ್ಡ್ ನ್ನು ಆಧಾರಗೆ ಸಂಪರ್ಕಗೊಳಿಸುವುದನ್ನು ಸ್ವಯಂಪ್ರೇರಿತ ಎಂದು ಹೇಳಿತ್ತು. ಆದರೆ ಮಾಜಿ ಮುಖ್ಯ ಚುನಾವಣಾ ಕಮೀಷನರ್ (ಸಿಇಸಿ) ಎ.ಕೆ.ಜೋಟಿ ಅವರು 2016 ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಚುನಾವಣಾ ಸಮಿತಿಯು ತನ್ನ ನಿಲುವನ್ನು ಬದಲಾಯಿಸಿತು.

ಇಲ್ಲಿಯವರೆಗೆ 32 ಕೋಟಿ ಆಧಾರ್ ಸಂಖ್ಯೆಗಳು ವೋಟಿಂಗ್ ಕಾರ್ಡ್ ಗೆ ಸಂಪರ್ಕ ಕಲ್ಪಿಸಿವೆ ಎಂದು ಮುಖ್ಯ ಚುನಾವಣಾ ಆಯುಕ್ತ ಓ.ಪಿ ರಾವತ್ ಶನಿವಾರ ತಿಳಿಸಿದ್ದಾರೆ.

Trending News