ಪ್ರಧಾನಿ ಮೋದಿ ಘೋಷಣೆಗಳನ್ನು ಕೂಗುತ್ತಾ ರೋಡ್ ಷೋ ಮಾಡುವಾಗ ಚುನಾವಣಾ ಆಯೋಗ ಮೂಕ ಪ್ರೇಕ್ಷಕ: ಕಾಂಗ್ರೆಸ್

ಚುನಾವಣಾ ಆಯೋಗವು ಬಿಜೆಪಿ ಶಾಖೆಯಂತೆ ಕಾರ್ಯನಿರ್ವಹಿಸುತ್ತಿದೆ- ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ

Last Updated : Dec 14, 2017, 03:06 PM IST
  • ಚುನಾವಣಾ ಆಯೋಗವು ಬಿಜೆಪಿಯ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.
  • ಗುರುವಾರ ಪ್ರಧಾನಿ ನರೇಂದ್ರ ಮೋದಿ ಮಾಡಿದ ರೋಡ್ ಶೋ ನಿಂದ ಚುನಾವಣಾ ನೀತಿ ಉಲ್ಲಂಘನೆಯಾಗಿದೆ- ಕಾಂಗ್ರೇಸ್.
ಪ್ರಧಾನಿ ಮೋದಿ ಘೋಷಣೆಗಳನ್ನು ಕೂಗುತ್ತಾ ರೋಡ್ ಷೋ ಮಾಡುವಾಗ ಚುನಾವಣಾ ಆಯೋಗ ಮೂಕ ಪ್ರೇಕ್ಷಕ: ಕಾಂಗ್ರೆಸ್ title=
ಪಿಕ್: ANI

ನವ ದೆಹಲಿ:  ಪ್ರಧಾನಿ ಮೋದಿ ಘೋಷಣೆಗಳನ್ನು ಕೂಗುತ್ತಾ ರೋಡ್ ಷೋ ಮಾಡುವಾಗ ಮೂಕ ಪ್ರೇಕ್ಷಕವಾಗಿರುವ ಚುನಾವಣಾ ಆಯೋಗವು ಬಿಜೆಪಿ ಶಾಖೆಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಆರೋಪಿಸಿದ್ದಾರೆ.

ಗುಜರಾತ್ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ ಚಲಾಯಿಸಿದ ಬಳಿಕ ಕಾಂಗ್ರೆಸ್ ಚುನಾವಣಾ ಆಯೋಗದ ಮೇಲೆ ಒಂದು ದೊಡ್ಡ ದಾಳಿಯನ್ನು ಮಾಡಿದೆ. ಚುನಾವಣಾ ಆಯೋಗವು ಬಿಜೆಪಿಯ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮತದಾನ ಮಾಡಿದ ಬಳಿಕ ಗುರುವಾರ ಮಾಡಿದ ರೋಡ್ ಶೋ ನಿಂದ ಚುನಾವಣಾ ನೀತಿ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಆದರೆ ಚುನಾವಣಾ ಆಯೋಗ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ತಿಳಿಸಿದ್ದಾರೆ. ಮುಂದುವರೆದು ಮಾತನಾಡಿದ ಅವರು, ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದರು, ಆದರೆ ಚುನಾವಣಾ ಆಯೋಗ ಇದುವರೆಗೂ ಆ ಬಗ್ಗೆ ಏನನ್ನೂ ಹೇಳದೆ ಮೂಕವಾಗಿದೆ ಎಂದು ಇದೇ ಸಂದರ್ಭದಲ್ಲಿ ಅಕ್ರೋಶ ವ್ಯಕ್ತಪಡಿಸಿದ್ದಾರೆ. 

ಕಾಂಗ್ರೇಸ್ ಮತ್ತೊಬ್ಬ ನಾಯಕ ಅಶೋಕ್ ಗೆಹ್ಲೋಟ್ ಸಹ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ.

Trending News