ನವದೆಹಲಿ: ಸಾಂವಿಧಾನಿಕ ಸಿಂಧುತ್ವದ ಸವಾಲನ್ನು ಎದುರಿಸುತ್ತಿರುವ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆ 'ಆಧಾರ್' ಕುರಿತಾದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಗುರುವಾರದಂದು ನಡೆಸಿತು.
ಈ ವಿಚಾರಣೆಯ ಸಂದರ್ಭದಲ್ಲಿ, 2016 ರ ಶಾಸನ ಬದ್ಧವಾದ ಸಂವಿಧಾನದ ಸಮ್ಮತತೆಯನ್ನು ಪ್ರಶ್ನಿಸುವ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಆಧಾರ್ ಮೂಲಕ 'ಧೋನಿ' ಮಾಹಿತಿ ಸೋರಿಕೆಯಾದ ಪ್ರಕರಣವನ್ನು ಪ್ರಸ್ತಾಪಿಸಿತು. ಅಲ್ಲದೆ, ಈ ಮೂಲಕ ಆಧಾರ್ ಮಾಹಿತಿಯ ಮಾರಾಟ ಮತ್ತು ಅದರ ದತ್ತಾಂಶಗಳ ಭದ್ರತೆಯ ಕುರಿತಾಗಿ ಸರ್ಕಾರವು ಯಾವ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಸರ್ಕಾರವನ್ನು ಪ್ರಶ್ನಿಸಿದರು.
ಆಧಾರ ಯೋಜನೆಯ ಭದ್ರತೆಯ ಕುರಿತಾಗಿ ನಡೆಯುತ್ತಿದ್ದ ವಿಚಾರಣೆಯಲ್ಲಿ ಇತ್ತೀಚಿಗೆ ಧೋನಿಯವರ ಆಧಾರ್ ಕಾರ್ಡ್ ಮಾಹಿತಿ ಸೋರಿಕೆಯಾದ ಕಾರಣ, ಈ ಪ್ರಕರಣವನ್ನು ಉಲ್ಲೇಖಿಸುತ್ತಾ ನ್ಯಾಯಾಧೀಶರು ಅದರ ಭದ್ರತೆಗಾಗಿ ಯಾವ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ ಎಂದು ಪ್ರಶ್ನಿಸಿದ್ದಾರೆ ಎಂದು ಹೇಳಲಾಗಿದೆ.