ರಾಷ್ಟ್ರ ರಾಜಧಾನಿಯಲ್ಲಿ ಮುಂದುವರೆದ ಬಿಸಿಗಾಳಿ 'ರೆಡ್ ಅಲರ್ಟ್'

ದೇಶದೆಲ್ಲೆಡೆ ಬಿಸಿಲಿನ ತಾಪ ಮುಂದುವರೆದಿದ್ದು, ರಾಷ್ಟ್ರ ರಾಜಧಾನಿ ನವದೆಹಲಿ ಮತ್ತು ಎನ್ಸಿಆರ್ ನಲ್ಲಿ ಸೋಮವಾರ ಭಾರತೀಯ ಹವಾಮಾನ ಇಲಾಖೆ (ಐಎಂಡಿ) 'ರೆಡ್ ಅಲರ್ಟ್' ಘೋಷಿಸಿದೆ.

Last Updated : Jun 10, 2019, 06:06 PM IST
ರಾಷ್ಟ್ರ ರಾಜಧಾನಿಯಲ್ಲಿ ಮುಂದುವರೆದ ಬಿಸಿಗಾಳಿ 'ರೆಡ್ ಅಲರ್ಟ್' title=

ನವದೆಹಲಿ: ದೇಶದೆಲ್ಲೆಡೆ ಬಿಸಿಲಿನ ತಾಪ ಮುಂದುವರೆದಿದ್ದು, ರಾಷ್ಟ್ರ ರಾಜಧಾನಿ ನವದೆಹಲಿ ಮತ್ತು ಎನ್ಸಿಆರ್ ನಲ್ಲಿ ಸೋಮವಾರ ಭಾರತೀಯ ಹವಾಮಾನ ಇಲಾಖೆ (ಐಎಂಡಿ) 'ರೆಡ್ ಅಲರ್ಟ್' ಘೋಷಿಸಿದೆ.

ದೆಹಲಿಯಲ್ಲಿ ಗರಿಷ್ಠ ತಾಪಮಾನವು 46.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಸೋಮವಾರ ಮತ್ತೆ 45 ಡಿಗ್ರಿ ದಾಟುವ ನಿರೀಕ್ಷೆಯಿದೆ ಎಂದು ಐಎಂಡಿ ತಿಳಿಸಿದೆ.

ಪಶ್ಚಿಮ ಭಾಗದ ಕೆಲವು ಭಾಗಗಳಲ್ಲಿ ಬಿಸಿಗಾಳಿ ಮುಂದುವರೆಯಲಿದೆ. ಪೂರ್ವ ರಾಜಸ್ತಾನದ ಹಲವು ಭಾಗಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಲಿದೆ. ಮಧ್ಯಪ್ರದೇಶ, ಪಂಜಾಬ್, ಹರಿಯಾಣ ಮತ್ತು ದೆಹಲಿ, ಉತ್ತರಪ್ರದೇಶ ಮತ್ತು ವಿದರ್ಭದಲ್ಲಿ ತಾಪಮಾನ ಹೆಚ್ಚಾಗಲಿದೆ ಎಂದು ಸೋಮವಾರ ವಿಶೇಷ ಹವಾಮಾನ ಬುಲೆಟಿನ್ನಲ್ಲಿ ಐಎಂಡಿ ತಿಳಿಸಿದೆ.

ಕೆಂಪು ಎಚ್ಚರಿಕೆಯ ಗುರುತು 'ಕೆಂಪು ಅಲರ್ಟ್'ಗಿಂತ ಭಿನ್ನವಾಗಿದೆ. ಇದು 'ಟೇಕ್ ಆಕ್ಷನ್' ಅನ್ನು ಉಲ್ಲೇಖಿಸುತ್ತದೆ ಎಂದು ಐಎಂಡಿ ಸ್ಪಷ್ಟಪಡಿಸಿದೆ.

Trending News