ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜೂನ್ 14 ರಂದು ಬೆಳಿಗ್ಗೆ 5 ಗಂಟೆಯವರೆಗೆ ಲಾಕ್‌ಡೌನ್ (Lockdown) ವಿಸ್ತರಿಸುವುದಾಗಿ ಘೋಷಿಸಿದ್ದಾರೆ. ಆದರೆ ಲಾಕ್‌ಡೌನ್ ನಿರ್ಬಂಧಗಳಲ್ಲಿ ಅನೇಕ ವಿನಾಯಿತಿ ನೀಡಲಾಗಿದ್ದು ಎಲ್ಲಾ ಮಾರುಕಟ್ಟೆಗಳು (ಸಾಪ್ತಾಹಿಕ ಮಾರುಕಟ್ಟೆಗಳನ್ನು ಹೊರತುಪಡಿಸಿ), ಮಾಲ್‌ಗಳು ತೆರೆಯಲಿವೆ. ಬೆಸ-ಸಮತೆಯ ಆಧಾರದ ಮೇಲೆ ಮಾರುಕಟ್ಟೆಗಳು ತೆರೆಯಲ್ಪಡುತ್ತವೆ, ಅಂದರೆ, ದಿನ ಬಿಟ್ಟು ದಿನ ಅಂಗಡಿಯನ್ನು ತೆರೆಯಲು ಅನುಮತಿಸಲಾಗುತ್ತದೆ. ಅಂಗಡಿಯವರು ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ತಮ್ಮ ಅಂಗಡಿಗಳನ್ನು ತೆರೆಯಲು ಸಾಧ್ಯವಾಗುತ್ತದೆ. ಅದೇ ಸಮಯದಲ್ಲಿ, ಮೆಟ್ರೊದ ಕಾರ್ಯಾಚರಣೆಯನ್ನು 50 ಪ್ರತಿಶತ ಸಾಮರ್ಥ್ಯದೊಂದಿಗೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಕೋವಿಡ್ -19 (Covid 19) ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಜೂನ್ 7 ರಿಂದ ಅನ್ಲಾಕ್ -2 ಪ್ರಾರಂಭವಾಗಲಿದೆ. ಇದರೊಂದಿಗೆ ಸೋಮವಾರದಿಂದ ಷರತ್ತುಗಳ ಆಧಾರದ ಮೇಲೆ ಖಾಸಗಿ ಕಚೇರಿಗಳನ್ನು ತೆರೆಯಲು ಆದೇಶಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಹೇಳಿದರು. ವಾಸ್ತವವಾಗಿ ಕಳೆದ ವಾರ, ದೆಹಲಿ ಸರ್ಕಾರವು ರಾಜ್ಯದಲ್ಲಿ ಉತ್ಪಾದನೆ ಮತ್ತು ನಿರ್ಮಾಣ ಚಟುವಟಿಕೆಗಳಿಗೆ ಅನುಮತಿ ನೀಡಿ, ಅನ್ಲಾಕ್ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ಜೂನ್ 7 ರಿಂದ ಇವುಗಳಿಗೆ ವಿನಾಯಿತಿ:
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಆರ್ಥಿಕತೆಯನ್ನು ಮತ್ತೆ ಹಾದಿಗೆ ತರುವುದು ಅಗತ್ಯವಾಗಿದೆ ಎಂದು ಹೇಳಿದರು. ದೆಹಲಿಯಲ್ಲಿ ಕರೋನಾ ಸೋಂಕಿನ ಪ್ರಮಾಣ ಈಗ ಶೇಕಡಾ ಒಂದಕ್ಕಿಂತ ಕಡಿಮೆಯಾಗಿದೆ. ಅಂದರೆ, ಪರಿಸ್ಥಿತಿ ಸಾಕಷ್ಟು ನಿಯಂತ್ರಣದಲ್ಲಿದೆ. ಆದರೆ ಕರೋನಾವೈರಸ್ (Coronavirus) ಬಗ್ಗೆ ನಾವು ಮೈಮರೆಯುವಂತಿಲ್ಲ. ಹಾಗಾಗಿ ಹಂತ-ಹಂತವಾಗಿ ಲಾಕ್‌ಡೌನ್‌ನಿಂದ ವಿಶ್ರಾಂತಿ ನೀಡಲಾಗುವುದು. ಇದಲ್ಲದೆ, ಇ-ಕಾಮರ್ಸ್ ಮೂಲಕವೂ ಪೂರೈಕೆ ಮುಂದುವರಿಯುತ್ತದೆ ಎಂದು ಹೇಳಿದರು.
ಇದನ್ನೂ ಓದಿ - Corona Third Wave: ಈ ತಿಂಗಳಿನಿಂದ ಆರಂಭವಾಗಲಿದೆಯಂತೆ ಕರೋನ ಮೂರನೇ ತರಂಗ
ಮೂರನೇ ತರಂಗವನ್ನು ಎದುರಿಸಲು ಸಿದ್ಧತೆ:
ಕರೋನಾ ಸಾಂಕ್ರಾಮಿಕ ರೋಗದ ಮೂರನೇ ತರಂಗವನ್ನು ಎದುರಿಸಲು ಸರ್ಕಾರದ ಸಿದ್ಧತೆಗಳ ಬಗ್ಗೆಯೂ ವಿವರಣೆ ನೀಡಿದ ಸಿಎಂ ಅರವಿಂದ್ ಕೇಜ್ರಿವಾಲ್, ದೆಹಲಿ ಸರ್ಕಾರ ಕರೋನಾ ಮೂರನೇ ತರಂಗವನ್ನು (Corona Third Wave) ಎದುರಿಸಲು ಸಿದ್ಧತೆ ನಡೆಸುತ್ತಿದೆ. ಮೂರನೇ ತರಂಗದಲ್ಲಿ, ನಾವು ಕರೋನದ ಗರಿಷ್ಠ 37,000 ಪ್ರಕರಣ ದಾಖಲಾಗಬಹುದು ಎಂಬುದನ್ನು ಅಂದಾಜಿಸಿ ಸಿದ್ಧತೆಗಳಲ್ಲಿ ತೊಡಗಿದ್ದೇವೆ. ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಈ ಕುರಿತಂತೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಇದಕ್ಕಿಂತ ಹೆಚ್ಚಿನ ಪ್ರಕರಣಗಳು ದಾಖಲಾದರೂ ಯಾವುದೇ ತೊಂದರೆ ಇಲ್ಲದಂತೆ ನಾವು ಅವುಗಳನ್ನು ಸಹ ನಿಭಾಯಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಕ್ಕಳಿಗಾಗಿ ಕಾರ್ಯಪಡೆ:
ಕರೋನಾ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಮಕ್ಕಳಿಗಾಗಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ, ಎಷ್ಟು ಹಾಸಿಗೆಗಳು ಬೇಕಾಗಬಹುದು, ಜನರಿಗೆ ಎಲ್ಲಾ ಸೌಲಭ್ಯಗಳನ್ನು ಹೇಗೆ ಒದಗಿಸಲಾಗುವುದು, ಅದು ಅವರ ಜವಾಬ್ದಾರಿಯಾಗಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದರು. ಆಮ್ಲಜನಕಕ್ಕಾಗಿ 420 ಟನ್ ಆಮ್ಲಜನಕದ (Oxygen) ಸಂಗ್ರಹ ಸಾಮರ್ಥ್ಯವನ್ನು ಸಿದ್ಧಪಡಿಸಲಾಗುತ್ತಿದೆ. ಅದೇ ಸಮಯದಲ್ಲಿ, ಆಮ್ಲಜನಕ ಸ್ಥಾವರವನ್ನು ಸ್ಥಾಪಿಸಲು 25 ಟ್ಯಾಂಕ್‌ಗಳನ್ನು ಖರೀದಿಸಲಾಗುತ್ತಿದೆ ಎಂದವರು ಮಾಹಿತಿ ನೀಡಿದರು.
ಇದನ್ನೂ ಓದಿ - Sputnik V ಲಸಿಕೆ ತಯಾರಿಸಲು ಪ್ರಾಥಮಿಕ ಅನುಮೋದನೆ ಪಡೆದ Serum Institute
ಅದೇ ಸಮಯದಲ್ಲಿ, ಔಷಧಿಗಳ ಬಗ್ಗೆ ವೈದ್ಯರು ಮತ್ತು ತಜ್ಞರ ತಂಡವನ್ನು ರಚಿಸಲಾಗುವುದು. ಯಾವ ಔಷಧಿ ಪ್ರಯೋಜನಕಾರಿ, ಯಾವ ಔಷಧಿ ಅಗತ್ಯ ಎಂದು ತಂಡವು ತಿಳಿಸುತ್ತದೆ. ಆ ತಂಡವು ಔಷಧಿಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತದೆ. ಅಗತ್ಯ ಔಷಧಿಗಳ ಬಫರ್ ಸ್ಟಾಕ್ ತಯಾರಿಸಲಾಗುತ್ತದೆ ಎಂದವರು ವಿವರಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ