Oxygen Supply ತಡೆ ಹಿಡಿಯುವವರನ್ನು ಗಲ್ಲಿಗೇರಿಸಲಾಗುವುದು: ಹೈಕೋರ್ಟ್

Delhi Oxygen Crisis - ರಾಷ್ಟ್ರ ರಾಜಧಾನಿ ದೆಹಲಿಯ ಜನರಿಗೆ ಆಕ್ಸಿಜನ್ ದೊರೆಯುತ್ತಿಲ್ಲ ಎಂಬ ವಾದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ದೆಹಲಿ ಹೈಕೋರ್ಟ್ (Delhi High Court) "ಇದೊಂದು ಅಪರಾಧಿ ಕೃತ್ಯವಾಗಿದ್ದು, ಒಂದು ವೇಳೆ ಯಾರಾದರು ಆಕ್ಸಿಜನ್ ಸಪ್ಲೈ (Oxygen Supply) ತಡೆದರೆ ಅವರನ್ನು ಯಾವುದೇ ಪರಿಸ್ಥಿತಿಯಲ್ಲಿ ಬಿಡಲಾಗುವುದಿಲ್ಲ ಮತ್ತು ಅವರನ್ನು ಗಲ್ಲಿಗೇರಿಸಲಾಗುವುದು ಎಂದಿದೆ. ಆಕ್ಸಿಜನ್ ಪೂರೈಕೆಗೆ ಸಂಬಂಧಿಸಿದಂತೆ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಕುರಿತು ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.  

Written by - Nitin Tabib | Last Updated : Apr 24, 2021, 03:15 PM IST
  • ಆಕ್ಸಿಜನ್ ಕೊರತೆಯ ಕುರಿತು ತೀಕ್ಷ ಪ್ರತಿಕ್ರಿಯೆ ನೀಡಿದ ದೆಹಲಿ ಹೈ ಕೋರ್ಟ್,
  • ಸಪ್ಲೈ ತಡೆಹಿಡಿಯುವವರನ್ನು ಗಲ್ಲಿಗೇರಿಸಲಾಗುವುದು ಎಂದ ನ್ಯಾಯಪೀಠ.
  • ಮಹಾರಾಜಾ ಅಗ್ರಸೇನ್ ಆಸ್ಪತ್ರೆಯವತಿಯಿಂದ ದಾಖಲಿಸಲಾಗಿತ್ತು ಈ ಅರ್ಜಿ.
Oxygen Supply ತಡೆ ಹಿಡಿಯುವವರನ್ನು ಗಲ್ಲಿಗೇರಿಸಲಾಗುವುದು: ಹೈಕೋರ್ಟ್  title=
Oxygen Crisis In Delhi (File Photo-Delhi HC)

ನವದೆಹಲಿ: Delhi Oxygen Crisis - ದೆಹಲಿಯಲ್ಲಿ ಆಕ್ಸಿಜನ್ ಕ್ರೈಸಿಸ್ ಪ್ರಕರಣದ ಕುರಿತಾದ ವಿಚಾರಣೆಯ ವೇಳೆ ದೆಹಲಿ ಉಚ್ಛನ್ಯಾಯಾಲಯ ದೆಹಲಿಯಲ್ಲಿನ ಆಸ್ಪತ್ರೆಗಳಲ್ಲಿನ ಆಕ್ಸಿಜನ್ ಕೊರತೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.  ಈ ಕುರಿತಾದ ಅರ್ಜಿಯ ವಿಚಾರಣೆ ವೇಳೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ನ್ಯಾಯಾಲಯ ಆಕ್ಸಿಜನ್ ಪೂರೈಕೆಯನ್ನು ಯಾರಾದರು ತಡೆಯಲು ಪ್ರಯತ್ನಿಸಿದರೆ ಅವರನ್ನು ಸುಮ್ಮನೆ ಬಿಡಲಾಗುವುದಿಲ್ಲ. ಅವರನ್ನು ಗಲ್ಲಿಗೇರಿಸಲಾಗುವುದು ಎಂದಿದೆ. ಜಸ್ಟಿಸ್ ವಿಪಿನ್ ಸಾಂಘಿ ಹಾಗೂ ಜಸ್ಟಿಸ್ ರೇಖಾ ಪಲ್ಲಿ ಅವರನ್ನೊಳಗೊಂಡ ಪೀಠ, ಗಂಭೀರ ರೂಪದಲ್ಲಿ ಅನಾರೋಗ್ಯಕ್ಕೆ ಒಳಗಾದ ಕೊವಿಡ್ ರೋಗಿಗಳ ಚಿಕಿತ್ಸೆಯಲ್ಲಾಗುತ್ತಿರುವ ಆಕ್ಸಿಜನ್ ಕೊರತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯ ವೇಳೆ ಈ ಖಾರ ಪ್ರತಿಕ್ರಿಯೆ ನೀಡಿದೆ. ಮಹಾರಾಜಾ ಅಗ್ರಸೇನ್ ಆಸ್ಪತ್ರೆಯವತಿಯಿಂದ ಈ ಅರ್ಜಿಯನ್ನು ದಾಖಲಿಸಲಾಗಿದೆ.

ಯಾರೇ ಆಗಲಿ ಅವರಿಗೆ ಸುಮ್ಮನೆ ಬಿಡಲಾಗುವುದಿಲ್ಲ
ದೆಹಲಿಯ ಜನರಿಗೆ ಆಗುತ್ತಿರುವ ಆಕ್ಸಿಜನ್ ಕೊರತೆಯ ಹಿನ್ನೆಲೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ನ್ಯಾಯಪೀಠ,  " ಇದೊಂದು ಅಪರಾಧಿ ಕೃತ್ಯವಾಗಿದೆ. ಯಾರೇ ಆಗಲಿ ಆಕ್ಸಿಜನ್ ಸಪ್ಲೈ ಅನ್ನು ತಡೆಹಿಡಿಯಲು ಪ್ರಯತ್ನಿಸಿದರೆ ಅವರನ್ನು ಸುಮ್ಮನೆ ಬಿಡಲಾಗುವುದಿಲ್ಲ. ಅವರನ್ನು ಗಲ್ಲಿಗೇರಿಸಲಾಗುವುದು. ಆಕ್ಸಿಜನ್ ಪೂರೈಕೆಗೆ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಕೂಡ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಈ ಪ್ರಕರಣದಲ್ಲಿ ನಾವು ಯಾರನ್ನೂ ಕೂಡ ಸುಮ್ಮನೆ ಬಿಡುವುದಿಲ್ಲ. ಕೆಳಮಟ್ಟದ ಅಧಿಕಾರಿಯೇ ಆಗಲಿ ಅಥವಾ ಮೇಲದರ್ಜೆಯ ಅಧಿಕಾರಿಯೇ ಆಗಿರಲಿ ಅವರನ್ನು ಸುಮ್ಮನೆ ಬಿಡಲಾಗುವುದಿಲ್ಲ. ಆಕ್ಸಿಜನ್ ಪೂರೈಕೆಗೆ ಕೇಂದ್ರ ಸರ್ಕಾರ ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಏಕೆಂದರೆ ಜೀವನ ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ" ಎಂದಿದೆ.

ಆರೋಪಿಗಳ ಬಗ್ಗೆ ವರದಿ ಕೇಳಿದ ನ್ಯಾಯಪೀಠ
ಅರ್ಜಿಯ ವಿಚಾರಣೆಯ ವೇಳೆ ದೆಹಲಿ ಸರ್ಕಾರಕ್ಕೆ ಕೂಡ ಸೂಚನೆ ನೀಡಿರುವ ನ್ಯಾಯಾಲಯ, ದೆಹಲಿಯಲ್ಲಿ ಆಕ್ಸಿಜನ್ (Oxygen) ಪೂರೈಕೆಯನ್ನು ನಿಲ್ಲಿಸುತ್ತಿರುವವರ ಬಗ್ಗೆ ವರದಿ ನೀಡಲು ಸೂಚಿಸಿದೆ. 'ಆ ವ್ಯಕ್ತಿಯನ್ನು ನಾವು ಗಲ್ಲಿಗೇರಿಸುತ್ತೇವೆ. ಯಾರನ್ನು ಕೂಡ ಬಿಡುವುದಿಲ್ಲ. ದೆಹಲಿ ಸರ್ಕಾರದ ಸ್ಥಳೀಯ ಆಡಳಿತದ ಇಂತಹ ಅಧಿಕಾರಿಗಳ ಕುರಿತು ಕೇಂದ್ರ ಸರ್ಕಾರಕ್ಕೂ ಕೂಡ ಮಾಹಿತಿ ನೀಡಿ ಮಾತು ಅವರ ವಿರುದ್ಧ ಕಠಿಣ ಕ್ರಮ ಜರುಗಿಸಿ ಎಂದು ನ್ಯಾಯಪೀಠ (High Corut) ಆಕ್ರೋಶ ಹೊರಹಾಕಿದೆ.

ಇದನ್ನೂ ಓದಿ - Covid-19 Crisis: ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 773 ಜನರು ಸಾವು, 66 ಸಾವಿರಕ್ಕೂ ಅಧಿಕ ಪ್ರಕರಣ ದಾಖಲು

ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ದೆಹಲಿ ಹೈಕೋರ್ಟ್
ದೆಹಲಿಯ ಜನರಿಗೆ ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ದೆಹಲಿಯಲ್ಲಿ ಆಕ್ಸಿಜನ್ (Oxygen Crisis) ಪ್ಲಾಂಟ್ ಏಕೆ ಪ್ರಾರಂಭಿಸುತ್ತಿಲ್ಲ ಎಂದು ನ್ಯಾಯಪೀಠ ಈ ವೇಳೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಇನ್ನೊಂದೆಡೆ ದೆಹಲಿಗೆ ಎಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಸಿಗಲಿದೆ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಈ ವೇಳೆ ಮಾತನಾಡಿರುವ ಜಸ್ಟಿಸ್ ವಿಪಿನ್ ಸಾಂಘಿ, "ನಾವು ಕಳೆದ ಹಲವು ದಿನಗಳಿಂದ ವಿಚಾರಣೆ ನಡೆಸುತ್ತಿದ್ದೇವೆ, ನಿತ್ಯ ಅದೇ ವಾದಗಳು ಕೇಳಿಬರುತ್ತಿವೆ. ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಚಾನೆಲ್ ಗಳು ಹಾಗೂ ವೃತ್ತಪತ್ರಿಕೆಗಳಲ್ಲಿ ವರದಿಯಾಗುತ್ತಿವೆ. ಹೀಗಾಗಿ ದೆಹಲಿಗೆ ಎಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಸಿಗಲಿದೆ ಮತ್ತು ಎಲ್ಲಿಂದ ಬರಲಿದೆ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು" ಎಂದಿದ್ದಾರೆ.

ಇದನ್ನೂ ಓದಿ-Oxygen Tanker: ಸಿಂಗಾಪುರ ಮತ್ತೆ UAE ಯಿಂದ ಭಾರತಕ್ಕೆ ಆಕ್ಸಿಜನ್ ಆಮದಿಗೆ ಸರ್ಕಾರ ಸಿದ್ಧತೆ!

"ಕಳೆದ ವಿಚಾರಣೆಯ ವೇಳೆ (ಏಪ್ರಿಲ್ 21ರಂದು ) ದೆಹಲಿಯಲ್ಲಿ ಪ್ರತಿನಿತ್ಯ 480 ಮೆಟ್ರಿಕ್ ಟನ್ ಆಕ್ಸಿಜನ ಬರಲಿದೆ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಇದು ಯಾವಾಗ ಬರಲಿದೆ? ಎಲ್ಲಿಂದ ಬರಲಿದೆ? ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು " ಎಂದು ನ್ಯಾಯಾಲಯ ಕಿಡಿಕಾರಿದೆ. ಇನ್ನೊಂದೆಡೆ ಅರ್ಜಿಯ ವಿಚಾರಣೆಯ ವೇಳೆ ತನ್ನ ವಾದ ಮಂಡಿಸಿರುವ ದೆಹಲಿ ಸರ್ಕಾರ ಕಳೆದ ಹಲವು ದಿನಗಳಿಂದ ರಾಜ್ಯ ಸರ್ಕಾರಕ್ಕೆ ನಿತ್ಯ 380 ಮೆಟ್ರಿಕ್ ಟನ್ ಆಕ್ಸಿಜನ್ (Delhi Oxygen Latest News) ಸಿಗುತ್ತಿತ್ತು ಮತ್ತು ಶುಕ್ರವಾರ ಸರ್ಕಾರಕ್ಕೆ ಕೇವಲ 300 ಮೆಟ್ರಿಕ್ ಟನ್ ಆಕ್ಷಿಜನ್ ಮಾತ್ರ ದೊರೆತಿದೆ ಎಂಬ ಮಾಹಿತಿ ನೀಡಿದೆ.

ಇದನ್ನೂ ಓದಿ-  Zydus Cadila Virafin - ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಿಕ್ತು ಮತ್ತೊಂದು ಅಸ್ತ್ರ, Zydus ಔಷಧಿಗೆ DCGI ಅನುಮತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News