ದೆಹಲಿ ವೈದ್ಯನ ಆತ್ಮಹತ್ಯೆ ಪ್ರಕರಣ : ಎಎಪಿ ಶಾಸಕ ಪ್ರಕಾಶ್ ಜಾರ್ವಾಲ್ ಬಂಧನ

ಕಳೆದ ತಿಂಗಳು ಆತ್ಮಹತ್ಯೆ ಮಾಡಿಕೊಂಡ ವೈದ್ಯನು ದೆಹಲಿಯ ಆಡಳಿತಾರೂ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕನ ಹೆಸರನ್ನು ಆತ್ಮಹತ್ಯೆ ಟಿಪ್ಪಣಿಯಲ್ಲಿ ಉಲ್ಲೇಖಿಸಿದ ಹಿನ್ನಲೆಯಲ್ಲಿ ಈಗ ಎಎಪಿ ಶಾಸಕ ಪ್ರಕಾಶ್ ಜಾರ್ವಾಲ್ ರನ್ನು ಬಂಧಿಸಲಾಗಿದೆ.

Last Updated : May 9, 2020, 09:00 PM IST
 ದೆಹಲಿ ವೈದ್ಯನ ಆತ್ಮಹತ್ಯೆ ಪ್ರಕರಣ : ಎಎಪಿ ಶಾಸಕ ಪ್ರಕಾಶ್ ಜಾರ್ವಾಲ್ ಬಂಧನ  title=

ನವದೆಹಲಿ: ಕಳೆದ ತಿಂಗಳು ಆತ್ಮಹತ್ಯೆ ಮಾಡಿಕೊಂಡ ವೈದ್ಯನು ದೆಹಲಿಯ ಆಡಳಿತಾರೂ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕನ ಹೆಸರನ್ನು ಆತ್ಮಹತ್ಯೆ ಟಿಪ್ಪಣಿಯಲ್ಲಿ ಉಲ್ಲೇಖಿಸಿದ ಹಿನ್ನಲೆಯಲ್ಲಿ ಈಗ ಎಎಪಿ ಶಾಸಕ ಪ್ರಕಾಶ್ ಜಾರ್ವಾಲ್ ರನ್ನು ಬಂಧಿಸಲಾಗಿದೆ.

ವೈದ್ಯರ ಮಗನಿಂದ ಪೊಲೀಸ್ ಪ್ರಕರಣ ದಾಖಲಿಸಿದ ನಂತರ ಎಎಪಿ ಶಾಸಕ ಪ್ರಕಾಶ್ ಜಾರ್ವಾಲ್ ಬಂಧನದಿಂದ ರಕ್ಷಣೆಗಾಗಿ ಅರ್ಜಿ ಸಲ್ಲಿಸಿದ್ದರು. ಶಾಸಕರ ಸಹಾಯಕ ಕಪಿಲ್ ನಗರ ಕೂಡ ಪೊಲೀಸ್ ವಶದಲ್ಲಿದ್ದಾರೆ.

ವೈದ್ಯನ ಆತ್ಮಹತ್ಯೆ ಟಿಪ್ಪಣಿಯಲ್ಲಿ ಅವರ ಹೆಸರು ಕಂಡುಬಂದಾಗಿನಿಂದ ಜಾರ್ವಾಲ್ ಕಾಣೆಯಾಗಿದ್ದರು. ವಿಚಾರಣೆಗೆ ಹಾಜರಾಗಲು ಅವರು ಎರಡು ಪೊಲೀಸ್ ಸಮನ್ಸ್ ಅನ್ನುತಪ್ಪಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.ಗುರುವಾರ, ದೆಹಲಿ ಪೊಲೀಸರು ಶ್ರೀ ಜಾರ್ವಾಲ್ ಅವರ ತಂದೆ ಮತ್ತು ಸಹೋದರರನ್ನು ವಿಚಾರಣೆಗೆ ಒಳಪಡಿಸಿದ್ದರು

52 ವರ್ಷದ ವೈದ್ಯರೊಬ್ಬರು ಏಪ್ರಿಲ್ 18 ರಂದು ದಕ್ಷಿಣ ದೆಹಲಿಯ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಟಿಪ್ಪಣಿಯಲ್ಲಿ, ಎಎಪಿ ಶಾಸಕರು ತನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ತಂದೆ ಕ್ಲಿನಿಕ್ ನಡೆಸುತ್ತಿದ್ದರು ಮತ್ತು 2007 ರಿಂದ ದೆಹಲಿ ಜಲ ಮಂಡಳಿಯೊಂದಿಗೆ ನೀರು ಸರಬರಾಜು ಮಾಡುವ ವ್ಯವಹಾರದಲ್ಲಿದ್ದರು ಎಂದು ವೈದ್ಯರ ಮಗ ಪೊಲೀಸರಿಗೆ ತಿಳಿಸಿದ್ದಾನೆ.

ಇನ್ನೊಂದೆಡೆಗೆ ಜಾರ್ವಾಲ್ ಅವರು ನಿರಪರಾಧಿ ಮತ್ತು ಯಾವುದೇ ತನಿಖೆಯನ್ನು ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ. ಕಳೆದ 10 ತಿಂಗಳಲ್ಲಿ ತಾನು ವೈದ್ಯರೊಂದಿಗೆ ಮಾತನಾಡಲಿಲ್ಲ ಎಂದು ಹೇಳಿಕೊಂಡಿದ್ದರು.

'ವಾಟರ್ ಟ್ಯಾಂಕರ್‌ಗಳಲ್ಲಿ ವ್ಯವಹಾರ ನಡೆಸುತ್ತಿದ್ದ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮತ್ತು ಅವರ ಆತ್ಮಹತ್ಯೆ ಟಿಪ್ಪಣಿಯಲ್ಲಿ ನನ್ನ ಹೆಸರನ್ನು ಉಲ್ಲೇಖಿಸಿದ್ದಾರೆ ಎಂದು ನಾನು ಮಾಧ್ಯಮಗಳ ಮೂಲಕ ಈ ಮಾಹಿತಿಯನ್ನು ಸ್ವೀಕರಿಸಿದ್ದೇನೆ. ನಾನು ನಿರಪರಾಧಿ ಎಂದು ಹೇಳಲು ಬಯಸುತ್ತೇನೆ. ನಾನು ಭೇಟಿ ಮಾಡಿಲ್ಲ ಎಂದು ಅವರು ಈ ಹಿಂದೆ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದರು.

ಜಾರ್ವಾಲ್ ಅವರು 2017 ರಲ್ಲಿ "ಟ್ಯಾಂಕರ್ ಮಾಫಿಯಾ" ದಲ್ಲಿ ಸುದ್ದಿ ವಾಹಿನಿಗಳು ಮಾಡಿದ ಕುಟುಕಿನಲ್ಲಿ ವೈದ್ಯರ ಹೆಸರನ್ನು ದಾಖಲಿಸಲಾಗಿದೆ, ನಂತರ ಅವರ ವಾಹನಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಹೇಳಿದರು.

'ಈ ಹಿಂದೆ ನನ್ನನ್ನು ಬಲೆಗೆ ಬೀಳಿಸುವ ಪ್ರಯತ್ನಗಳು ನಡೆದಿವೆ ಎಂದು ಮಾತ್ರ ನಾನು ಹೇಳಲು ಬಯಸುತ್ತೇನೆ. ಈಗಲೂ ಇದೇ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಈ ಹಿಂದೆ ನಾನು ನಿರಪರಾಧಿ ಎಂದು ಸಾಬೀತುಪಡಿಸಿದಂತೆಯೇ, ನಾನು ಅದನ್ನು ಮತ್ತೆ ಮಾಡುತ್ತೇನೆ.ಯಾವುದೇ ರೀತಿಯ ತನಿಖೆಯಲ್ಲಿ ಪೊಲೀಸರೊಂದಿಗೆ ಸಹಕರಿಸಲು  ನಾನು ಸಿದ್ಧ  "ಎಂದು ಶಾಸಕರು ಎಎನ್‌ಐಗೆ ಹೇಳಿದ್ದಾರೆ.

Trending News