ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 23 ವರ್ಷದ ಮಗಳನ್ನು ಅಪಹರಣ ಮಾಡುವುದಾಗಿ ಅನಾಮಧೇಯ ಇಮೇಲ್ ವೊಂದು ಸಿಎಂ ಕಚೇರಿ ಮೇಲ್ ಗೆ ಬಂದಿದೆ. ಈ ಹಿನ್ನಲೆಯಲ್ಲಿ ಅವರಿಗೆ ಈಗ ಭದ್ರತೆಯನ್ನು ಒದಗಿಸಲಾಗಿದೆ.
ಈ ವಿಚಾರವಾಗಿ ಆಮ್ ಆದ್ಮಿ ಪಕ್ಷದ ನಾಯಕ ಅಧಿಕೃತ ದೂರು ಸಲ್ಲಿಸಿದ ಬಳಿಕ ತನಿಖೆಯನ್ನು ಪ್ರಾರಂಭಿಸಲಾಯಿತು. ಇಮೇಲ್ ಕಳುಹಿಸಿದ ವ್ಯಕ್ತಿಯ ಗುರುತನ್ನು ಇನ್ನೂ ತಿಳಿದುಬಂದಿಲ್ಲ .
"ನಿಮ್ಮ ಮಗಳನ್ನು ನಾವು ಅಪಹರಿಸುತ್ತೇವೆ, ಅವಳನ್ನು ರಕ್ಷಿಸಲು ನೀವು ಏನು ಪ್ರಯತ್ನ ಮಾಡುತ್ತೀರಿ" ಎಂದು ಅಜ್ಞಾತ ವ್ಯಕ್ತಿಯೋಬ್ಬನು ಬುಧುವಾರದಂದು ಮುಖ್ಯಮಂತ್ರಿಯವರ ಅಧಿಕೃತ ಇಮೇಲ್ ವಿಳಾಸಕ್ಕೆ ಕಳುಹಿಸಿದ್ದಾನೆ.ಈಗ ವಿಚಾರವಾಗಿ ದೆಹಲಿ ಪೊಲೀಸರ ಸೈಬರ್ ಸೆಲ್ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.
ಈ ಬೆದರಿಕೆಯ ಹಿನ್ನಲೆಯಲ್ಲಿ ದೆಹಲಿ ಪೊಲೀಸರು ಈಗ ಸಿಎಂ ಕೇಜ್ರಿವಾಲ್ ಪುತ್ರಿಗೆ ಪಿಎಸ್ಒ ವನ್ನು ನಿಯೋಜಿಸಿದ್ದಾರೆ. ಕೇಜ್ರಿವಾಲ್ ಪುತ್ರಿ 2014 ರಲ್ಲಿ ಇಂಡಿಯನ್ ಐಐಟಿ ಪ್ರವೇಶ ಪರೀಕ್ಷೆಯನ್ನು ಪಾಸು ಮಾಡಿ ಸುದ್ದಿಯಾಗಿದ್ದಳು.ಈಗ ಅಲ್ಲಿ ಅವರು ಇಂಜಿನಿಯರಿಂಗ್ ಕೋರ್ಸ್ ಅಧ್ಯಯನ ಮಾಡುತ್ತಿದ್ದಾರೆ.