ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟರೇ? ಸುಭಾಷ್ ಚಂದ್ರ ಬೋಸ್ ಪುತ್ರಿ ಹೇಳಿದ್ದೇನು?

ನೇತಾಜಿಯ ಮಗಳು ಅನಿತಾ ಬೋಸ್ 1944 ರಲ್ಲಿ ತನ್ನ ತಂದೆ ಹೇಗೆ ನಿಧನರಾದರು ಎಂಬುದನ್ನು ಬಹಿರಂಗಪಡಿಸಿದ್ದರು. ಝೀ ನ್ಯೂಸ್ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಅವರೊಂದಿಗಿನ ಸಂಭಾಷಣೆಯಲ್ಲಿ ಅನಿತಾ ಬೋಸ್ 1944 ರಲ್ಲಿ ತೈಪೆಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ನೇತಾಜಿ ನಿಧನರಾದರು ಎಂದು ಹೇಳಿದರು.

Last Updated : Jan 24, 2020, 06:22 AM IST
ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟರೇ? ಸುಭಾಷ್ ಚಂದ್ರ ಬೋಸ್ ಪುತ್ರಿ ಹೇಳಿದ್ದೇನು? title=

ನವದೆಹಲಿ: ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 123 ನೇ ಜನ್ಮ ದಿನಾಚರಣೆಯಂದು ಗುರುವಾರ (ಜನವರಿ 23) ರಾಷ್ಟ್ರವು ಗೌರವ ಸಲ್ಲಿಸುತ್ತಿದ್ದರೂ ಸಹ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರನ ಸಾವು ಇನ್ನೂ ರಹಸ್ಯವಾಗಿ ಮುಚ್ಚಿಹೋಗಿದೆ.

ಕೆಲವು ವರ್ಷಗಳ ಹಿಂದೆ ಝೀ ಮೀಡಿಯಾದೊಂದಿಗೆ ಮಾತನಾಡಿದ ನೇತಾಜಿ ಅವರ ಪುತ್ರಿ ಅನಿತಾ ಬೋಸ್ 1944 ರಲ್ಲಿ ತಮ್ಮ ತಂದೆ ಹೇಗೆ ನಿಧನರಾದರು ಎಂಬುದನ್ನು ಬಹಿರಂಗಪಡಿಸಿದ್ದರು. ಝೀ ನ್ಯೂಸ್ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಅವರೊಂದಿಗಿನ ಸಂಭಾಷಣೆಯಲ್ಲಿ ಅನಿತಾ ಬೋಸ್ 1945ರ ಆಗಸ್ಟ್ 18 ರಂದು ವಿಮಾನ ಅಪಘಾತದಲ್ಲಿ ನೇತಾಜಿ ನಿಧನರಾದರು ಎಂದು ಹೇಳಿದರು. 

ಅಪ್ರತಿಮ ನಾಯಕನ ಸಾವಿನ ಬಗ್ಗೆ ಹಲವಾರು ಸಿದ್ಧಾಂತಗಳು ಮತ್ತು ಆಧಾರರಹಿತ ವದಂತಿಗಳ ಕಾರಣದಿಂದಾಗಿ, ಹೆಚ್ಚಿನ ಸಂಖ್ಯೆಯ ಭಾರತೀಯರು ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ನಂಬಿದರೆ, ಇತರರು ಅವರು 1985 ರವರೆಗೆ ಉತ್ತರ ಪ್ರದೇಶದ ಗುಮ್ನಾಮಿ ಬಾಬಾ ಎಂಬ ಸೋಗಿನಲ್ಲಿ ವಾಸಿಸುತ್ತಿದ್ದರು ಎಂದು ವಾದಿಸುತ್ತಾರೆ.

1944 ರಲ್ಲಿ ದೇಶದಲ್ಲಿ ಯಾವುದೇ ವಿಮಾನ ಅಪಘಾತ ಸಂಭವಿಸಿಲ್ಲ ಎಂದು ತೈಪೆಯ ಅಂದಿನ ಸರ್ಕಾರವು ದೃಢಪಡಿಸಿತ್ತು, ಇದು ಅವರ ಸಾವಿನ ಬಗ್ಗೆ ಊಹಾಪೋಹಗಳಿಗೆ ಕಾರಣವಾಯಿತು.

ಆದಾಗ್ಯೂ, ವಿಮಾನ ಅಪಘಾತದಿಂದ ನೇತಾಜಿ ಬದುಕುಳಿದಿದ್ದರೆ, ಅವರು ತಮ್ಮ ಕುಟುಂಬವನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು ಮತ್ತು ಬ್ರಿಟಿಷ್ ಆಡಳಿತದಿಂದ ದೇಶವು ಸ್ವಾತಂತ್ರ್ಯ ಪಡೆದ ನಂತರ ಭಾರತಕ್ಕೆ ಮರಳುತ್ತಿದ್ದರು ಎಂದು ಅನಿತಾ ಹೇಳಿದ್ದಾರೆ.

ಆದಾಗ್ಯೂ, ನೇತಾಜಿ ಸಾವಿನ ಸುದ್ದಿ ತನ್ನ ತಾಯಿಯನ್ನು ಸಂಪೂರ್ಣವಾಗಿ ಕುಗ್ಗುವಂತೆ ಮಾಡಿತು. ಹಲವಾರು ವರ್ಷಗಳ ಕಾಯುವಿಕೆಯ ನಂತರ, ನೇತಾಜಿಯ ಸಾವಿನ ಕುರಿತ ವರದಿಗಳನ್ನು ನಂಬಲು ಯಾವುದೇ ಅರ್ಥವಿಲ್ಲ ಮತ್ತು ಅವನು ಜೀವಂತವಾಗಿಲ್ಲ ಎಂದು ನನ್ನ ಕುಟುಂಬ ಒಪ್ಪಿಕೊಂಡಿದೆ ಎಂದು ಅನಿತ್ ತಿಳಿಸಿದರು.

ಇದೇ ಸಂದರ್ಭದಲ್ಲಿ ಭಾರತ ಸರ್ಕಾರಕ್ಕೆ ಭಾವನಾತ್ಮಕವಾಗಿ ಮನವಿ ಮಾಡಿದ ಅನಿತಾ, ನೇತಾಜಿಯ ಚಿತಾಭಸ್ಮವನ್ನು ಜಪಾನ್‌ನಿಂದ ಮರಳಿ ಭಾರತಕ್ಕೆ ತಂದು ಗಂಗಾ ನದಿಯಲ್ಲಿ ಮುಳುಗಿಸಬೇಕೆಂಬುದು ಅವರ ಕುಟುಂಬದ ಆಶಯವಾಗಿದೆ. ಅದಕ್ಕೆ ಸೂಕ್ತ ಕ್ರಮ ಜರುಗಿಸುವಂತೆ ಕೇಳಿಕೊಂಡರು.

ದೇಶವಾಸಿಗಳ ಪರವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 123 ನೇ ಜನ್ಮದಿನಾಚರಣೆಯಂದು ಅವರಿಗೆ ಗುರುವಾರ ಗೌರವ ಸಲ್ಲಿಸಿದರು ಮತ್ತು ತಮ್ಮ ಸಹ ಭಾರತೀಯರ ಪ್ರಗತಿ ಮತ್ತು ಯೋಗಕ್ಷೇಮಕ್ಕಾಗಿ ನಿಂತಿರುವ ನಾಯಕನಿಗೆ ರಾಷ್ಟ್ರವು ಯಾವಾಗಲೂ ಕೃತಜ್ಞರಾಗಿರಬೇಕು ಎಂದು ಹೇಳಿದರು. 

1.55 ನಿಮಿಷಗಳ ಸುದೀರ್ಘ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ಮೋದಿ, ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿಯ ಕೊಡುಗೆಗಳನ್ನು ಪಟ್ಟಿ ಮಾಡಿದರು ಮತ್ತು ದೇಶಕ್ಕೆ ಸ್ವಾತಂತ್ರ್ಯವನ್ನು ಪಡೆಯುವಲ್ಲಿ ಅವರ ಸಮರ್ಪಣೆಯನ್ನು ನೆನಪಿಸಿಕೊಂಡರು.

Trending News