'ಒಡೆದಾಳುವ ರಾಜಕೀಯ ಬಂಗಾಳದಲ್ಲಿ ನಡೆಯಲ್ಲ' ಶಾ ಹೇಳಿಕೆಗೆ ದೀದಿ ತಿರುಗೇಟು

ಕೊಲ್ಕತ್ತಾದಲ್ಲಿ ಇಂದು ಅಮಿತ್ ಶಾ ಮಮತಾ ಬ್ಯಾನರ್ಜೀ ಅವರು ಮತಕ್ಕಾಗಿ ನುಸುಳುಕೋರರನ್ನು ರಾಜ್ಯದಲ್ಲಿ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಪಶ್ಚಿಮ ಬಂಗಾಳದಲ್ಲಿ ಒಡೆದಾಳುವ ರಾಜಕಾರಣ ನಡೆಯಲ್ಲ ಎಂದು ಹೇಳಿದ್ದಾರೆ. 

Last Updated : Oct 1, 2019, 08:13 PM IST
'ಒಡೆದಾಳುವ ರಾಜಕೀಯ ಬಂಗಾಳದಲ್ಲಿ ನಡೆಯಲ್ಲ' ಶಾ ಹೇಳಿಕೆಗೆ ದೀದಿ ತಿರುಗೇಟು title=
file photo

ನವದೆಹಲಿ: ಕೊಲ್ಕತ್ತಾದಲ್ಲಿ ಇಂದು ಅಮಿತ್ ಶಾ ಮಮತಾ ಬ್ಯಾನರ್ಜೀ ಅವರು ಮತಕ್ಕಾಗಿ ನುಸುಳುಕೋರರನ್ನು ರಾಜ್ಯದಲ್ಲಿ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಪಶ್ಚಿಮ ಬಂಗಾಳದಲ್ಲಿ ಒಡೆದಾಳುವ ರಾಜಕಾರಣ ನಡೆಯಲ್ಲ ಎಂದು ಹೇಳಿದ್ದಾರೆ. 

'ಪ್ರತಿಯೊಬ್ಬರೂ ನಮ್ಮ ರಾಜ್ಯಕ್ಕೆ ಸ್ವಾಗತಿಸುತ್ತೇವೆ ಮತ್ತು ನಮ್ಮ ಆತಿಥ್ಯವನ್ನು ಎಲ್ಲರೂ ಆನಂದಿಸುತ್ತಾರೆ. 'ದಯವಿಟ್ಟು ಧರ್ಮದ ಆಧಾರದ ಮೇಲೆ ರಾಜಕೀಯ ವಿಭಜನೆ ಮಾಡಬೇಡಿ, ಜನರಲ್ಲಿ ಬಿರುಕು ಮೂಡಿಸಲು ಪ್ರಯತ್ನಿಸಬೇಡಿ, ಬಂಗಾಳವು ಹಲವಾರು ಧರ್ಮಗಳ ನಾಯಕರನ್ನು ಯುಗ ಯುಗಗಳಿಂದ ಗೌರವಿಸುತ್ತ ಬಂದಿದೆ, ಇದನ್ನು ಎಂದಿಗೂ ನಾಶಪಡಿಸಲು ಸಾಧ್ಯವಿಲ್ಲ ಎಂದು ಮಮತಾ ಬ್ಯಾನರ್ಜೀ ಹೇಳಿದ್ದಾರೆ.

ಇಂದು ಅಮಿತ್ ಶಾ, ಮಮತಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿ ಕೇಂದ್ರ ಸರ್ಕಾರವು ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಾವಣೆಯನ್ನು ಜಾರಿಗೆ ತರುತ್ತದೆ. ತೃಣಮೂಲ ಕಾಂಗ್ರೆಸ್ ಇದಕ್ಕೆ ಎಷ್ಟೇ ವಿರೋಧಿಸಿದರೂ, ಬಿಜೆಪಿ ಅದನ್ನು ಪೂರೈಸಲಿದೆ ಎಂದು ಹೇಳಿದ್ದರು. 'ಬಂಗಾಳದ ಜನರು ಎನ್‌ಆರ್‌ಸಿ ಬಗ್ಗೆ ದಾರಿ ತಪ್ಪುತ್ತಿದ್ದಾರೆ. ಹಿಂದೂ, ಬೌದ್ಧ, ಸಿಖ್, ಜೈನ ನಿರಾಶ್ರಿತರೆಲ್ಲ ದೇಶವನ್ನು ತೊರೆಯಬೇಕಾಗಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ಅವರು ಭಾರತೀಯ ಪೌರತ್ವವನ್ನು ಪಡೆಯುತ್ತಾರೆ ಮತ್ತು ಭಾರತೀಯರ ಎಲ್ಲಾ ಹಕ್ಕುಗಳನ್ನು ಅನುಭವಿಸುತ್ತಾರೆ' ಎಂದು ಅಮಿತ್ ಶಾ ಹೇಳಿದರು.  

ಮಮತಾ ಬ್ಯಾನರ್ಜಿ ಕಳೆದ ತಿಂಗಳು ದೆಹಲಿಯಲ್ಲಿ ಅಮಿತ್ ಷಾ ಅವರನ್ನು ಭೇಟಿ ಮಾಡಿ ನಾಗರಿಕರ ನೋಂದಣಿಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಎನ್ಆರ್ಸಿ ಪಶ್ಚಿಮ ಬಂಗಾಳದಲ್ಲಿ ಅಗತ್ಯವಿಲ್ಲ ಎಂದು ತಿಳಿಸಿದ್ದರು.  

Trending News