ಈ ನಗರದಲ್ಲಿ ಪ್ರತಿವರ್ಷ 5 ದಿನಗಳಿಗೂ ಮೊದಲೇ ಸ್ವಾತಂತ್ರ್ಯ ದಿನ ಆಚರಿಸುತ್ತಾರೆ. ಏಕೆ ಗೊತ್ತಾ?

ಇಲ್ಲೊಂದು ನಗರದಲ್ಲಿ ಆಗಸ್ಟ್ 10ರಂದೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದಾರೆ. ಅದ್ಯಾವ ನಗರ ಎಂದು ತಿಳಿದುಕೊಳ್ಳಬೇಕಾ? ಹಾಗಿದ್ದರೆ ಈ ಸುದ್ದಿ ಓದಿ...

Last Updated : Aug 15, 2018, 04:34 PM IST
ಈ ನಗರದಲ್ಲಿ ಪ್ರತಿವರ್ಷ 5 ದಿನಗಳಿಗೂ ಮೊದಲೇ ಸ್ವಾತಂತ್ರ್ಯ ದಿನ ಆಚರಿಸುತ್ತಾರೆ. ಏಕೆ ಗೊತ್ತಾ? title=

ಭೋಪಾಲ್: ಎಲ್ಲರೂ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15ರಂದು ಆಚರಿಸುತ್ತಾರೆ. ಅದರಂತೆ ಇಂದು ದೇಶದೆಲ್ಲೆಡೆ 72ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ಆದರೆ ಇಲ್ಲೊಂದು ನಗರದಲ್ಲಿ ಆಗಸ್ಟ್ 10ರಂದೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದಾರೆ. ಅದ್ಯಾವ ನಗರ ಎಂದು ತಿಳಿದುಕೊಳ್ಳಬೇಕಾ? ಹಾಗಿದ್ದರೆ ಈ ಸುದ್ದಿ ಓದಿ...

ದೇಶದೆಲ್ಲೆಡೆ ದಿನಾಂಕದ ಪ್ರಕಾರ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಆಚರಿಸಿದರೆ, ಈ ನಗರದಲ್ಲಿ ಮಾತ್ರ ಹಿಂದೂ ಪಂಚಾಂಗದ ಪ್ರಕಾರ ಸ್ವಾತಂತ್ಯ ದಿನಾಚರಣೆ ಆಚರಿಸುತ್ತಾರೆ. ಅಷ್ಟಕ್ಕೂ ಇಂಥ ಆಚರಣೆ ಮಾಡುವುದು ಇಂಧೋರ್​ನಿಂದ 250 ಕಿ.ಮೀ ದೂರದಲ್ಲಿರುವ ಮಂದಸೌರ್ ​ನ ಶಿವನಾ ನದಿ ಕಿನಾರೆಯಲ್ಲಿರುವ ಪಶುಪತಿನಾಥ ದೇವಸ್ಥಾನದಲ್ಲಿ!

1947ರ ಆಗಸ್ಟ್ 15 ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನ. ಅಂದು ಶ್ರೌವಣ ಕೃಷ್ಣ ಚತುರ್ದಶಿ ಆಗಿತ್ತಂತೆ. ಅದರಂತೆ ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಹಿಂದೂ ಪಂಚಂಗದಂತೆ ಶ್ರಾವಣ ಕೃಷ್ಣ ಚತುರ್ದಶಿ ತಿಥಿಯಂದೇ ಪಶುಪತಿನಾಥ ದೇವಸ್ಥಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಾರೆ. ಅಂದು ಗರಿಕೆ ಹುಲ್ಲಿನ ನೀರನ್ನು ಅಷ್ಠಮುಖಿ ಶಿವಲಿಂಗಕ್ಕೆ ಅಭಿಷೇಕ ಮಾಡಿ ದೇಶದ ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ಶಿವನಿಗೆ ವಿಶೇಷ ಪೂಜೆ ಮತ್ತು ನೈವೇದ್ಯ ಅರ್ಪಿಸಲಾಗುತ್ತದೆ. ಈ ಪರಂಪರೆ 1987 ರಿಂದಲೂ ಆಚರಣೆಯಲ್ಲಿದೆ.

Trending News