15ನೇ ವಯಸ್ಸಿಗೆ ಓಡಿ ಹೋದ ಕಿರುತೆರೆಯ ಖ್ಯಾತ ನಟಿ.. ಮದುವೆಗೂ ಮುನ್ನ ಪ್ರೆಗ್ನೆಂಟ್!!

Pooja Banerjee Life Story: ದೇವೋನ್ ಕೆ ದೇವ್ ಮಹಾದೇವ್‌ ಧಾರಾವಾಹಿ ಮೂಲಕ ಹೆಚ್ಚು ಜನಪ್ರಿಯತೆಯನ್ನು ಪಡೆದವರು ಪೂಜಾ. ಅವರ ಪಾರ್ವತಿ ಪಾತ್ರ ಇಂದಿಗೂ ಎಲ್ಲರ ಮನದಲ್ಲಿ ಉಳಿದಿದೆ.

Written by - Bhavishya Shetty | Last Updated : Dec 4, 2023, 10:58 PM IST
    • ದೇವೋನ್ ಕೆ ದೇವ್ ಮಹಾದೇವ್‌ ಧಾರಾವಾಹಿ ಮೂಲಕ ದೊಡ್ಡ ಹೆಸರು ಮಾಡಿರುವ ಪೂಜಾ ಬ್ಯಾನರ್ಜಿ
    • ಪೂಜಾ ಅವರ ಪಾರ್ವತಿ ಪಾತ್ರ ಇಂದಿಗೂ ಎಲ್ಲರ ಮನದಲ್ಲಿ ಉಳಿದಿದೆ
    • ಸೀರಿಯಲ್ ಮೂಲಕ ಹೆಚ್ಚು ಜನಪ್ರಿಯತೆಯನ್ನು ಪಡೆದವರು ಪೂಜಾ
15ನೇ ವಯಸ್ಸಿಗೆ ಓಡಿ ಹೋದ ಕಿರುತೆರೆಯ ಖ್ಯಾತ ನಟಿ.. ಮದುವೆಗೂ ಮುನ್ನ ಪ್ರೆಗ್ನೆಂಟ್!!   title=
Pooja Banerjee Life Story

Pooja Banerjee Life Story: ದೇವೋನ್ ಕೆ ದೇವ್ ಮಹಾದೇವ್‌ ಧಾರಾವಾಹಿ ಮೂಲಕ ದೊಡ್ಡ ಹೆಸರು ಮಾಡಿರುವ ಪೂಜಾ ಬ್ಯಾನರ್ಜಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇದೇ ಸೀರಿಯಲ್ ಮೂಲಕ ಹೆಚ್ಚು ಜನಪ್ರಿಯತೆಯನ್ನು ಪಡೆದವರು ಪೂಜಾ. ಅವರ ಪಾರ್ವತಿ ಪಾತ್ರ ಇಂದಿಗೂ ಎಲ್ಲರ ಮನದಲ್ಲಿ ಉಳಿದಿದೆ. ಇದಲ್ಲದೆ, ಪೂಜಾ ಬ್ಯಾನರ್ಜಿ ಯಾವುದೇ ಪಾತ್ರವನ್ನು ನಿರ್ವಹಿಸಿದರೂ ಆ ಪಾತ್ರಗಳಿಗೆ ಪೂಜಾ ಯಾವಾಗಲೂ ಜೀವ ತುಂಬುತ್ತಾರೆ.

ಇದನ್ನೂ ಓದಿ: ರೀಲ್ಸ್ ಮಾಡುತ್ತಾ ಲಿಪ್ ಲಾಕ್ ಮಾಡಿದ ನಿವೇದಿತಾ-ಚಂದನ್ ಶೆಟ್ಟಿ

ಅಂದಹಾಗೆ ಪೂಜಾ ಬ್ಯಾನರ್ಜಿ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ, ಪೂಜಾ ತನ್ನ 15 ನೇ ವಯಸ್ಸಿನಲ್ಲಿ ತಾನು ಪ್ರೀತಿಸಿದ ಹುಡುಗನಿಗೋಸ್ಕರ ಮನೆಬಿಟ್ಟು ಓಡಿಬಂದಿದ್ದರು. ಅಷ್ಟೇ ಅಲ್ಲದೆ, ಮದುವೆಗೂ ಮುನ್ನ ಗರ್ಭಿಣಿಯಾಗಿದ್ದರು ಎಂದು ಹೇಳಲಾಗುತ್ತದೆ.

ಪೂಜಾ ಬ್ಯಾನರ್ಜಿಗೆ ಆಗ 14 ರಿಂದ 19 ವರ್ಷ ತುಂಬಾ ನಿರ್ಣಾಯಕವಾಗಿತ್ತು. ಏಕೆಂದರೆ ಆ ಸಮಯದಲ್ಲಿ ಪೂಜಾ ಸಾಕಷ್ಟು ಪಶ್ಚಾತ್ತಾಪ ಪಡುವಂತಹ ತಪ್ಪುಗಳನ್ನು ಮಾಡಿದ್ದರು. ಅಂದು ಪೂಜಾ ಒಬ್ಬನನ್ನು ಹುಚ್ಚನಂತೆ ಪ್ರೀತಿಸುತ್ತಿದ್ದರಂತೆ. ಆತನ ಪ್ರೀತಿಗಾಗಿ ಮನೆಯಿಂದ ಓಡಿಹೋಗಲು ನಿರ್ಧರಿಸಿದರು. ಆದರೆ ಮನೆಬಿಟ್ಟು ಬಂದ ಸ್ವಲ್ಪ ಹೊತ್ತಿನಲ್ಲೇ ತಾನು ದೊಡ್ಡ ತಪ್ಪು ಮಾಡಿದ್ದೇನೆಂದು ಅರಿವಾಯಿತು. ಯೋಚಿಸದೆ ತೆಗೆದುಕೊಂಡ ಈ ಹೆಜ್ಜೆ ಪೂಜಾಳನ್ನು ಅವರ ಕುಟುಂಬದಿಂದ ಬೇರ್ಪಡಿಸಿತು.

2013 ರಲ್ಲಿ ಪೂಜಾ ಬ್ಯಾನರ್ಜಿ ವಿಚ್ಛೇದನ ಪಡೆದರು. ವಿಚ್ಛೇದನದ ನಂತರ ಪೂಜಾ ತನ್ನ ಕೆಲಸದಲ್ಲಿ ಬ್ಯುಸಿಯಾದರು. ಈ ಸಮಯದಲ್ಲಿ, ಪೂಜಾಳ ಮನದಲ್ಲಿ ಮತ್ತೊಮ್ಮೆ ಪ್ರೀತಿ ಮೂಡಿತು. ‘ತುಜ್ ಸಂಗ್ ಪ್ರೀತ್ ಲಗೈ ಸಜ್ನಾ’ ಎಂಬ ಟಿವಿ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಕುನಾಲ್  ಮತ್ತು ಪೂಜಾ ಬ್ಯಾನರ್ಜಿ ಪರಸ್ಪರ ಬಹಳ ಹತ್ತಿರವಾದರು. ಇದರ ನಂತರ ಇಬ್ಬರೂ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಬಳಿಕ 2020 ರಲ್ಲಿ ಪೂಜಾ ಮತ್ತು ಕುನಾಲ್ ವಿವಾಹವಾದರು.

ಇದನ್ನೂ ಓದಿ: 35KM ಮೈಲೇಜ್ ನೀಡುವ 5 ಸೀಟರ್ ಕಾರು: ಅದ್ಭುತ ವೈಶಿಷ್ಟ್ಯದ ಜೊತೆ ಅತೀ ಕಡಿಮೆ ಬೆಲೆಯಲ್ಲಿ ಲಭ್ಯ- ಖರೀದಿಗೆ ಇದು ಬೆಸ್ಟ್ ಟೈಂ

ಮದುವೆಯಾದ 6 ತಿಂಗಳೊಳಗೆ ಪೂಜಾ ಬ್ಯಾನರ್ಜಿ ಮಗುವಿಗೆ ಜನ್ಮ ನೀಡಿದ್ದರು. ಇದರಿಂದ ಮದುವೆಗೂ ಮುನ್ನವೇ ಪೂಜಾ ಗರ್ಭಿಣಿಯಾಗಿರುವುದು ಸ್ಪಷ್ಟವಾಯಿತು. ಪೂಜಾ ಬಂಗಾಳಿ ಮತ್ತು ದಕ್ಷಿಣ ಭಾರತ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News