'ಮೈ ಬಿ ಚೌಕಿದಾರ್' ವೀಡಿಯೋ ಶೇರ್ ಮಾಡಿದ ಬಿಜೆಪಿ ನಾಯಕನಿಗೆ ಚುನಾವಣಾ ಆಯೋಗ ನೋಟಿಸ್

ಚುನಾವಣಾ ಆಯೋಗವು ಬುಧವಾರ ಬಿಜೆಪಿ ಚುನಾವಣಾ ಸಮಿತಿಯ ಸದಸ್ಯನಿಗೆ ಸಾಮಾಜಿಕ ಮಾಧ್ಯಮದಲ್ಲಿ "ಮೈ ಭಿ ಚೌಕಿದಾರ್" ಎಂಬ ಶೀರ್ಷಿಕೆಯ ಆಡಿಯೋ-ದೃಶ್ಯ ಜಾಹೀರಾತುಗಳನ್ನು ಶೇರ್ ಮಾಡಿದ್ದಕ್ಕೆ ಈಗ ನೋಟಿಸ್ ಜಾರಿ ಮಾಡಿದೆ. ಚುನಾವಣಾ ಸಮಿತಿಯ ನಿರ್ದೇಶನಗಳನ್ನು ಅನುಸರಿಸದೆ ಅದನ್ನು ಶೇರ್ ಮಾಡಿದ ಹಿನ್ನಲೆಯಲ್ಲಿ ಈಗ ಈ ನೋಟಿಸ್ ನೀಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

Last Updated : Mar 27, 2019, 07:13 PM IST
 'ಮೈ ಬಿ ಚೌಕಿದಾರ್' ವೀಡಿಯೋ ಶೇರ್ ಮಾಡಿದ ಬಿಜೆಪಿ ನಾಯಕನಿಗೆ ಚುನಾವಣಾ ಆಯೋಗ ನೋಟಿಸ್  title=

ನವದೆಹಲಿ: ಚುನಾವಣಾ ಆಯೋಗವು ಬುಧವಾರ ಬಿಜೆಪಿ ಚುನಾವಣಾ ಸಮಿತಿಯ ಸದಸ್ಯನಿಗೆ ಸಾಮಾಜಿಕ ಮಾಧ್ಯಮದಲ್ಲಿ "ಮೈ ಭಿ ಚೌಕಿದಾರ್" ಎಂಬ ಶೀರ್ಷಿಕೆಯ ಆಡಿಯೋ-ದೃಶ್ಯ ಜಾಹೀರಾತುಗಳನ್ನು ಶೇರ್ ಮಾಡಿದ್ದಕ್ಕೆ ಈಗ ನೋಟಿಸ್ ಜಾರಿ ಮಾಡಿದೆ. ಚುನಾವಣಾ ಸಮಿತಿಯ ನಿರ್ದೇಶನಗಳನ್ನು ಅನುಸರಿಸದೆ ಅದನ್ನು ಶೇರ್ ಮಾಡಿದ ಹಿನ್ನಲೆಯಲ್ಲಿ ಈಗ ಈ ನೋಟಿಸ್ ನೀಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಮಾರ್ಚ್ 16 ರಂದು ಎಂಸಿಎಂಸಿ ಸಮಿತಿಯು ಜಾಹಿರಾತಿನಲ್ಲಿ ಆರ್ಮಿ ಸಿಬ್ಬಂದಿಯನ್ನು ಚಿತ್ರಿಸುವ ತುಣುಕುಗಳನ್ನು ತೆಗೆದು ಹಾಕಬೇಕೆಂದು ಹೇಳಿದೆ.ಈ ಹಿನ್ನಲೆಯಲ್ಲಿ ಇದನ್ನು ಉಲ್ಲಂಘಿಸಿ ಶೇರ್ ಮಾಡಿದ ಬಿಜೆಪಿ ನಾಯಕನಿಗೆ ಚುನಾವಣಾ ಆಯೋಗವು  ನೋಟಿಸ್ ನೀಡಿದೆ ಎನ್ನಲಾಗಿದೆ.  

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮದ ಮೇನ್ ಭಿ ಚೌಕಿದಾರ್ ಅಭಿಯಾನ ಯಶಸ್ವಿಯಾದ ನಂತರ ಮಾರ್ಚ್ 31 ರಂದು ವೀಡಿಯೊ ಕಾನ್ಫರೆನ್ಸ್ ಮೂಲಕ ದೇಶಾದ್ಯಂತ 500 ಸ್ಥಳಗಳಲ್ಲಿ ಇದಕ್ಕೆ ಬೆಂಬಲ ಕೋರಬೇಕೆಂದು ಮನವಿ ಮಾಡಿಕೊಳ್ಳಲಿದ್ದಾರೆ. ಚುನಾವಣಾ ಆಯೋಗವು ಈ ವಾರದ ಪೂರ್ವದಲ್ಲಿ ಎಲ್ಲ ಪಕ್ಷಗಳಿಗೆ ತಮ್ಮ ಅಭಿಯಾನ ಹಾಗೂ ಪ್ರಚಾರದಲ್ಲಿ ರಕ್ಷಣಾ ಪಡೆಗಳ ಕಾರ್ಯ ಚಟುವಟಿಕೆಗಳನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುವ ಹಾಗಿಲ್ಲ ಎಂದು ಸೂಚನೆ ನೀಡಿತ್ತು.
 

Trending News