ದೇಶೀಯ ಪ್ರಯಾಣಿಕರ ವಾಹನ ಮಾರಾಟದಲ್ಲಿ ದಾಖಲೆ ಕುಸಿತ

ದೇಶೀಯ ಪ್ರಯಾಣಿಕರ ವಾಹನಗಳ ಮಾರಾಟವು ಸೆಪ್ಟೆಂಬರ್‌ನಲ್ಲಿ ಶೇಕಡಾ 23.69 ರಷ್ಟು ಕುಸಿಯುವ ಮೂಲಕ 2,23,317 ಕ್ಕೆ ತಲುಪಿದೆ. ಇದು ಹಿಂದಿನ ವರ್ಷದ 2,92,660 ಯುನಿಟ್‌ಗಳಿಂದ ಇಳಿಕೆಯಾಗಿದ್ದು, ಇದು ವಾಹನ ಮಾರಾಟದಲ್ಲಿ ಸತತ 11ನೇ ತಿಂಗಳ ಕುಸಿತವಾಗಿದೆ.

Last Updated : Oct 11, 2019, 04:46 PM IST
ದೇಶೀಯ ಪ್ರಯಾಣಿಕರ ವಾಹನ ಮಾರಾಟದಲ್ಲಿ ದಾಖಲೆ ಕುಸಿತ  title=
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶೀಯ ಪ್ರಯಾಣಿಕರ ವಾಹನಗಳ ಮಾರಾಟವು ಸೆಪ್ಟೆಂಬರ್‌ನಲ್ಲಿ ಶೇಕಡಾ 23.69 ರಷ್ಟು ಕುಸಿಯುವ ಮೂಲಕ 2,23,317 ಕ್ಕೆ ತಲುಪಿದೆ. ಇದು ಹಿಂದಿನ ವರ್ಷದ 2,92,660 ಯುನಿಟ್‌ಗಳಿಂದ ಇಳಿಕೆಯಾಗಿದ್ದು, ಇದು ವಾಹನ ಮಾರಾಟದಲ್ಲಿ ಸತತ 11ನೇ ತಿಂಗಳ ಕುಸಿತವಾಗಿದೆ.

ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ತಯಾರಕರ (ಸಿಯಾಮ್)  ಸಂಸ್ಥೆ ಶುಕ್ರವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ದೇಶೀಯ ಕಾರುಗಳ ಮಾರಾಟವು ಕಳೆದ ತಿಂಗಳು ಶೇ 33.4 ರಷ್ಟು ಕುಸಿದು 1,31,281 ಕ್ಕೆ ತಲುಪಿದೆ. ಕಳೆದ ತಿಂಗಳು ಮೋಟಾರ್‌ಸೈಕಲ್ ಮಾರಾಟವು ಶೇಕಡಾ 23.29 ರಷ್ಟು ಇಳಿಕೆ ಕಂಡು 10,43,624 ಕ್ಕೆ ತಲುಪಿದೆ. ಇದು ಒಂದು ವರ್ಷದ ಹಿಂದೆ 13,60,415 ಯುನಿಟ್‌ಗಳಷ್ಟಿತ್ತು.

ಸೆಪ್ಟೆಂಬರ್‌ನಲ್ಲಿ ಒಟ್ಟು ದ್ವಿಚಕ್ರ ವಾಹನ ಮಾರಾಟವು ಶೇಕಡಾ 22.09 ರಷ್ಟು ಇಳಿದು 16,56,774 ಕ್ಕೆ ತಲುಪಿದೆ.ವಾಣಿಜ್ಯ ವಾಹನಗಳ ಮಾರಾಟವು ಸೆಪ್ಟೆಂಬರ್‌ನಲ್ಲಿ ಶೇ 39.06 ರಷ್ಟು ಇಳಿಕೆ ಕಂಡು 58,419 ಕ್ಕೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 95,870 ಯುನಿಟ್‌ಗಳ ಮಾರಾಟವಾಗಿದೆ ಎಂದು ಸಿಯಾಮ್ ತಿಳಿಸಿದೆ. ಎಲ್ಲ ವಾಹನಗಳಮಾರಾಟವು 2018 ರ ಸೆಪ್ಟೆಂಬರ್‌ನಲ್ಲಿ 25,84,062 ಯುನಿಟ್‌ಗಳಿಂದ ಶೇ 22.41 ರಷ್ಟು ಇಳಿಕೆ 20,04,932 ಕ್ಕೆ ತಲುಪಿದೆ ಎಂದು ಅದು ಹೇಳಿದೆ.

Trending News