ನವದೆಹಲಿ: ತೈಲ ಆಮದು, ಇಂಧನ ವೆಚ್ಚ ಮತ್ತು ಮಾಲಿನ್ಯದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ನಿರಂತರವಾಗಿ ಎಲೆಕ್ಟ್ರಿಕ್ ವಾಹನಗಳ ಪ್ರವೃತ್ತಿಯನ್ನು ಉತ್ತೇಜಿಸುತ್ತಿದೆ. ಆದರೆ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಾಗಿ ಬಳಸಲು ಇರುವ ದೊಡ್ಡ ಸವಾಲು ಎಂದರೆ ಚಾರ್ಜಿಂಗ್ ಕೇಂದ್ರಗಳ ಕೊರತೆ ಮತ್ತು ಉತ್ಪಾದನಾ ವೆಚ್ಚ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ 69 ಸಾವಿರ ಪೆಟ್ರೋಲ್ ಪಂಪ್‌ಗಳಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಕಿಯೋಸ್ಕ್ ಗಳನ್ನು ವ್ಯವಸ್ಥೆ ಮಾಡಲು ಕೇಂದ್ರ ಸರ್ಕಾರ ಬಯಸಿದೆ.
ದೇಶಾದ್ಯಂತ 69,000 ಪೆಟ್ರೋಲ್ ಪಂಪ್‌ಗಳಲ್ಲಿ ಇ-ವೆಹಿಕಲ್ ಚಾರ್ಜಿಂಗ್ (E-vehicle charging) ಕಿಯೋಸ್ಕ್ ಅಳವಡಿಸುವ ಯೋಜನೆ ಬಗ್ಗೆ ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ.
ನಿಮ್ಮ ಬಜೆಟ್‌ನಲ್ಲಿ ಸಿಗಲಿದೆ 200 km ಮೈಲೇಜ್ ನೀಡುವ ಈ ಸ್ಕೂಟರ್
ಬ್ರೆಜಿಲ್ ಮತ್ತು ಅಮೆರಿಕದಂತಹ ದೇಶದಲ್ಲಿ ತಯಾರಿಸಿದ ವಾಹನ ಎಂಜಿನ್ ಎಲೆಕ್ಟ್ರಿಕ್ ಮೊಬಿಲಿಟಿ ಕಾನ್ಫರೆನ್ಸ್ 2020ರಲ್ಲಿ ಮಾತನಾಡಿದ ನಿತಿನ್ ಗಡ್ಕರಿ, ಅಮೆರಿಕಾ ಮತ್ತು ಬ್ರೆಜಿಲ್ ನಂತಹ ವಾಹನ ಉದ್ಯಮಕ್ಕೆ ಪೆಟ್ರೋಲ್, ಎಥೆನಾಲ್, ಸಿಎನ್‌ಜಿ (CNG) ಮೂವರು ಚಾಲಿತ ವಾಹನ ಎಂಜಿನ್ಗಳನ್ನು ತಯಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಮನವಿ ಮಾಡಿದರು.
ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕೆಗೆ ಮುಂದಾದ OLA
ಸಿಎನ್‌ಜಿ, ಎಲೆಕ್ಟ್ರಿಕ್ ಮತ್ತು ಹೈಡ್ರೋಜನ್‌ನಂತಹ ಪರ್ಯಾಯ ಇಂಧನಗಳ ಅವಕಾಶವನ್ನು ಭಾರತೀಯ ವಾಹನ ಉದ್ಯಮವು ಸ್ವೀಕರಿಸಲು ಬಯಸುತ್ತದೆ ಎಂದು ನಿತಿನ್ ಗಡ್ಕರಿ ತಿಳಿಸಿದರಲ್ಲದೆ ಇದೇ ವೇಳೆ ಡಬಲ್ ಡೆಕ್ಕರ್ ಬಸ್‌ಗಳ ತಯಾರಿಕೆ ಬಗ್ಗೆ ವಾಹನ ವಲಯವೂ ಹೊಸ ಆವಿಷ್ಕಾರಗಳಿಗೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು.
Tata Motors ಬಂಪರ್ ಫೆಸ್ಟಿವಲ್ ಆಫರ್: 5 ಲಕ್ಷದವರೆಗೆ ಗೋಲ್ಡ್ ವೋಚರ್ ಗೆಲ್ಲುವ ಅವಕಾಶ
ಕೇಂದ್ರ ಸರ್ಕಾರ ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ವಿದ್ಯುತ್ ಹೆದ್ದಾರಿ (ಇ-ಹೆದ್ದಾರಿ) ಆಗಿ ಅಭಿವೃದ್ಧಿಪಡಿಸುತ್ತಿದೆ. ಭಾರತವು ಎಲ್ಲ ಕ್ಷೇತ್ರಗಳಲ್ಲೂ ಸ್ವಾವಲಂಬಿಗಳಾಗಲು ಕೆಲಸ ಮಾಡುತ್ತಿದೆ. ಇದಕ್ಕಾಗಿ ಭಾರತ ಸರ್ಕಾರವು ಎಲ್ಲಾ ಉದ್ಯಮಗಳಿಗೆ ಸಾಧ್ಯವಿರುವ ಎಲ್ಲಾ ರೀತಿಯ ಉತ್ತೇಜನವನ್ನು ನೀಡುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತ ವಾಹನ ಉತ್ಪಾದನಾ ಕೇಂದ್ರವಾಗಬೇಕೆಂಬುದು ತಮ್ಮ ಕನಸು. ಈ ಕನಸು ಖಂಡಿತವಾಗಿಯೂ ಈಡೇರಲಿದೆ ಎಂದು ಕೇಂದ್ರ ಸಚಿವ ಗಡ್ಕರಿ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಡಿಸೆಂಬರ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ ಹೊಸ ಎಲೆಕ್ಟ್ರಿಕ್ ಸ್ಕೂಟರ್-ಇಲ್ಲಿದೆ ಅದರ ಬೆಲೆ, ವೈಶಿಷ್ಟ್ಯ
ಆಟೋಮೊಬೈಲ್ ವಲಯವು ಇತ್ತೀಚೆಗೆ ಅನೇಕ ಆವಿಷ್ಕಾರಗಳನ್ನು ಮಾಡಿದೆ. ವಾಹನಗಳ ವಿಭಿನ್ನ ವಿನ್ಯಾಸ ಮತ್ತು ಮಾದರಿಗಳ ಅಭಿವೃದ್ಧಿ, ಅತ್ಯುತ್ತಮ ಸಂಶೋಧನೆ, ದೊಡ್ಡ ಮಾರುಕಟ್ಟೆ, ಸರ್ಕಾರದ ಶಾಶ್ವತ ಚೌಕಟ್ಟು ಮತ್ತು ದೇಶದ ಬಹು-ಪ್ರತಿಭಾವಂತ ಎಂಜಿನಿಯರ್‌ಗಳ ಹೊಸ ಆಲೋಚನೆಗಳು ಈ ಕನಸನ್ನು ನನಸಾಗಿಸುತ್ತದೆ. ಇ-ವಾಹನವನ್ನು ಉತ್ತೇಜಿಸಲು ಕೇಂದ್ರವು ಈ ಕ್ರಮಗಳನ್ನು ಕೈಗೊಂಡಿದೆ.
ದೇಶದಲ್ಲಿ ಎಲೆಕ್ಟ್ರಿಕ್ ವಾಹನವನ್ನು ಉತ್ತೇಜಿಸಲು ಇತ್ತೀಚೆಗೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನದ ಜಿಎಸ್‌ಟಿಯನ್ನು ಶೇಕಡಾ 5ಕ್ಕೆ ಇಳಿಸಿದೆ. ಬ್ಯಾಟರಿ ಬೆಲೆಯನ್ನು ವಾಹನಗಳ ವೆಚ್ಚದಿಂದ ಪ್ರತ್ಯೇಕವಾಗಿಡಲು ಸಹ ಇದನ್ನು ಅನುಮತಿಸಲಾಗಿದೆ. ಎಲೆಕ್ಟ್ರಿಕ್ ವಾಹನದ ವೆಚ್ಚದ 30 ಪ್ರತಿಶತವು ಬ್ಯಾಟರಿಯ ವೆಚ್ಚವಾಗಿದೆ. ಆಟೋಮೊಬೈಲ್ ವಲಯಕ್ಕೆ 51,000 ಕೋಟಿ ರೂ.ಗಳ ಉತ್ಪಾದನಾ-ಸಂಬಂಧಿತ ಪ್ರೋತ್ಸಾಹ ಧನವನ್ನೂ ಕೇಂದ್ರ ಸರ್ಕಾರ ಘೋಷಿಸಿದೆ. ಈ ವಲಯದಲ್ಲಿ ಹೊಸ ಉದ್ಯೋಗಗಳಿಗೆ ಸಾಕಷ್ಟು ಸಾಮರ್ಥ್ಯವಿದೆ. ಒಂದು ಅಂದಾಜಿನ ಪ್ರಕಾರ, ಆಟೋಮೊಬೈಲ್ ವಲಯಕ್ಕೆ 25 ಮಿಲಿಯನ್ ನುರಿತ ಉದ್ಯೋಗಿಗಳ ಅಗತ್ಯವಿದೆ ಎಂದು ಗಡ್ಜರಿ ವಿವರಿಸಿದರು.