ನಿಮಗೆ ಗೊತ್ತಾ? ಲೋಕಸಭೆಯಲ್ಲಿ ಬಿಜೆಪಿಗಿಲ್ಲ ಸರಳ ಬಹುಮತ..!

    

Last Updated : Mar 16, 2018, 01:11 PM IST
ನಿಮಗೆ ಗೊತ್ತಾ? ಲೋಕಸಭೆಯಲ್ಲಿ ಬಿಜೆಪಿಗಿಲ್ಲ ಸರಳ ಬಹುಮತ..! title=

ನವದೆಹಲಿ: ಉತ್ತರ ಪ್ರದೇಶ ಮತ್ತು ಬಿಹಾರ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದ ಹಿನ್ನಲೆಯಲ್ಲಿ ಅದು ಈಗ ಸಂಸತ್ತಿನ ಕೆಳಮನೆಯಲ್ಲಿ ಅಲ್ಪಮತಕ್ಕೆ ಕುಸಿದಿದೆ.

ಹೌದು, 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯು 282 ಲೋಕಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಉಪ ಚುನಾವಣೆಗಳಲ್ಲಿ ಸೋಲನ್ನು ಅನುಭವಿಸುವುದರ ಮೂಲಕ ಅದರ ಸದಸ್ಯರ ಸಂಖ್ಯೆ 271ಕ್ಕೆ ಕುಸಿದಿದೆ. ಲೋಕಸಭೆಯಲ್ಲಿ ಸರಳ ಬಹುಮತಕ್ಕೆ ಕನಿಷ್ಠ 272 ರ ಮ್ಯಾಜಿಕ್ ಸಂಖ್ಯೆ ಅವಶ್ಯಕತೆ ಇದೆ, ಆದರೆ ಈಗ ಬಿಜೆಪಿ ಉಪ ಚುನಾವಣೆಯಲ್ಲಿ ಸೋತಿರುವ ಹಿನ್ನಲೆಯಲ್ಲಿ ಅಲ್ಪಮತಕ್ಕೆ ಕುಸಿದಿದೆ.

ಅದರಲ್ಲೂ ಪ್ರಮುಖವಾಗಿ 2017 ಮತ್ತು 2018 ರ ಅವಧಿಯಲ್ಲಿ  ನಡೆದ ಉಪ ಚುನಾವಣೆಯಲ್ಲಿ ಒಂದೇ ಒಂದು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವನ್ನು ಸಾಧಿಸಿಲ್ಲ. ಈ ಅವಧಿಯಲ್ಲಿ ನಡೆದ ಅಮೃತ್ಸರ್, ಶ್ರೀನಗರ, ಮಲಪ್ಪುರಂ, ಗುರುದಾಸ್ಪುರ್, ಅಜ್ಮೇರ್, ಅಲ್ವಾರ್, ಉಲುಬೆರಿಯಾ, ಗೋರಖ್ಪುರ್, ಫುಲ್ಪುರ್ ಮತ್ತು ಅರೆರಿಯಾ ದಲ್ಲಿ ಬಿಜೆಪಿ ಹಿನಾಯವಾಗಿ  ಸೋಲನ್ನು ಅನುಭವಿಸಿದೆ.

ಸಧ್ಯ ಲೋಕಸಭೆಯಲ್ಲಿ ಬಿಜೆಪಿ 271 ಸದಸ್ಯರನ್ನು ಹೊಂದಿದೆ.ಅದರಲ್ಲಿ ಕೀರ್ತಿ ಅಜಾದ್ ಮತ್ತು ಶತ್ರುಘ್ನ ಸಿನ್ಹಾ ಬಿಜೆಪಿ ವಿರುದ್ದ ಬಂಡಾಯವೆದ್ದಿದ್ದಾರೆ.ಇನ್ನೊಂದೆಡೆಗೆ ಬಿಜೆಪಿ ಮಿತ್ರಪಕ್ಷಗಳಾಗಿದ್ದ ಶಿವಸೇನಾ ಮತ್ತು ತೆಲುಗು ದೇಶಂ ಕೂಡಾ ಬಿಜೆಪಿಯಿಂದ ದೂರಸರಿದಿವೆ.ಇದರಿಂದ ಬಿಜೆಪಿಗೆ ಮುಂಬರುವ 2019ರ ಲೋಕಸಭಾ ಚುನಾವಣೆ ನಿಜಕ್ಕೂ ಸವಾಲಿನ ಸಂಗತಿಯಾಗಲಿದೆ. 

Trending News