ಸಂಖ್ಯೆ ಬಗ್ಗೆ ಯೋಚಿಸಬೇಡಿ, ಸದನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ; ವಿಪಕ್ಷಗಳಿಗೆ ಪ್ರಧಾನಿ ಮೋದಿ ಮನವಿ

ನಾವು ಸಂಸತ್ತಿಗೆ ಬಂದಾಗ, ಮೈತ್ರಿಪಕ್ಷ ಮತ್ತು ವಿಪಕ್ಷ  ಎಂಬುದನ್ನು ಮರೆಯಬೇಕು. ನಾವು ನಿಶ್ಪಕ್ಷ ಮನೋಭಾವದಿಂದ ಸಮಸ್ಯೆಗಳ ಬಗ್ಗೆ ಯೋಚಿಸಬೇಕು ಹಾಗೂ ರಾಷ್ಟ್ರದ ಹಿತದೃಷ್ಟಿಯಿಂದ ಕೆಲಸ ಮಾಡಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

Last Updated : Jun 17, 2019, 11:56 AM IST
ಸಂಖ್ಯೆ ಬಗ್ಗೆ ಯೋಚಿಸಬೇಡಿ, ಸದನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ; ವಿಪಕ್ಷಗಳಿಗೆ ಪ್ರಧಾನಿ ಮೋದಿ ಮನವಿ title=

ನವದೆಹಲಿ: ಸದನದಲ್ಲಿ ವಿರೋಧ ಪಕ್ಷಗಳು ಸಂಖ್ಯೆಯ ಬಗ್ಗೆ ಚಿಂತಿಸದೆ ಸಕ್ರಿಯವಾಗಿ ಪಾಲ್ಗೊಳ್ಳಿ, ಚರ್ಚಿಸಿ ಎಂದು ವಿರೋಧ ಪಕ್ಷಗಳಿಗೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. 

ಇಂದು ಆರಂಭವಾಗಿರುವ 17ನೇ ಲೋಕಸಭೆಯ ಮೊದಲ ಅಧಿವೇಶನಕ್ಕೂ ಮುನ್ನ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸಂಸದೀಯ ಪ್ರಜಾಪ್ರಭುತ್ವದಲ್ಲಿ "ಪ್ರತಿಪಕ್ಷ ಮತ್ತು ಪ್ರತಿಪಕ್ಷಗಳ ಸಕ್ರಿಯ ಭಾಗವಹಿಸುವಿಕೆ ಮುಖ್ಯವಾಗಿದೆ. ಪ್ರತಿಪಕ್ಷಗಳು ಅವರ ಸಂಖ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅವರು ಸಕ್ರಿಯವಾಗಿ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆ ಮತ್ತು ಸದನದ ಪ್ರಕ್ರಿಯೆಗಳಲ್ಲಿ ಭಾಗವಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು, "ನಾವು ಸಂಸತ್ತಿಗೆ ಬಂದಾಗ, ಮೈತ್ರಿಪಕ್ಷ ಮತ್ತು ವಿಪಕ್ಷ  ಎಂಬುದನ್ನು ಮರೆಯಬೇಕು. ನಾವು ನಿಶ್ಪಕ್ಷ ಮನೋಭಾವದಿಂದ ಸಮಸ್ಯೆಗಳ ಬಗ್ಗೆ ಯೋಚಿಸಬೇಕು ಹಾಗೂ ರಾಷ್ಟ್ರದ ಹಿತದೃಷ್ಟಿಯಿಂದ ಕೆಲಸ ಮಾಡಬೇಕು" ಎಂದು ಮೋದಿ ಹೇಳಿದರು. 

ಇದೇ ಸಂದರ್ಭದಲ್ಲಿ, ನೂತನವಾಗಿ ಚುನಾಯಿತರಾದ ಎಲ್ಲಾ ಸಂದರನ್ನು ಸ್ವಾಗತಿಸಿದ ಪ್ರಧಾನಿ ಮೋದಿ, ಜನರ ಆಕಾಂಕ್ಷೆಗಳನ್ನು ಈಡೇರಿಸಲು ಸಂಸತ್ತಿನ ನಡಾವಳಿಗಳು ಸುಗಮವಾಗಿ ನಡೆಯಲು ಅವಕಾಶ ಮಾಡಿಕೊಡುವಂತೆ ಸಂಸದರಿಗೆ ಮನವಿ ಮಾಡಿದರಲ್ಲದೆ, ಈ ಬಾರಿ ಅತಿ ಹೆಚ್ಚು ಸಂಖ್ಯೆಯಲ್ಲಿ ಮಹಿಳಾ ಸಂಸದರು ಆಯ್ಕೆಯಾಗಿರುವುದಕ್ಕೆ ಮೋದಿ ಹರ್ಷ ವ್ಯಕ್ತಪಡಿಸಿದರು. 

Trending News