ಕುರಿ, ಕೋಳಿ, ಮೀನಿನ ಮಾಂಸಕ್ಕಿಂತ ಹೆಚ್ಚು ಗೋಮಾಂಸ ಸೇವಿಸಿ: ಬಿಜೆಪಿ ಸಚಿವ

ಮೇಘಾಲಯದ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಖಾತೆ ಸಚಿವರಾಗಿರುವ ಸಣ್ಬೂರ್‌ ಶುಲ್ಲೈ.

Written by - Puttaraj K Alur | Last Updated : Jul 31, 2021, 06:26 PM IST
  • ಪ್ರಜಾಪ್ರಭುತ್ವ ರಾಷ್ಟ್ರದಲ್ಲಿರುವ ಪ್ರತಿಯೊಬ್ಬರಿಗೂ ತಮಗಿಷ್ಟವಾದ ಆಹಾರ ಸೇವಿಸಲು ಸ್ವಾತಂತ್ರ್ಯವಿದೆ
  • ಗೋಮಾಂಸ ಸೇವಿಸಲು ಉತ್ತೇಜಿಸಿ, ಗೋಹತ್ಯೆ ನಿಷೇಧ ಕಾನೂನು ಜಾರಿ ಆತಂಕ ದೂರ ಮಾಡಲು ಸರ್ಕಾರ ಮುಂದಾಗಿದೆ
  • ಗಡಿ ಮತ್ತು ಜನರ ರಕ್ಷಣೆ ವಿಚಾರದಲ್ಲಿ ರಾಜ್ಯವು ತನ್ನ ಪೊಲೀಸ್ ಪಡೆ ಬಳಸಿಕೊಳ್ಳುವ ಸಮಯ ಬಂದಿದೆ
ಕುರಿ, ಕೋಳಿ, ಮೀನಿನ ಮಾಂಸಕ್ಕಿಂತ ಹೆಚ್ಚು ಗೋಮಾಂಸ ಸೇವಿಸಿ: ಬಿಜೆಪಿ ಸಚಿವ  title=
ಮೇಘಾಲಯದ ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ಸಚಿವ ಸಣ್ಬೂರ್‌ ಶುಲ್ಲೈ

ಶಿಲ್ಲಾಂಗ್: ಕುರಿ, ಕೋಳಿ ಮತ್ತು ಮೀನಿನ ಮಾಂಸಕ್ಕಿಂತಲೂ ಹೆಚ್ಚಾಗಿ ಗೋಮಾಂಸ ಸೇವಿಸುವಂತೆ ಮೇಘಾಲಯದ ಬಿಜೆಪಿ ಸಚಿವ ಸಣ್ಬೂರ್‌ ಶುಲ್ಲೈ(Sanbor Shullai)ಹೇಳಿದ್ದಾರೆ. ಬಿಜೆಪಿ ಹಿರಿಯ ನಾಯಕ ಹಾಗೂ ಮೇಘಾಲಯದ ನೂತನ ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ಖಾತೆ ಸಚಿವರಾಗಿರುವ ಸಣ್ಬೂರ್‌ ಶುಲ್ಲೈ, ಕುರಿ, ಕೋಳಿ ಮತ್ತು ಮೀನು ಮಾಂಸಕ್ಕಿಂತ ಹೆಚ್ಚು ಗೋವಿನ ಮಾಂಸ ಸೇವಿಸುವಂತೆ ಜನರಿಗೆ ಕರೆ ನೀಡಿದ್ದಾರೆ.   

ಶುಲ್ಲೈ ಕಳೆದ ವಾರವಷ್ಟೇ ಕ್ಯಾಬಿನೆಟ್ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ‘ಪ್ರಜಾಪ್ರಭುತ್ವ ರಾಷ್ಟ್ರದಲ್ಲಿರುವ ಪ್ರತಿಯೊಬ್ಬರಿಗೂ ತಮಗಿಷ್ಟವಾದ ಆಹಾರ ಸೇವಿಸಲು ಸ್ವಾತಂತ್ರ್ಯವಿದೆ. ಜನರಿಗೆ ಗೋಮಾಂಸ(Beef Eating) ಸೇವಿಸಲು ಉತ್ತೇಜಿಸುವ ಮೂಲಕ, ತಮ್ಮ ಸರ್ಕಾರ ಗೋಹತ್ಯೆ ನಿಷೇಧ ಕಾನೂನು(Anti Cow Slaughter Bill) ಜಾರಿಗೆ ತರುತ್ತದೆ ಎಂಬ ಆತಂಕ ದೂರ ಮಾಡಲು ಮುಂದಾಗಿದೆ’ ಅಂತಾ ಅವರು ಹೇಳಿದ್ದಾರೆ. ಪಕ್ಕದ ಅಸ್ಸಾಂ ರಾಜ್ಯದಲ್ಲಿ ಈಗಾಗಲೇ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಿದೆ. ಆ ಕಾನೂನಿಂದ ಮೇಘಾಲಯಕ್ಕೆ ಜಾನುವಾರ ಸಾಗಣೆ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳಲು ಅಲ್ಲಿನ ಸಿಎಂ ಹಿಮಂತ ಬಿಸ್ವಾ ಶರ್ಮಾರೊಂದಿಗೆ ಚರ್ಚಿಸುತ್ತೇನೆಂದು ಶುಲ್ಲೈ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Haryana Govt : ಹಸುಗಳ ರಕ್ಷಣೆಗೆ 'ಸ್ಪೆಷಲ್ ಟಾಸ್ಕ್ ಫೋರ್ಸ್' ನೇಮಕ ಮಾಡಿದ ಸರ್ಕಾರ

ಮೇಘಾಲಯ(Meghalaya) ಮತ್ತು ಅಸ್ಸಾಂ ನಡುವಿನ ಗಡಿ ವಿವಾದದ ಬಗ್ಗೆ ಮಾತನಾಡಿ, ಗಡಿ ಮತ್ತು ಜನರ ರಕ್ಷಣೆ ವಿಚಾರದಲ್ಲಿ ರಾಜ್ಯವು ತನ್ನ ಪೊಲೀಸ್ ಪಡೆ ಬಳಸಿಕೊಳ್ಳುವ ಸಮಯ ಬಂದಿದೆ. ಅಸ್ಸಾಂ ಜನರು ಗಡಿ ಪ್ರದೇಶದಲ್ಲಿ ನಮ್ಮ ಜನರಿಗೆ ಕಿರುಕುಳ ನೀಡುತ್ತಿದ್ದರೆ ನಾವು ಸುಮ್ಮನೇ ಕೂರಲು ಆಗುವುದಿಲ್ಲ. ನಾವು ಕೂಡ ಪ್ರತಿಕ್ರಿಯಿಸಬೇಕಾಗುತ್ತದೆ ಮತ್ತು ಸ್ಥಳದಲ್ಲೇ ಅವರಿಗೆ ತಿರುಗೇಟು ನೀಡಬೇಕಾಗುತ್ತದೆ. ನಮ್ಮ ಜನರ ರಕ್ಷಿಸುವ ಮನೋಭಾವ ನಮ್ಮಲ್ಲಿರಬೇಕು, ನಾವು ನಮ್ಮ ಬಲ ಬಳಸಿಕೊಳ್ಳಬೇಕಾಗುತ್ತದೆ. ಆದರೆ ತಾವು ಹಿಂಸೆಯ ಪರವಾಗಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಿಜೋರಾಂ ಪೋಲಿಸ(Mizoram Police)ರು ತಮ್ಮ ಭೂಮಿ ಮತ್ತು ಜನರನ್ನು ರಕ್ಷಿಸಲು ನಿಂತಿದ್ದಾರೆ ಎಂದು ಶ್ಲಾಘಿಸಿದ ಶುಲ್ಲೈ, ಗಡಿ ನಿವಾಸಿಗಳನ್ನು ರಕ್ಷಿಸುವ ವಿಚಾರವಾಗಿ ಮೇಘಾಲಯ ಪೊಲೀಸರನ್ನು ಟೀಕಿಸಿದ್ದಾರೆ. ‘ನಾವು ಕಾಲಕಾಲಕ್ಕೆ ನೋಡಿದ್ದೇವೆ-ಪೊಲೀಸರು ಹಿಂದೆ ಇದ್ದಾರೆ ಮತ್ತು ನಾಗರಿಕರು ಮುಂಚೂಣಿಯಲ್ಲಿದ್ದಾರೆ. ಜನರನ್ನು ರಕ್ಷಿಸಲು ಪೊಲೀಸರು ಮುಂಚೂಣಿಯಲ್ಲಿರಬೇಕು ಎಂದು ಉನ್ನತ ಅಧಿಕಾರಿಗಳು ಆದೇಶ ನೀಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ನಂಬರ್ ಸೇವ್ ಮಾಡದೆಯೇ ವಾಟ್ಸ್ ಆಪ್ ನಲ್ಲಿ ಮೆಸೇಜ್ ಮಾಡಲು ಈ ಟ್ರಿಕ್ ಬಳಸಿ

‘ನಿಮ್ಮ ಮನೆಗೆ ಶತ್ರುಗಳು ಬಂದರೆ, ನಿಮ್ಮ, ನಿಮ್ಮ ಪತ್ನಿ ಮತ್ತು ಮಕ್ಕಳ ಮೇಲೆ ದಾಳಿ ಮಾಡಿದರೆ, ನೀವು ಕೂಡ ಸ್ವರಕ್ಷಣೆಗಾಗಿ ದಾಳಿ ಮಾಡಬೇಕಾಗುತ್ತದೆ. ನಮ್ಮ ಗಡಿಯಲ್ಲಿ ಅದೇ ರೀತಿ ಮಾಡಬೇಕಾಗಿದೆ. ನಿಮ್ಮ ಶತ್ರು ನಿಮ್ಮ ಮನೆಗೆ ಕದಿಯಲು ಅಥವಾ ದರೋಡೆ ಮಾಡಲು ಬಂದರೆ , ನೀವು ನಿಮ್ಮನ್ನು ರಕ್ಷಿಸಿಕೊಳ್ಳಬೇಕು. ಅದು ಕಾನೂನುಬದ್ಧವಾಗಿರಲಿ ಅಥವಾ ಕಾನೂನುಬಾಹಿರವಾಗಿರಲಿ ನೀವು ರಕ್ಷಿಸಬೇಕು’ ಎಂದು ಶುಲ್ಲೈ ಪ್ರತಿಪಾದಿಸಿದರು. ಅಲ್ಲದೆ ಗಡಿ ವಿವಾದದ ಸಮಸ್ಯೆ ಬಹಳ ದಿನಗಳಿಂದ ಬಾಕಿಯಿದೆ ಮತ್ತು ಅದನ್ನು ಆದಷ್ಟು ಬೇಗ ಪರಿಹರಿಸಬೇಕಾಗಿದೆ ಎಂದು ಅವರು ಇದೇ ವೇಳೆ ಆಗ್ರಹಿಸಿದರು.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News