ಋತುವಿನ ಅತಿ ಶೀತದ ದಿನ; ದೆಹಲಿಯಲ್ಲಿ ಈ ದಿನದ ತಾಪಮಾನ 3.6 ಡಿಗ್ರಿ ಸೆಲ್ಸಿಯಸ್

"ಕನಿಷ್ಠ ತಾಪಮಾನವು ಋತುವಿನ ಸರಾಸರಿ ತಾಪಮಾನಕ್ಕಿಂತ ನಾಲ್ಕು ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ಇದು ಈ ವರ್ಷ ಅತಿ ಕಡಿಮೆ ತಾಪಮಾನವಾಗಿದೆ" ಎಂದು ಹವಾಮಾನ ಇಲಾಖೆ ಹೇಳಿದೆ.

Last Updated : Dec 26, 2018, 01:02 PM IST
ಋತುವಿನ ಅತಿ ಶೀತದ ದಿನ; ದೆಹಲಿಯಲ್ಲಿ ಈ ದಿನದ ತಾಪಮಾನ 3.6 ಡಿಗ್ರಿ ಸೆಲ್ಸಿಯಸ್ title=

ನವದೆಹಲಿ: ದೆಹಲಿಯಲ್ಲಿ ಬುಧವಾರ ಶೀತದೊಂದಿಗೆ ಪ್ರಾರಂಭವಾಯಿತು. ತಾಪಮಾನ 3.6 ಡಿಗ್ರಿ ಸೆಲ್ಸಿಯಸ್ ಗೆ ಕುಸಿದಿದ್ದು, ಇದು ಈ ಚಳಿಗಾಲದಲ್ಲಿ ಅತಿ ಕಡಿಮೆ ತಾಪಮಾನವಾಗಿದೆ.

"ಕನಿಷ್ಠ ತಾಪಮಾನವು ಋತುವಿನ ಸರಾಸರಿ ತಾಪಮಾನಕ್ಕಿಂತ ನಾಲ್ಕು ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ಇದು ಈ ವರ್ಷ ಅತಿ ಕಡಿಮೆ ತಾಪಮಾನವಾಗಿದೆ" ಎಂದು ಹವಾಮಾನ ಇಲಾಖೆ ಹೇಳಿದೆ.

ಕಳೆದ ಕೆಲವು ದಿನಗಳಿಂದ ರಾಷ್ಟ್ರೀಯ ರಾಜಧಾನಿಯಲ್ಲಿ ಚಳಿ ಹೆಚ್ಚಾಗಿದೆ.  ಡಿಸೆಂಬರ್ 23 ರಂದು ಕನಿಷ್ಠ ತಾಪಮಾನವು 3.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಡಿಸೆಂಬರ್ 28 ರ ನಂತರ ತಾಪಮಾನವು 3.0 ಡಿಗ್ರಿ ಸೆಲ್ಸಿಯಸ್ ಗೆ ಇಳಿಯುವ ನಿರೀಕ್ಷೆಯಿದೆ.

ದೆಹಲಿಯಲ್ಲಿ ಬುಧವಾರ ದಿನವಿಡೀ ಸ್ಪಷ್ಟವಾದ ಆಕಾಶವಿರುತ್ತದೆ ಮತ್ತು ಗರಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ ಎಂದು ಹವಾಮಾನ ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ.

Trending News