ಮಹಿಳಾ ಜನ್‌ಧನ್ ಖಾತೆಗೆ ಜಮೆಯಾದ ಹಣ ಹಿಂಪಡೆಯುವ ಬಗ್ಗೆ ಹರಡುತ್ತಿರುವ ಈ ವದಂತಿಗೆ ಕಿವಿಗೊಡದಿರಿ

ಜನ್‌ಧನ್ ಖಾತೆಗಳಿಗೆ ಜಮೆಯಾಗುತ್ತಿರುವ 500 ರೂಪಾಯಿಗಳನ್ನು ಫಲಾನುಭವಿಗಳು ಹಿಂದಕ್ಕೆ ಪಡೆಯಲು ಕಾಲಮಿತಿ ನಿಗದಿಪಡಿಸಿಲ್ಲ. 

Written by - Yashaswini V | Last Updated : Apr 17, 2020, 08:55 AM IST
ಮಹಿಳಾ ಜನ್‌ಧನ್ ಖಾತೆಗೆ ಜಮೆಯಾದ ಹಣ ಹಿಂಪಡೆಯುವ ಬಗ್ಗೆ ಹರಡುತ್ತಿರುವ ಈ ವದಂತಿಗೆ ಕಿವಿಗೊಡದಿರಿ title=

ವಿಜಯಪುರ: ಕೊರೋನಾ (Coronavirus)   ಲಾಕ್‌ಡೌನ್‌ನ ಸಂಕಷ್ಟ ಕಾಲದಲ್ಲಿ ಪರಿಹಾರವಾಗಿ ಜನರಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಮಹಿಳಾ ಜನ್‌ಧನ್ ಖಾತೆ (Jan dhan Account) ಗಳಿಗೆ ಜಮೆ ಮಾಡಲಾಗುತ್ತಿರುವ 500 ರೂಪಾಯಿ ಹಣವನ್ನು ಖಾತೆಯಿಂದ ಹಿಂಪಡೆಯಲು ಯಾವುದೇ ರೀತಿಯ ಕಾಲಮಿತಿ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದಾಗ್ಯೂ ಈಗಲೇ ಹಣವನ್ನು ವಿತ್ ಡ್ರಾ ಮಾಡದಿದ್ದರೆ ಖಾತೆಗೆ ಜಮೆಯಾಗಿರುವ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ ಎಂದು ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ. ಇದರಿಂದ ಕೆಲವರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಜಿಲ್ಲಾ ಅಗ್ರಣಿ ಬ್ಯಾಂಕ್ ವ್ಯವಸ್ಥಾಪಕರು ತಿಳಿಸಿದ್ದಾರೆ.

ಇಂದಿನಿಂದ ಮಹಿಳೆಯರ ಜನ-ಧನ್ ಖಾತೆಗೆ ಬರಲಿದೆ ಹಣ, ವಿತ್ ಡ್ರಾ ಮಾಡುವ ಮುನ್ನ ಈ ಸುದ್ದಿ ತಪ್ಪದೇ ಓದಿ

ಜನ್‌ಧನ್ ಖಾತೆಗಳಿಗೆ ಜಮೆಯಾಗುತ್ತಿರುವ 500 ರೂಪಾಯಿಗಳನ್ನು ಫಲಾನುಭವಿಗಳು ಹಿಂದಕ್ಕೆ ಪಡೆಯಲು ಕಾಲಮಿತಿ ನಿಗದಿಪಡಿಸಿಲ್ಲ. ಅವಶ್ಯಕತೆಯಿದ್ದಲ್ಲಿ ಮಾತ್ರ ಗ್ರಾಹಕರು ಬ್ಯಾಂಕಿಗೆ ತೆರಳಿ ಸಾಮಾಜಿಕ ಅಂತರ ಕಾಯ್ದುಕೊಂಡು ಹಣ ವಿತ್ ಡ್ರಾ ಮಾಡಿಕೊಳ್ಳಬಹುದು ಅಥವಾ ಎಟಿಎಂ ಕಾರ್ಡ್ ಇದ್ದವರು ಎಟಿಎಂಗಳ ಮೂಲಕ ಹಣ ವಿತ್ ಡ್ರಾ ಮಾಡಿಕೊಳ್ಳಬಹುದು ಎಂದು ಸರ್ಕಾರವೇ ಸ್ಪಷ್ಟಪಡಿಸಿದೆ. ಹೀಗಾಗಿ ಜನರು ಆತಂಕಕ್ಕೆ ಒಳಗಾಗಿ ಅನವಶ್ಯಕವಾಗಿ ಬ್ಯಾಂಕಿಗೆ ಬರಬೇಡಿ ಎಂದವರು ಮನವಿ ಮಾಡಿದರು.

ಎಸ್​ಬಿಐನಲ್ಲಿ 'ಜನ್-ಧನ್' ರೀತಿಯ ಖಾತೆ ತೆರೆಯುವುದರಿಂದ, ಈ ಸೇವೆಗಳು ಉಚಿತ

ಗ್ರಾಹಕರು ತಮ್ಮ ನಗದು ವ್ಯವಹಾರವನ್ನು ಮನೆಯ ಹತ್ತಿರ ಅಥವಾ ಗ್ರಾಮಗಳಲ್ಲಿರುವ ಸೇವಾ ಕೇಂದ್ರಗಳ ವ್ಯವಹಾರ ಪ್ರತಿನಿಧಿಗಳ (ಬ್ಯಾಂಕ್ ಮಿತ್ರ) ಮೂಲಕ ಪಡೆದುಕೊಳ್ಳಬೇಕು. ಫಲಾನುಭವಿಗಳು ಅತಿಯಾದ ಹಣಕಾಸು ಅವಶ್ಯಕತೆಯಿದ್ದಲ್ಲಿ ಮಾತ್ರ ಬ್ಯಾಂಕ್‌ಗಳಿಗೆ ಭೇಟಿ ನೀಡಿ ಸಾಮಾಜಿಕ ಅಂತರ ಕಾಯ್ದುಕೊಂಡು ನಗದು ವ್ಯವಹಾರ ಮಾಡಬಹುದು.

ಫಲಾನುಭವಿಗಳು ಹೆಚ್ಚಾಗಿ ಬ್ಯಾಂಕಿಂಗ್‌ನ ಇತರೆ ಸೌಲಭ್ಯಗಳಾದ ಎಟಿಎಂ (ATM), ಬ್ಯಾಂಕ್‌ಮಿತ್ರ, ಭೀಮ್ ಆ್ಯಪ್ (BHIM APP), ಮೊಬೈಲ್ ಬ್ಯಾಂಕಿಂಗ್ (Mobile Banking) ಸಹಾಯದಿಂದ ಬಿಡುಗಡೆಯಾದ ಮೊತ್ತವನ್ನು ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.

Trending News