ದೆಹಲಿ: ಹಿರಿಯ ವಕೀಲನಿಂದ ಕೋರ್ಟಿನಲ್ಲೇ ವಕೀಲೆ ಮೇಲೆ ಅತ್ಯಾಚಾರ

    

Last Updated : Jul 15, 2018, 07:01 PM IST
ದೆಹಲಿ: ಹಿರಿಯ ವಕೀಲನಿಂದ ಕೋರ್ಟಿನಲ್ಲೇ ವಕೀಲೆ ಮೇಲೆ ಅತ್ಯಾಚಾರ title=

ನವದೆಹಲಿ: ದಕ್ಷಿಣ ದೆಹಲಿಯ ಸಾಕೇಟ್ ನ್ಯಾಯಾಲಯದಲ್ಲಿ ಮಹಿಳಾ ವಕೀಲೆಯ ಮೇಲೆ ಹಿರಿಯ ವಕೀಲನೋಬ್ಬನು ಅತ್ಯಾಚಾರ ಮಾಡಿದ ಘಟನೆ ಭಾನುವಾರದಂದು ನಡೆದಿದೆ.

ಆ ಸಂತ್ರಸ್ತ ಮಹಿಳಾ ವಕೀಲೆಯು ತಾನು ಕೆಲಸ ಮಾಡುತ್ತಿದ್ದ ಚೇಂಬರ್ ನಲ್ಲಿಯೇ ಆ ಹಿರಿಯ ವಕೀಲನು ಲೈಂಗಿಕವಾಗಿ ಅತ್ಯಾಚಾರ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.ಜುಲೈ 14-15 ರ ಮಧ್ಯದ ರಾತ್ರಿ, ಆ ಮಹಿಳಾ ವಕೀಲೆಯು ಪೊಲೀಸರನ್ನು ಕರೆ ಮಾಡಿ ತನಗೆ ಹಿರಿಯ ವಕೀಲನಿಂದಾದ ಲೈಂಗಿಕ ಅತ್ಯಾಚಾರದ ದೂರು ನೀಡಿದ್ದಾಳೆ ಎಂದು ಡಿಸಿಪಿ ತಿಳಿಸಿದ್ದಾರೆ.

ಪೋಲಿಸರು ಈಗಾಗಲೇ ವಕೀಲೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ ಅಲ್ಲದೆ ಆ ವಕೀಲೆಯನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.ಈ ಕೃತ್ಯ ನಡೆದ ಕೊಠಡಿಯನ್ನು ಬಂದ್  ಮಾಡಲಾಗಿದ್ದು ಮತ್ತು ನ್ಯಾಯ ವಿಜ್ಞಾನದ ಪ್ರಯೋಗಾಲಯ ಮತ್ತು ಅಪರಾಧ ತಂಡವು ಅದನ್ನು ಪರಿಶೀಲಿಸಿದೆ ಎಂದು ಡಿಸಿಪಿ ರೋಮಿಲ್ ಬಾನಿಯಾ ತಿಳಿಸಿದರು.

ಪ್ರಕರಣವನ್ನು ಪೊಲೀಸರು ದಾಖಲಿಸಿದ್ದು, 50ರ ಹರೆಯದ ಆರೋಪಿಯನ್ನು ಅವರು ದಕ್ಷಿಣ ದೆಹಲಿಯ ಸಂಗಮ್ ವಿಹಾರ್ನಿಂದ ಬಂಧಿಸಿ, ಸಾಕೇತ್ ನ್ಯಾಯಾಲಯಕ್ಕೆ ಮುಂದೆ ಹಾಜರುಪಡಿಸಿದ್ದಾರೆ ಎಂದು ತಿಳಿದುಬಂದಿದೆ.
 

Trending News