Traffic Rules - ನೀವೂ ವಾಹನ ಚಲಿಸುವಾಗ Google Map ಬಳಸುತ್ತೀರಾ? ಹಾಗಾದ್ರೆ ಮೊದಲು ಈ ಸುದ್ದಿ ಓದಿ

Traffic Rules - ಬದಲಾಗುತ್ತಿರುವ ಕಾಲದೊಂದಿಗೆ ಮೊಬೈಲ್ ಅಪ್ಲಿಕೇಶನ್ ಬಳಕೆ ಕೂಡ ಹೆಚ್ಚುತ್ತಿದೆ. ಆದರೆ, ವಾಹನ ಚಾಲನೆ ಮಾಡುವಾಗ ಗಮ್ಯ ಸ್ಥಾನ ತಲುಪಲು ಒಂದು ವೇಳೆ ನೀವೂ ಕೂಡ ಗೂಗಲ್ ಮ್ಯಾಪ್ ಬಳಕೆ ಮಾಡುತ್ತಿದ್ದಾರೆ ಈಗಲೇ ಎಚ್ಚೆತ್ತುಕೊಳ್ಳಿ. ಏಕೆಂದರೆ ನಿಮಗೆ ರೂ.5000 ವರೆಗೆ ದಂಡ ಬೀಳುವ ಸಾಧ್ಯತೆ ಇದೆ.

Written by - Nitin Tabib | Last Updated : Feb 14, 2021, 12:02 PM IST
  • ಡ್ರೈವಿಂಗ್ ಮಾಡುವಾಗ ಎಚ್ಚರಿಕೆ ವಹಿಸಿ
  • ಕೈಯಲ್ಲಿ ಮೊಬೈಲ್ ಹಿಡಿದು ಗೂಗಲ್ ಮ್ಯಾಪ್ ಬಳಸಬೇಡಿ.
  • ಹೀಗೆ ಮಾಡಿದಲ್ಲಿ ನಿಮಗೆ ರೂ.5 ಸಾವಿರವರೆಗೆ ದಂಡ ಬೀಳುವ ಸಾಧ್ಯತೆ ಇದೆ.
Traffic Rules - ನೀವೂ ವಾಹನ ಚಲಿಸುವಾಗ Google Map ಬಳಸುತ್ತೀರಾ? ಹಾಗಾದ್ರೆ ಮೊದಲು ಈ ಸುದ್ದಿ ಓದಿ  title=
Traffic Rules (File Photo)

ನವದೆಹಲಿ: Traffic Rules - ಇಂದಿನ ಕಾಲದಲ್ಲಿ ಜನರು ಬೇರೊಬ್ಬರಿಗೆ ದಾರಿ ಕೇಳುವ ಬದಲು ನ್ಯಾವಿಗೇಶನ್ ಆಪ್ ಬಳಸಿ ತಮ್ಮ ಗಮ್ಯ ಸ್ಥಾನವನ್ನು ತಲುಪಲು ಹೆಚ್ಚು ಇಷ್ಟಪಡುತ್ತಾರೆ. ಇದೆ ಕಾರಣದಿಂದ ಇಂದು ಗೂಗಲ್ ಮ್ಯಾಪ್ ಹೆಚ್ಚಾಗಿ ಬಳಕೆಯಾಗುತ್ತಿದೆ. ಆದರೆ ಒಂದು ವೇಳೆ ನೀವು ಡ್ರೈವಿಂಗ್ ಮಾಡುವಾಗ ಕೈಯಲ್ಲಿ ಮೊಬೈಲ್ (Mobile) ಫೋನ್ ಹಿಡಿದು ಗೂಗಲ್ ಮ್ಯಾಪ್ ಬಳಸುತ್ತಿದ್ದರೆ, ಇದು ನಿಮ್ಮ ಜೇಬಿಗೆ ದುಬಾರಿಯಾಗಿ ಪರಿಣಮಿಸಲಿದೆ.

5 ಸಾವಿರ ದಂಡ ಬೀಳುವ ಸಾಧ್ಯತೆ
ಸಾಮಾನ್ಯವಾಗಿ ಜನರು ಡ್ರೈವಿಂಗ್ (Driving) ಮಾಡುವಾಗ ಗೂಗಲ್ ಮ್ಯಾಪ್ ನ ನ್ಯಾವಿಗೇಶನ್ ಸಕ್ರೀಯಗೊಳಿಸುತ್ತಾರೆ. ತನ್ಮೂಲಕ ಅವರಿಗೆ ರೂಟ್ ಕುರಿತು ಮಾಹಿತಿ ಸಿಗುತ್ತದೆ ಹಾಗೂ ಯಾವುದೇ ಒಂದು ಸ್ಥಾನದಲ್ಲಿ ಟ್ರಾಫಿಕ್ ಜಾಮ್ ಇದ್ದರೆ ಅದರ ಮಾಹಿತಿ ಕೂಡ ಸಿಗುತ್ತದೆ. ಹೀಗಾಗಿ ಸಮಯ ಇರುವಂತೆ ಜನರು ಬೇರೆ ಮಾರ್ಗಗಳ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಇವೆಲ್ಲವೂ ಗೂಗಲ್ ಮ್ಯಾಪ್ ನ ಲಾಭಗಳಾಗಿವೆ. ಗೂಗಲ್ ಮ್ಯಾಪ್ ನಿಂದ ಕೆಲ ಹಾನಿಗಳು ಕೂಡ ಇವೆ. ಒಂದು ವೇಳೆ ನೀವು ನಿಮ್ಮ ವಾಹನದ ಡ್ಯಾಶ್ ಬೋರ್ಡ್ ಮೇಲೆ ಮೊಬೈಲ್ ಹೋಲ್ಡರ್ ಅಳವಡಿಸಿಲ್ಲ ಮತ್ತು ಕೈಯಲ್ಲಿ ಮೊಬೈಲ್ ಹಿಡಿದು ಗೂಗಲ್ ಮ್ಯಾಪ್ ಬಳಸುತ್ತಿದ್ದಾರೆ. ನಿಮಗೆ 5000 ದಂಡ ವಿಧಿಸುವ ನಿಯಮವಿದೆ.

ಇದನ್ನು ಓದಿ-Google Mapsನಲ್ಲಿ ಶೀಘ್ರದಲ್ಲಿಯೇ ಬರಲಿದೆ ಈ ವೈಶಿಷ್ಟ್ಯ, ಕೊರೊನಾ ಕಾಲದಲ್ಲಿ ಬಳಕೆದಾರರಿಗೆ ನೆಮ್ಮದಿ

ಮೋಟರ್ ವೆಹಿಕಲ್ ಆಕ್ಟ್ ಅಡಿ ಈ ದಂಡ ಬೀಳಲಿದೆ
ಇತ್ತೀಚಿಗೆ ಇದೆ ನಿಯಮದ(Traffic Rules) ಅಡಿ ದೆಹಲಿ ಪೊಲೀಸರು ವ್ಯಕ್ತಿಯೊಬ್ಬನಿಗೆ ದಂಡ ವಿಧಿಸಿದ್ದಾರೆ. ಆ ವ್ಯಕ್ತಿ ಮೊಬೈಲ್ ಕೈಯಲ್ಲಿ ಹಿಡಿದು ವಾಹನ ಚಲಾಯಿಸುತ್ತಿದ್ದ ಹಾಗೂ ಅದರಲ್ಲಿ ಆತ ಗೂಗಲ್ ಮ್ಯಾಪ್ ಬಳಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಇಂತಹ ಸಂದರ್ಭಗಳಲ್ಲಿ ಡ್ರೈವರ್ ಚಿತ್ತ ವಿಚಲಿತವಾಗುವ ಸಾಧ್ಯತೆ ಇದೆ. ಈ ಪ್ರಕರಣ ಅಜಾಗರೂಕ ಡ್ರೈವಿಂಗ್ ಶ್ರೇಣಿಗೆ ಬರುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನು ಓದಿ-Trick: ನಿಮ್ಮ ಸ್ಮಾರ್ಟ್‌ಫೋನ್ ಕಳೆದುಹೋದರೆ ಚಿಂತಿಸಬೇಡಿ! Google ಸಹಾಯದಿಂದ ಅದನ್ನು ಹೀಗೆ ಪತ್ತೆ ಹಚ್ಚಿ

ಮೊಬೈಲ್ ಹೋಲ್ಡರ್ ಬಳಕೆ ಮಾಡಿ   
ಒಂದು ವೇಳೆ ನೀವು ವಾಹನ ಚಲಾಯಿರುವಾಗ ಗೂಗಲ್ ಮ್ಯಾಪ್ (Google Map) ಬಳಕೆ ಮಾಡಲು ಬಯಸುತಿದ್ದರೆ, ನೀವು ನಿಮ್ಮ ವಾಹನದಲ್ಲಿ ಮೊಬೈಲ್ ಹೋಲ್ಡರ್ ಅಳವಡಿಸಿ ನಂತರ ತನ್ಮೂಲಕ ಗೂಗಲ್ ಮ್ಯಾಪ್ ಬಳಸಿ. ಇದು ನಿಯಮಗಳ ಅಡಿ ಸರಿ ಕೂಡ ಹೌದು (Penalty Provision). ಕಾರ್ ನಲ್ಲಿ ಮೊಬೈಲ್ ಹೋಲ್ಡರ್ ಅಳವಡಿಸಲು 1 ಸಾವಿರ ಹಾಗೂ ಬೈಕ್ ಗಳಲ್ಲಿ ಮೊಬೈಲ್ ಹೋಲ್ಡರ್ ಅಳವಡಿಸಲು ನೀವು ರೂ.200 ನೀಡಬೇಕು. ಇದನ್ನು ಮಾಡುವುದರಿಂದ ನೀವು 5000 ರೂ.ಚಾಲನ್ ತಪ್ಪಿಸಬಹುದು.

ಇದನ್ನು ಓದಿ -ಹಾರುವು ತಟ್ಟೆಗಳು ಪತ್ತೆ: ನಾಸಾದ ಹಳೆ ವೀಡಿಯೊಗಳ ರಹಸ್ಯ ಭೇದಿಸಿದ ಗೂಗಲ್ ಅರ್ಥ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News