ಮುಂಬೈನಲ್ಲಿ 1 ಸಾವಿರ ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದ ಪೊಲೀಸರು

ಪೊಲೀಸರ ಪ್ರಕಾರ, ವಶಕ್ಕೆ ಪಡೆದಿರುವ ಡ್ರಗ್ಸ್ ಪ್ರಮಾಣ 100 ಕೆಜಿ. 

Last Updated : Dec 28, 2018, 04:15 PM IST
ಮುಂಬೈನಲ್ಲಿ 1 ಸಾವಿರ ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದ ಪೊಲೀಸರು title=
File Image

ಮುಂಬೈ: ಹೊಸ ವರ್ಷದ ಆಚರಣೆಗಳಿಗೆ ಮೊದಲು ಮುಂಬೈ ಪೊಲೀಸರು ಬಾರೀ ಪ್ರಮಾಣದ ಡ್ರಗ್ ಅನ್ನು ವಶಕ್ಕೆ ಪಡೆದಿದ್ದಾರೆ. ಮುಂಬೈ ಪೊಲೀಸರು ಶುಕ್ರವಾರ 1,000 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ವಶಪಡಿಸಿಕೊಂಡಿರುವುದಾಗಿ ಆಂಟಿ-ನಾರ್ಕೋಟಿಕ್ಸ್ ಸೆಲ್ ಡಿಸಿಪಿ ಶಿವದೀಪ್ ಹೇಳಿದ್ದಾರೆ. 

ನಮಗೆ ಲಭಿಸಿದ ಮಾಹಿತಿಯ ಆಧಾರದ ಮೇಲೆ ನಾವು ಸುಮಾರು 100 ಕೆಜಿ ಫೆಂಟನಿಲ್ ಹೆಸರಿನ ಡ್ರಗ್ಸ್ ಅನ್ನು ವಶಕ್ಕೆ ಪಡೆದಿದ್ದೇವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಿಕ್ಕಿರುವ ಈ ಡ್ರಗ್ಸ್ ಗಳ ಮೌಲ್ಯ 1 ಸಾವಿರ ಕೋಟಿ ರೂ. ಎಂದು ಅವರು ತಿಳಿಸಿದರು.

ಈ ಡ್ರಗ್ಸ್ ಅನ್ನು ವಿದೇಶಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ಬಂಧಿತ ಆರೋಪಿಗಳು ಮಾಹಿತಿ ನೀಡಿದ್ದು, ಇದನ್ನು ಮೆಕ್ಸಿಕೋಗೆ ಕಳುಹಿಸಲು ಯೋಜಿಸಲಾಗಿತ್ತು ಎನ್ನಲಾಗಿದೆ.

ಪೊಲೀಸರು ಈ ಡ್ರಗ್ಸ್ ಜೊತೆಗೆ 4 ಜನರನ್ನು ಬಂಧಿಸಿದ್ದು, ವಿಚಾರಣೆ ಮುಂದುವರೆದಿದೆ.

Trending News